ದಿನಾಂಕ: 22.07.2023 ರಂದು ಪಿಲ್ಯಾದಿ ಶ್ರೀ ಮುರಾಘರಾಜೇಂದ್ರ ಕೋ ಆಪರೇಟಿವ್ ಬ್ಯಾಂಕಿನ ಮ್ಯಾನೇಜರ್ ಅರುಣ ಎಂ.ಎಸ್ ರವರು ನೀಡಿದ ದೂರಿನ ಸಾರಾಂಶವೆಂದರೆ ದಿನಾಂಕ: 18.07.2023 ರಂದು ದಾವಣಗೆರೆ ನಗರದ ಲಾಯರ್ ರಸ್ತೆಯಲ್ಲಿರುವ ಮುರಾಘರಾಜೇಂದ್ರ ಕೋ ಆಪರೇಟಿವ್ ಬ್ಯಾಂಕಿನ ಎಟಿಎಂಗೆ ಆರು ಲಕ್ಷ ಹಣವನ್ನು ಡೆಫಾಸೀಟ್ ಮಾಡಿದ್ದು ದಿನಾಂಕ;19.07.2023 ರಂದು ಮಧ್ಯಾಹ್ನ 03.00 ಘಂಟೆಗೆ ಎಟಿಎಂ ನಿರ್ವಾಹಕರಾದ ಶೈಲಜಾ ರವರ ಜೊತೆಯಲ್ಲಿ ಎಟಿಎಂನಲ್ಲಿ ಹಣವನ್ನು ಭೌತಿಕವಾಗಿ ಚೆಕ್ ಮಾಡಿದಾಗ 1,85,000/- ರೂ.ಹಣ ಬಾಕಿಯಿದ್ದು ಬ್ಯಾಂಕಿನ ಜನರಲ್ ಲಡ್ಡರನಲ್ಲಿ 5,85,000/- ರೂ ಹಣ ಬ್ಯಾಲೆನ್ಸ್ ಇರುತ್ತದೆ. ಅನುಮಾನ ಬಂದು ಸಿಸಿ ಟಿವಿಯಲ್ಲಿ ಚೆಕ್ ಮಾಡಿದಾಗ ದಿನಾಂಕ; 18.07.2023ರ ಬೆಳಗ್ಗೆ 11.00 ಘಂಟೆಯಿಂದ ದಿನಾಂಕ: 19.07.2023ರ ಬೆಳಗ್ಗೆ 08.30 ಘಂಟೆಯ ಮದ್ಯೆ ಯಾರೋ ಆಸಾಮಿಗಳು ತಾಂತ್ರಿಕ ಕೌಶಲ್ಯ ಬಳಸಿ ಎಟಿಎಂ ನಿಂದ ಹಣ ಬಿಡಿಸಿಕೊಂಡು ಬ್ಯಾಂಕಿಗೆ 3.47.900/- ರೂ ಹಣವನ್ನು ಮೋಸ ಮಾಡಿರುತ್ತಾರೆ. ಮೋಸ ಮಾಡಿದವರ ವಿರುದ್ದ ಕಾನೂನು ರೀತ್ಯಾ ಕ್ರಮ ಕೈಗೊಳ್ಳಬೇಕೆಂದು ನೀಡಿದ ದೂರಿನ ಮೇರೆಗೆ ಕೆಟಿಜೆ ನಗರ ಪೊಲೀಸ್ ಠಾಣೆ ಗುನ್ನೆ ನಂ 174/2023 ಕಲಂ 420.34 ಐಪಿಸಿ ರೀತ್ಯಾ ದಾಖಲಾಗಿರುತ್ತದೆ.
ಸದರಿ ಪ್ರಕರಣಗಳ ಆರೋಪಿತರನ್ನು ಪತ್ತೆ ಮಾಡಲು ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಶ್ರೀ. ರಾಮಗೊಂಡ ಬಸರಗಿ ರವರ ನಿರ್ದೇಶನದಲ್ಲಿ ಹಾಗೂ ದಾವಣಗೆರೆ ನಗರ ಉಪ ವಿಭಾಗದ ಪೊಲೀಸ್ ಉಪಾಧೀಕ್ಷಕರಾದ ಶ್ರೀಮಲ್ಲೇಶ ದೊಡ್ಡಮನಿ ರವರ ಮಾರ್ಗದರ್ಶನಲ್ಲಿ ದಾವಣಗೆರೆ ಕೆಟಿಜೆ ನಗರ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕರಾದ ಶಶಿಧರ ಯು ಜೆ ರವರ ನೇತೃತ್ವದ ತಂಡವು ಅಂತರಾಜ್ಯ ಆರೋಪಿತರಾದ
ಪ್ರಮೋದ ಕುಮಾರ, ವಾಸ ಡೋರ್ ನಂ: ಪುರಾನಿ ಬಸ್ತಿ ಹಮೀರ್ ಪರ್ ರಸ್ತೆ ಕಾನೂರ ನಗರ ಉತ್ತರ ಪ್ರದೇಶ ಎ2 ಅರ್ಜುನ ಸಿಂಗ್, ವಾಸ ಡೋರ್ ನಂ: ಸಂಜೀವ ನಗರ ಅಹೀರ್ವಾ ಚಕೇರಿ ಹರಜೀಂದರ್ ನಗರ ಪೋಸ್ಟ ಆಪೀಸ್
ಕಾನ್ನೂರ ನಗರ ಉತ್ತರ ಪ್ರದೇಶ ಎ3 ಸಂದೀಪ್ ಸಿಂಗ್ ಚೌಹಾಣ, ವಾಸ: ಪಟೇಲ್ ನಗರ ಪೋಸ್ಟ ಆಪೀಸ್ ಹರಜಿಂದರ್ ನಗರ ಮೇನ್ ರೋಡ್ಕಾ ನ್ಸರ್ ಉತ್ತರ ಪ್ರದೇಶ ಎ4 ಲವ್ ಸಿಂಗ್, ವಾಸ: ಕುರಾರಾ ಗ್ರಾಮ ಹಮೀರ ಪುರ ಜಿಲ್ಲೆ ಉತ್ತರ ಪ್ರದೇಶ ರಾಜ್ಯ. ರವರನ್ನು ಪತ್ತೆ ಮಾಡಿ ಆರೋಪಿತರು ಕೃತ್ಯಕ್ಕೆ ಬಳಸಿದ ನಾಲ್ಕು ಎಟಿಎಂ ಕಾರ್ಡಗಳು, 5000/- ರೂ ನಗದು ಹಣ, ಐದು ಲಕ್ಷ ರೂಪಾಯಿ ಮೌಲ್ಯದ ಸ್ವೀಪ್ಟ್ ಡಿಜೈರ್ ಕಾರು ವಶಪಡಿಸಿಕೊಂಡಿರುತ್ತದೆ.
ಆರೋಪಿತರನ್ನು ಪತ್ತೆ ಮಾಡಿದ ದಾವಣಗೆರೆ ನಗರ ಉಪ ವಿಭಾಗದ ಪೊಲೀಸ್ ಉಪಾಧೀಕ್ಷಕರಾದ ಶ್ರೀ ಮಲ್ಲೇಶ ಡಿ, ಕೆಟಿಜೆ ನಗರ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕರಾದ ಶ್ರೀ ಶಶಿಧರ ಯು ಜೆ, ಪಿಎಸ್‌ಐ ಮಂಜುಳ & ಕೆಟಿಜೆ ನಗರ ಪೊಲೀಸ್ ಠಾಣೆಯ ಅಪರಾಧ ವಿಭಾಗದ ಸಿಬ್ಬಂದಿಗಳಾದ ಪ್ರಕಾಶ ಟಿ, ಶಂಕರ ಆರ್ ಜಾಧವ್, ತಿಮ್ಮಣ್ಣ ಎನ್ ಆರ್, ಮಂಜಪ್ಪ ಎಂ, ಷಣ್ಮುಖ.ಕೆ, ಶಿವರಾಜ ಎಂ. ಎಸ್ ಪುಷ್ಪಲತಾ, ಅಮೃತ್ ಕೆ ಹೆಚ್, ರಾಘವೇಂದ್ರ, ಶಾಂತರಾಜ್, ಆಟೋಮಿಕ್ ಸೆಂಟರನ ಸಿಬ್ಬಂದಿಯವರ ಪತ್ತೆ ಕಾರ್ಯವನ್ನು ದಾವಣಗೆರೆ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಡಾ. ಅರುಣ ಕೆ ಐಪಿಎಸ್ ರವರು ಪ್ರಶಂಸಿಸಿ ಶ್ಲಾಘನೆ ವ್ಯಕ್ತಪಡಿಸಿ ಬಹುಮಾನ ಘೋಷಿಸಿರುತ್ತಾರೆ.