ಹೊರರಾಜ್ಯದಿಂದ ಖೋಟಾ ನೋಟುಗಳನ್ನು ತಂದು ಕಾಟನ್ ಪೇಟೆ ಪೊಲೀಸ್ ಠಾಣಾ ಸರಹದ್ದಿನಲ್ಲಿ ಚಲಾವಣೆ ಮಾಡುತ್ತಿದ್ದ ಜಾಲದ ಬಗ್ಗೆ ಗುಪ್ತ ಮಾಹಿತಿಯನ್ನು ಸಂಗ್ರಹಿಸಿದ, ಕಾಟನ್ ಪೇಟೆ ಪೊಲೀಸ್ ಠಾಣೆಯ ಪೊಲೀಸರು ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು, ದಿನಾಂಕ:-28-06-2023 ರಂದು ಪ್ರಕರಣವನ್ನು ಬೇಧಿಸಿ, ಸಿಟಿ ರೈಲ್ವೇ ನಿಲ್ದಾಣದ ಮುಂಭಾಗದ ವಾಕ್ ಬಳಿ ಖೋಟಾ ನೋಟು ಚಲಾವಣೆ ಮಾಡುತ್ತಿದ್ದ ಕೇರಳ ರಾಜ್ಯದ ಇಬ್ಬರು ಹಾಗೂ ತಮಿಳುನಾಡಿನ ಒಬ್ಬ ಆರೋಪಿಯನ್ನು ದಸ್ತಗಿರಿ ಪಡಿಸಿ ಆರೋಪಿಗಳನ್ನು ಬಂಧಿಸಿ, ಇದರಿಂದ 6,53,500/-ರೂ ಮೌಲ್ಯದ, 500/-ರೂ ಮುಖ ಬೆಲೆಯ ಒಟ್ಟು 1307 ಖೋಟಾ ನೋಟುಗಳನ್ನು ವಶ ಪಡಿಸಿಕೊಂಡಿರುತ್ತದೆ. ಆರೋಪಿತರು fake_currency_tamilnadu ಹಾಗೂ Motohaker.93 ಎಂಬ ಇನ್ಸ್ಟಾಗ್ರಾಂ ಅಕೌಂಟ್ ನಿಂದ ಖೋಟಾ ನೋಟು ವ್ಯವಹಾರವನ್ನು ನಡೆಸಿ, ಖೋಟಾ ನೋಟುಗಳನ್ನು ಜನನಿಬಿಡ ಪ್ರದೇಶಗಳಾದ ಬೆಂಗಳೂರಿನ ಮೆಜೆಸ್ಟಿಕ್, ಸಿಟಿ ರೈಲ್ವೇ ನಿಲ್ದಾಣ, ಮಾರ್ಕೆಟ್ ನಲ್ಲಿ ಖೋಟಾ ನೋಟುಗಳನ್ನು ಚಲಾವಣೆ ಮಾಡಿರುತ್ತಾರೆ. ಖೋಟ ನೋಟನ್ನು ತಮಿಳು ನಾಡಿನ ಮೂಲದ ಆರೋಪಿಯು ಬಿಹಾರದ ಪಾಟ್ನಾ ಮೂಲದ ವ್ಯಕ್ತಿಯನ್ನು ಸಂಪರ್ಕಿಸಿ, ಬಿಹಾರಕ್ಕೆ ತೆರಳಿ ಅವನ ಕಡೆಯಿಂದ 25 ಸಾವಿರಕ್ಕೆ 1 ಲಕ್ಷ ರೂಪಾಯಿ (1:4 ಅನುಪಾತದಲ್ಲಿ) ಖೋಟ ನೋಟನ್ನು ಪಡೆದುಕೊಂಡು ಬರುತ್ತಿದ್ದನು. ಇದುವರೆಗೂ ಸುಮಾರು 10 ಲಕ್ಷದವರೆಗೂ ಖೋಟನೋಟನ್ನು ಅವರ ಕಡೆಯಿಂದ ಪಡೆದುಕೊಂಡಿರುತ್ತಾನೆ. ಕೇರಳ, ಕರ್ನಾಟಕ ಹಾಗೂ ಆಂಧ್ರಪ್ರದೇಶದ ಇತರರಿಗೆ ಈ ಮುಂಚೆ 3-4 ಲಕ್ಷ ರೂಪಾಯಿಯಷ್ಟು ನೋಟ ನೋಟನ್ನು ಚಲಾವಣೆ ಮಾಡಿರುತ್ತಾನೆ. ಬಿಹಾರದ ಪಾಟ್ನಾ ಮೂಲದ ಖೋಟ ನೋಟು ನೀಡುವ ವ್ಯಕ್ತಿಯನ್ನು ಪತ್ತೆ ಮಾಡಲು ತನಿಖೆ ಮುಂದುವರೆಸಿರುತ್ತದೆ.
ಈ ಕಾರ್ಯಾಚರಣೆಯನ್ನು ಬೆಂಗಳೂರು ನಗರದ ಪಶ್ಚಿಮ ವಿಭಾಗದ ಉಪ ಪೊಲೀಸ್ ಆಯುಕ್ತರಾದ ಶ್ರೀ. ಲಕ್ಷ ಣ ಬ ನಿಂಬರಗಿ ರವರ ನೇತೃತ್ವದಲ್ಲಿ, ಶ್ರೀ 10 ಕೆ.ಸಿ, ಸಹಾಯಕ ಪೊಲೀಸ್ ಆಯುಕ್ತರು ಚಿಕ್ಕಪೇಟೆ ಉಪ-ವಿಭಾಗ ರವರ ಮಾರ್ಗದರ್ಶನದಲ್ಲಿ, ಬಾಲರಾಜ್ ಪೊಲೀಸ್ ಇನ್ಸ್ಪೆಕ್ಟರ್ ಹಾಗೂ ಸಿಬ್ಬಂದಿಯವರನ್ನೊಳಗೊಂಡ ತಂಡವು ಸದರಿ ಪ್ರಕರಣವನ್ನು ಬೇಧಿಸಿ ಆರೋಪಿಗಳನ್ನು ಬಂಧಿಸುವಲ್ಲಿ
ಯಶಸ್ವಿಯಾಗಿರುತ್ತಾರೆ.
ಈ ಮೇಲ್ಕಂಡ ಅಧಿಕಾರಿಗಳ ಮತ್ತು ಸಿಬ್ಬಂದಿಯವರುಗಳ ಕರ್ತವ್ಯವನ್ನು ಬೆಂಗಳೂರು ನಗರದ ಪೊಲೀಸ್ ಆಯುಕ್ತರಾದ ಬಿ. ದಯಾನಂದ ಮತ್ತು ಅಪರ ಪೊಲೀಸ್ ಆಯುಕ್ತರು ಪಶ್ಚಿಮ ಶ್ರೀ. ಸತೀಶ್ ಕುಮಾರ್ ರವರು ಶ್ಲಾಘಿಸಿರುತ್ತಾರೆ.