ದಿನಾಂಕ 26-07-2023 ರಂದು ಚನ್ನಗಿರಿ ಉಪ-ವಿಭಾಗದ ವ್ಯಾಪ್ತಿಯ ಪೊಲೀಸ್ ಠಾಣೆಗಳಲ್ಲಿ 01-07-2022 ರಿಂದ 30-06-2023 ರವರೆಗೆ ವರದಿಯಾಗಿ ಪತ್ತೆಯಾಗಿರುವ ಸ್ವತ್ತು ಕಳವು ಪ್ರಕರಣಗಳಲ್ಲಿ, ಕಳುವಾಗಿದ್ದ ಮಾಲನ್ನು ಪತ್ತೆ ಮಾಡಿ, ಅಮಾನತ್ತುಪಡಿಸಿಕೊಂಡಿದ್ದು, ಈ ಸಂಬಂಧವಾಗಿ ಚನ್ನಗಿರಿ ಪಟ್ಟಣದ ಮೌದಲ್ ಆಂಜನೇಯಸ್ವಾಮಿ ಸಮುದಾಯ ಭವನದಲ್ಲಿ ಸದರಿ ಪತ್ತೆಯಾದ ಪ್ರಕರಣಗಳಲ್ಲಿ ವಶಕ್ಕೆ ಪಡೆದುಕೊಂಡಿದ್ದ ಮಾಲುಗಳನ್ನು, ಅವುಗಳ ವಾರಸುದಾರರಿಗೆ ಹಿಂದಿರುಗಿಸುವ ಸಂಬಂಧವಾಗಿ “ಪ್ರಾಪರ್ಟಿ ರಿಟರ್ನ್ ಪೆರೇಡ್\’ನ್ನು ಹಮ್ಮಿಕೊಂಡಿದ್ದು, ಸದರಿ ಪಾಪರ್ಟಿ ಪೆರೇಡ್‌ನಲ್ಲಿ ಡಾ.ಸಂತೋಷ್ ಕೆ.ಎಂ, ಡಿವೈ.ಎಸ್.ಪಿ, ಚನ್ನಗಿರಿ ಉಪ-ವಿಭಾಗ, ಚನ್ನಗಿರಿ ರವರ ನೇತೃತ್ವದಲ್ಲಿ, ಶ್ರೀಮಹೇಶ್ ಈ.ಎಸ್. ಸಿಪಿಐ, ಸಂತೇಬೆನ್ನೂರು, ಪ್ರಭಾರ ಪಿ.ಐ ಚನ್ನಗಿರಿ ಪೊಲೀಸ್ ಠಾಣೆ, ಶ್ರೀಸಿದ್ದೇಗೌಡ, ಪಿ.ಐ, ಹೊನ್ನಾಳಿ ಪೊಲೀಸ್ ಠಾಣೆ, ಶ್ರೀಸೈಪುದ್ದೀನ್, ಪಿ.ಎಸ್.ಐ ಕಾನೂನು ಮತ್ತು ಸುವ್ಯವಸ್ಥೆ, ಚನ್ನಗಿರಿ ಪೊಲೀಸ್ ಠಾಣೆ, ಶ್ರೀಪ್ರವೀಣ್ ಕುಮಾರ್, ಪಿ.ಎಸ್.ಐ ತನಿಖೆ, ಸಂತೇಬೆನ್ನೂರು ಠಾಣೆ, ಶ್ರೀರಮೇಶ್, ಪಿ.ಎಸ್.ಐ ನ್ಯಾಮತಿ ಠಾಣೆ ರವರುಗಳು ಹಾಗೂ ಚನ್ನಗಿರಿ ಉಪ-ವಿಭಾಗದ ಅಪರಾಧ ವಿಭಾಗದ ಸಿಬ್ಬಂದಿಗಳು ಹಾಗೂ ಸಾರ್ವಜನಿಕರು ಭಾಗವಹಿಸಿರುತ್ತಾರೆ.
ಈ ಪ್ರಾಪರ್ಟಿ ಪರೇಡ್‌ನಲ್ಲಿ ಜಪ್ತುಪಡಿಸಿಕೊಂಡಿರುವ 62 ಪ್ರಕರಣಗಳಲ್ಲಿನ 53 ವಾಹನಗಳು, 47,59000/- ರೂ ನಗದು ಹಣ, 14,15,000/ ರೂ ಮೌಲ್ಯದ ಸುಮಾರು 342 ಗ್ರಾಂ ತೂಕದ ಬಂಗಾರ ಮತ್ತು ಬೆಳ್ಳಿಯ ಆಭರಣಗಳು, 30,000/- ರೂ ಮೌಲ್ಯದ 3 ಮೊಬೈಲ್ ಹಾಗೂ 22,43,353/- ರೂ ಮೌಲ್ಯದ ಕೃಷಿ ಉಪಕರಣಗಳು, ಅಡಿಕೆ, ಬೋರವೆಲ್ ವೈರ್, ಮೋಟರ್ ಮತ್ತು ಇತರೆ ವಸ್ತುಗಳು ಒಟ್ಟು 84,47,353 ಮೌಲ್ಯದ ಮಾಲುಗಳನ್ನು ವಾರಸುದಾರರಿಗೆ ಹಿಂದಿರುಗಿಸಲಾಗಿರುತ್ತದೆ.