ಬೆಂಗಳೂರು ನಗರದ ಕಮರ್ಷಿಯಲ್ ಸ್ಟ್ರೀಟ್ ಪೊಲೀಸ್ ಈಗ ಅಧಿಕಾರಿ ಮತ್ತು ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿ ಬೆಂಗಳೂರು ನಗರದ ವಿವಿಧ ಕಡೆಗಳಲ್ಲಿ ಮೊಬೈಲ್ ಫೋನ್ ಕಳವು ಮಾಡುತ್ತಿದ್ದ ಕುಂತ ಆರೋಪಿಯನ್ನು ಮೊಬೈಲ್ ಫೋನ್ ಕಳವು ಮಾಡುವ ಯತ್ನದಲ್ಲಿದ್ದಾಗ ಶಿವಾಜಿನಗರದ ಬಿಎಂಟಿಸಿ ಬಸ್ ನಿಲ್ದಾಣದ ಬಳೆ ವಶಕ್ಕೆ ಪಡೆದು ದಸ್ತಗಿರಿ ಮಾಡಿ ಆರೋಪಿಯ ಸ್ವಇಚ್ಛಾ ಹೇಳಿಕೆಯ ಮೇರೆಗೆ ಬೆಂಗಳೂರು ನಗರದ ವಿವಿಧ ನಾಗರ ಸರಹದ್ದಿನಲ್ಲಿ ಕಳವು ಮಾಡಿದ್ದ ಸುಮಾರು 300/-ರೂ ಬೆಲೆಬಾಳುವ ವಿವಿಧ ಕಂಪನಿಯ ಒಟ್ಟು 8 ಮೊಬೈಲ್ ಫೋನ್‌ಗಳನ್ನು ಅಮಾನತ್ತುಪಡಿಸಿಕೊಂಡಿರುತ್ತದೆ.
ಈ ಪ್ರಕರಣದ ಕಾರ್ಯಚರಣೆಯನ್ನು ಬೆಂಗಳೂರು ನಗರ ಪೂರ್ವ ವಿಭಾಗದ ಉಪ ಪೊಲೀಸ್ ಆಯುಕ್ತರಾದ ಡಾ|| ಭೀಮಾಶಂಕರ್ ಗುಳೇದ್, ಐ.ಪಿ.ಎಸ್ ರವರ ಮಾರ್ಗದರ್ಶನದಲ್ಲಿ, ಸುಲಕೇಶಿನಗರ ಉಪವಿಭಾಗದ ಎ.ಸಿ.ಪಿ ಶ್ರೀಮತಿ ಗೀತಾ ಸಿ.ಆರ್ ರವರ ನೇತೃತ್ವದಲ್ಲಿ ಕಮರ್ಷಿಯಲ್ ಸ್ಟ್ರೀಟ್ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ಶ್ರೀ ಆರ್.ಎಸ್.ಚೌಧರಿ, ಸಬ್ ಇನ್ಸ್‌ಪೆಕ್ಟರ್ ಶ್ರೀ ಮೊಹಮ್ಮದ್ ಕಲೀಂ ಹಾಗೂ ಸಿಬ್ಬಂದಿಗಳಾದ ಹೆಚ್.ಸಿ 712 ಶ್ರೀ ಸೆನ್, ಹೆಚ್.ಸಿ 8211) ಶ್ರೀ ಪ್ರಶಾಂತ್ ನಾಯ್ ಮತ್ತು ಹೆಚ್.ಸಿ 924 ಶ್ರೀ ಮಧು.ಎಸ್, ಹೆಚ್.ಸಿ 1068) ಶ್ರೀ ನಾಗರಾಜ್.ಎಸ್, ಹೆಚ್.ಸಿ 11273 ಶ್ರೀ ಉಳವಪ್ಪ ತೇಗೂರ & ಪಿ.ಸಿ 1425) .ಶ್ರೀ ರಾಘವೇಂದ್ರ ನಾಟೀಕಾರವರು ಕಾರ್ಯಾಚರಣೆ ನಡೆಸಿ ಆರೋಪಿ ಮತ್ತು ಮಾಲುಗಳನ್ನು ಪತ್ತೆ ಮಾಡುವಲ್ಲಿ ಯಶಸ್ವಿಯಾಗಿರುತ್ತಾರೆ.