ಬೆಂಗಳೂರು ನಗರದಲ್ಲಿ ತಲೆಮರೆಸಿಕೊಂಡಿರುವ ಆರೋಪಿಗಳ ಪತ್ತೆಗಾಗಿ ಕಾರ್ಯಾಚರಣೆ ಕೈಗೊಂಡಿದ್ದ ಸಿಸಿಬಿ ಅಧಿಕಾರಿಗಳಿಗೆ ಕೆಲವು ಆರೋಪಿಗಳು, ಭಯೋತ್ಪಾದಕ ಕೃತ್ಯದಲ್ಲಿ ಭಾಗಿಯಾಗಿ ಜೈಲಿನಲ್ಲಿರುವ ಆರೋಪಿಗಳೊಂದಿಗೆ ಸಂಪರ್ಕ ಹೊಂದಿ, ನಗರದಲ್ಲಿ ದೇಶವಿರೋಧಿ ಕಾನೂನು ಬಾಹಿರ ವಿದ್ವಂಸಕ ಕೃತ್ಯವೆಸಗಲು ಹಲವಾರು ಒಳಸಂಚಿನ ಸಭೆಗಳನ್ನು ನಡೆಸಿ, ಈ ಕಾರ್ಯಸಾಧನೆಗಾಗಿ ಕೆಲವು ವಾರಗಳಿಂದ ಆಶ್ರಮವಾಗಿ ಶಸ್ತ್ರಾಸ್ತ್ರ ಮದ್ದುಗುಂಡುಗಳು ಮತ್ತು ದುಷ್ಕೃತ್ವಕ್ಕೆ ಬೇಕಾಗುವ ಸಲಕರಣೆಗಳನ್ನು ಕ್ರೋಡಿಕರಿಸಿಕೊಂಡು ದೇಶದ ಐಕ್ಯತೆ, ಭರತ ಮತ್ತು ಸಾರ್ವಭೌಮತ್ವಕ್ಕೆ ಧಕ್ಕೆಯುಂಟು ಮಾಡುವ ದುಷ್ಕೃತ್ಯಗಳನ್ನು ಎಸಗಿ, ಸಾರ್ವಜನಿಕ ಆಸ್ತಿ ಪಾಸ್ತಿಗೆ ನನ್ನ ಉ೦ಟು ಮಾಡುವ ಉದ್ದೇಶಗಳನ್ನು ಹೊಂದಿ, ಹೆಬ್ಬಾಳ ಪೊಲೀಸ್ ಹಾಗೂ ವ್ಯಾಪ್ತಿಯ ಸುಲ್ತಾನ್ ಪಾಳ್ಯದ ಮನೆಯೊಂದರಲ್ಲಿ ದೇಶವಿರೋಧಿ ಕೃತ್ಯದ ರೂಪುರೇಷೆಗಳನ್ನು ರೂಪಿಸಿ ಅಕ್ರಮ ಶಸ್ತ್ರಾಸ್ತ್ರಗಳೊಂದಿಗೆ ವಿಧ್ವಂಸಕ ಕೃತ್ಯಕ್ಕೆ ಒಳಸುರು ಮಾಡುತ್ತಾ, ಕಾನೂನು ಬಾಹಿರವಾಗಿ ಚಟುವಟಿಕೆಗಳಿಗೆ ಸನ್ನದ್ಧರಾಗುತ್ತಿರುವ ಬಗ್ಗೆ ಖಚಿತ ಮಾಹಿತಿ ಲಭಿಸಿರುತ್ತದೆ.
ಈ ಮಾಹಿತಿ ಮೇರೆಗೆ ಕಾರ್ಯ ಪ್ರವೃತ್ತರಾದ ಕೇಂದ್ರ ಅಪರಾಧ ವಿಭಾಗ (ಬಿ) ಅಧಿಕಾರಿಗಳು ಕ್ಷಿಪ್ರ ಕಾರ್ಯಾಚರಣೆ ನಡೆಸಿ, ಐದು ಜನ ಆರೋಪಿಗಳನ್ನು ದಸ್ತು ಮಾಡಿರುತ್ತಾರೆ.
ಇವರುಗಳ ವಶದಿಂದ,
7 ಕಂಟ್ರಿಮೇಡ್ ಪಿಸ್ತುಲ್
45 ಜೀವಂತ ಗುಂಡುಗಳು
ವಾಕಿ ಟಾಕೀ ಸೆಟ್ಸ್
ಒಂದು ಡ್ರಾಗಾರ್
12 ಮೊಬೈಲ್ ಫೋನುಗಳನ್ನು ವಶಪಡಿಸಿಕೊಳ್ಳಲಾಗಿದೆ.
ದಸ್ತಗಿರಿ ಮಾಡಿರುವ ಐದು ಜನ ಆರೋಪಿಗಳಲ್ಲಿ ಕೆಲವು ಈ ಹಿಂದೆ ಕೊಲೆ, ದರೋಡೆ ಪ್ರಯತ್ನ ರಕ್ತ ಬಂಧನ ಕಳವು (ಅರಣ್ಯ ಕಾಯಿದೆ) ಮುಂತಾದ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದು, ಜಾಮೀನು ಮೇಲೆ ಬಿಡುಗಡೆ ವಿಚಾರಣೆ ಎದುರಿಸುತ್ತಿದ್ದಾರೆ. ಇವರುಗಳು ದೇಶವಿರೋಧಿ ಭಯೋತ್ಪಾದನೆ ಪ್ರಕರಣದಲ್ಲಿ ವಿಚಾರಣಾಧೀನ ಖೈಧಿಗಳಾಗಿ ನಗರದ ಕೇಂದ್ರ ಕಾರಾಗೃಹದಲ್ಲಿರುವ ಆರೋಪಿತನೊಂದಿಗೆ ಸಂಪರ್ಕವಿಟ್ಟುಕೊಂಡು ಆ ಮೂಲಕ ಕಾನೂನು ಬಾಹಿರ ವಿದ್ವಂಸಕ ಕೃತ್ಯವೆಸಗಲು ಆಕ್ರಮವಾಗಿ, ಶಸ್ತ್ರಾಸ್ತ್ರ, ಮದ್ದುಗುಂಡುಗಳು, ಹಾಗೂ ಇನ್ನಿತರ ವಸ್ತುಗಳನ್ನು ಸಂಗ್ರಹಿಸಿಟ್ಟುಕೊಂಡಿದ್ದು, ವಿದ್ದಂಸಕಕ್ಷತ್ವದ ಯೋಜನೆಯನ್ನು ರೂಪಿಸುತ್ತಿದ್ದಂತಹ ಆರೋಪಿಗಳ ಮಾಹಿತಿ ಸಂಗ್ರಹಿಸಿ ಸಕಾಲದಲ್ಲಿ ದಾಳಿ ಮಾಡಿ ವಶಕ್ಕೆ ಪಡೆದು ಸಂಭವನೀಯ ದೃಷ್ಟತೆಗಳನ್ನು
ತಡೆಗಟ್ಟಿರುತ್ತಾರೆ.
ಈ ಆರೋಪಿಗಳ ವಿರುದ್ಧ ಸಬ್ಬಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ, ಹೆಚ್ಚಿನ ತನಿಖೆಯನ್ನು ಕೈಗೊಳ್ಳಲು ಈ ಪ್ರಕರಣದ ತನಿಖೆಯನ್ನು ಬಿ ಘಟಕಕ್ಕೆ ವರ್ಗಾವಣೆ ನೀಡಲಾಗಿರುತ್ತದೆ.
ಈ ಆರೋಪಿಗಳು ಸಂಗ್ರಹಿಸಿರುವ ಶಸ್ತ್ರಾಸ್ತ್ರಗಳು, ಸಂಪರ್ಕ ಸಾಧನಗಳು ಹಾಗೂ ಇನ್ನಿತರ ವಸ್ತುಗಳ
ಮೂಲಕ ಯಾವ ದುಷ್ಕೃತ್ಯವನ್ನು ಎಸಗಲು ಸಂಚು ರೂಪಿಸಿರುತ್ತಾರೆ, ಮತ್ತು ಇವರುಗಳು ಯಾವ ನಿಷೇದಿತ ಭಯೋತ್ಪಾದಕ ಸಂಘಟನೆಯೊಂದಿಗೆ ಗುರುತಿಸಿಕೊಂಡಿರುತ್ತಾರೆಂಬುದನ್ನು ತನಿಖೆಯಿಂದ ತಿಳಿಯಬೇಕಾಗಿದೆ.