2019ನೇ ಸಾಲಿನಲ್ಲಿ ಬೈಯಪ್ಪನಹಳ್ಳಿ, ಪೊಲೀಸ್ ಠಾಣಾ ಸರಹದಿನಲ್ಲಿ ಎರಡು ಕನ್ನ ಕಳವು ಪುಕರಣ ದಾಖಲಾಗಿರುತ್ತದೆ. ಬೆಂಗಳೂರು ನಗರದ ವಿವಿಧ ಪ್ರದೇಶಗಳಲ್ಲಿ ಕನ್ನ ಕಳವು ಮಾಡಿದ ಅಂತರ್ ರಾಜ್ಯ ಆರೋಪಿತ ಆಸಾಮಿಯನ್ನು 2020ನೇ ಸಾಲಿನಲ್ಲಿ ಹೆಚ್.ಎಸ್.ಆರ್ ಲೇಔಟ್ ಪೊಲೀಸ್ ಠಾಣೆಯ ಕಳವು ಪ್ರಕರಣಕ್ಕೆ ಸಂಬಂದಿಸಿದಂತೆ ದಸ್ತಗಿರಿಯಾಗಿ ಕಳೆದ 02 ವರ್ಷಗಳಿಂದ ಜೈಲಿನಲ್ಲಿರುತ್ತಾನೆ. ಸದರಿ ಆರೋಪಿತನ ಬಗ್ಗೆ ಮಾಹಿತಿ ಕಲೆಹಾಕಿ, ಅಂತರ್ ರಾಜ್ಯ ಆರೋಪಿತನನ್ನು ಪೊಲೀಸ್ ಕಸ್ಮಡಿಗೆ ಪಡೆದು, ಆತನಿಂದ ಸುಮಾರು 29,00,000/- ರೂ. ಬೆಲೆ ಬಾಳುವ 512 ಗ್ರಾಂ ತೂಕದ ಚಿನ್ನಾ ಭರಣವನ್ನು ಅಮಾನತ್ತು ಪಡಿಸಿಕೊಂಡಿರುತ್ತಾರೆ.
ಆತನನ್ನು ಹೆಚ್ಚಿನ ತನಿಖೆಗೆ ಒಳಪಡಿಸಿದಾಗ, ಆರೋಪಿತನ ಎಲೆಕ್ಟ್ರಾನಿಕ್ ಇಂಜೀನಿಯರಿಂಗ್ ಬಿ.ಇ ವ್ಯಾಸಂಗ ಮಾಡಿ ನೋಕಿಯಾ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದು, ನೋಕಿಯಾ ಕಂಪನಿಯವರು 2019ನೇ ಸಾಲಿನಲ್ಲಿ ಕೆಲಸದಿಂದ ತೆಗೆದು ಹಾಕಿದ ನಂತರ ಯಾವುದೆ ಕೆಲಸವಿಲ್ಲದೇ ಇತರರೊಂದಿಗೆ ಸೇರಿಕೊಂಡು ಕನ್ನ ಕಳವು ಕೃತ್ಯಗಳನ್ನು ಮಾಡಿರುತ್ತೇನೆಂದು ಮಾಹಿತಿ ನೀಡಿರುತ್ತಾನೆ.
ಸದರಿ ಆರೋಪಿತನು ಕರ್ನಾಟಕ, ಆಂಧ್ರ ಪ್ರದೇಶ ಹಾಗೂ ತಮಿಳುನಾಡು ರಾಜ್ಯಗಳಲ್ಲಿ, ಡಕಾಯಿತಿ, ದರೊಡೆ ಹಾಗೂ ಕನ್ನ ಕಳವು ಪ್ರಕರಣಗಳಲ್ಲಿ ಭಾಗಿಯಾಗಿದ್ದು, ಈತನು ಬೀಗ ಹಾಕಿರುವ ಮನೆಗಳನ್ನು ಹಗಲಿನಲ್ಲಿ ಗುರುತಿಸಿಕೊಂಡು, ರಾತ್ರಿ ವೇಳೆಯಲ್ಲಿ ಕಬ್ಬಿಣದ ರಾಡಿನಿಂದ ಮನೆಯ ಬಾಗಿಲನ್ನು ಮೀಟಿ ಕಳ್ಳತನ ಮಾಡುತ್ತಿದ್ದನು.
ಈ ಪ್ರಕರಣದ ಕಾರ್ಯಾಚರಣೆಯನ್ನು ಬೆಂಗಳೂರು ನಗರ, ಪೂರ್ವ ವಿಭಾಗದ ಉಪ ಪೊಲೀಸ್
ಆಯುಕ್ತರಾದ ಡಾ|| ಭೀಮಾಶಂಕರ್ ಎಸ್. ಗುಳೇದ ರವರ ಮಾರ್ಗದರ್ಶದಂತೆ ಶ್ರೀ ರಾಮಚಂದ್ರ.ಬಿ
ಎ.ಸಿ.ಪಿ ಹಲಸೂರು ಉಪ ವಿಭಾಗ ರವರ ನೇತೃತ್ವದಲ್ಲಿ ಬೈಯಪ್ಪನಹಳ್ಳಿ, ಪೊಲೀಸ್ ಠಾಣೆಯ ಪೊಲೀಸ್
ಇನ್ಸ್ ಪೆಕ್ಟರ್ ಶ್ರೀ: ಪ್ರಶಾಂತ್.ಎಂ ಹಾಗೂ ಸಿಬ್ಬಂದಿಯವರು ಕಾರ್ಯಾಚರಣೆ ನಡೆಸಿ ಆರೋಪಿ ಮತ್ತು
ಚಿನ್ನಾಭರಣವನ್ನು ಅಮಾನತ್ತು ಪಡಿಕೊಳ್ಳುವಲ್ಲಿ ಯಶಸ್ವಿಯಾಗಿರುತ್ತಾರೆ.
ಈ ಮೇಲ್ಕಂಡ ಅಧಿಕಾರಿಗಳ ಮತ್ತು ಸಿಬ್ಬಂದಿಯವರುಗಳ ಕರ್ತವ್ಯವನ್ನು ಬೆಂಗಳೂರು ನಗರದ ಪೊಲೀಸ್ ಆಯುಕ್ತರಾದ ಶ್ರೀ. ಬಿ.ದಯಾನಂದ ರವರು ಮತ್ತು ಅಪರ ಪೊಲೀಸ್ ಆಯುಕ್ತರು, ಪೂರ್ವ, ಶ್ರೀ. ರಮನ್ ಗುಪ್ತಾ ರವರು ಶ್ಲಾಘಿಸಿರುತ್ತಾರೆ.
ವರದಿ : ಆಂಟೋನಿ ಬೇಗೂರು