ಕಮರ್ಷಿಯಲ್ ಸ್ಟ್ರೀಟ್ ಪೊಲೀಸ್ ಠಾಣಾ ಅಧಿಕಾರಿ ಮತ್ತು ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿ, ಆರೋಪಿಯು ಈ ಹಿಂದೆ ಕಳವು ಮಾಡಿದ ದ್ವಿಚಕ್ರ ವಾಹನ ಮಾರಾಟ ಮಾಡುವ ಯತ್ನದಲ್ಲಿದ್ದಾಗ ಆತನನ್ನು ಶಿವಾಜಿನಗರದ ಚಾರ್ ಮಿನಾರ್ ಮಸೀದಿ ಬಳಿ ವಶಕ್ಕೆ ಪಡೆದು ದಸ್ತಗಿರಿ ಮಾಡಿ ಸ್ವಇಚ್ಛಾ ಹೇಳಿಕೆಯ ಮೇರೆಗೆ ಬೆಂಗಳೂರು ನಗರದ ವಿವಿಧ ಠಾಣಾ ಸರಹದ್ದಿನಲ್ಲಿ ಕಳವು ಮಾಡಿದ್ದ ಸುಮಾರು 5,610,000/-ರೂ ಬೆಲೆಬಾಳುವ ಒಟ್ಟು 11 ದ್ವಿಚಕ್ರ ವಾಹನಗಳು ಹಾಗೂ ಒಂದು ಆಟೋವನ್ನು ಅಮಾನತ್ತುಪಡಿಸಿಕೊಂಡಿರುತ್ತಾರೆ.
ಈ ಕಾರ್ಯಾಚರಣೆಯಲ್ಲಿ ಕಮರ್ಷಿಯಲ್ ಸ್ಟ್ರೀಟ್ ಪೊಲೀಸ್ ಠಾಣೆಯ 3 ಪ್ರಕರಣಗಳು, ಭಾರತೀನಗರ, ವಿವೇಕನಗರ ಪೊಲೀಸ್ ಠಾಣೆಯ ತಲಾ ಒಂದು ಪ್ರಕರಣ ಪತ್ತೆಯಾಗಿರುತ್ತದೆ.
ಈ ಪ್ರಕರಣದ ಕಾರ್ಯಚರಣೆಯನ್ನು ಬೆಂಗಳೂರು ನಗರ ಪೂರ್ವ ವಿಭಾಗದ ಉಪ ಪೊಲೀಸ್ ಆಯುಕ್ತರಾದ ಭೀಮಾಶಂಕರ್ ರವರ ಮಾರ್ಗದರ್ಶನದಲ್ಲಿ, ಪಲಕೇಶಿನಗರ ಉಪವಿಭಾಗದ ಎ.ಸಿ.ಪಿ ಶ್ರೀಮತಿ ಗೀತಾ ಸಿ.ಆರ್ ರವರ ನೇತೃತ್ವದಲ್ಲಿ ಕಮರ್ಷಿಯಲ್ ಸ್ಟ್ರೀಟ್ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಶ್ರೀ ಆರ್.ಎಸ್. ಚೌಧರಿ, ಹಾಗೂ ಸಿಬ್ಬಂದಿಯವರು ಕಾರ್ಯಾಚರಣೆ ನಡೆಸಿ ಆರೋಪಿ ಮತ್ತು ಮಾಲುಗಳನ್ನು ಪತ್ತೆ ಮಾಡುವಲ್ಲಿ ಯಶಸ್ವಿಯಾಗಿರುತ್ತಾರೆ.
ಈ ಮೇಲ್ಕಂಡ ಅಧಿಕಾರಿಗಳ ಮತ್ತು ಸಿಬ್ಬಂದಿಯವರುಗಳ ಕರ್ತವ್ಯವನ್ನು ಬೆಂಗಳೂರು ನಗರದ ಪೊಲೀಸ್ ಆಯುಕ್ತರಾದ ಶ್ರೀ. ಬಿ.ದಯಾನಂದ ಮತ್ತು ಅಪರ ಪೊಲೀಸ್ ಆಯುಕ್ತರು ಪೂರ್ವ, ಶ್ರೀ, ರಮನ್ ಗುಪ್ತಾರವರು ಶ್ಲಾಘಿಸಿರುತ್ತಾರೆ.