ಇಂದು ದಿನಾಂಕ: 18.07.2023 ರಂದು ಗದಗ ಜಿಲ್ಲಾ ಪೊಲೀಸ್ ವತಿಯಿಂದ ದ್ವಿಚಕ್ರ ವಾಹನಗಳಿಗೆ ಅಳವಡಿಸಿದ ಗ್ಯಾರೇಜ್ / ಅಟೋಮೊಬೈಲ್ ಅಂಗಡಿಗಳಲ್ಲಿರುವ ದೋಷಪೂರಿತ ಸೈಲೆನ್ಸರ್ ವಶಪಡಿಸಿಕೊಳ್ಳುವುದು ಹಾಗೂ ಅಪ್ರಾಪ್ತ ವಯಸ್ಸಿನವರ ದ್ವಿಚಕ್ರ ವಾಹನ ಚಾಲನೆ ವಿರುದ್ಧ ವಿಶೇಷ ಕಾರ್ಯಾಚರಣೆಯನ್ನು ಶಹರದ ಗದಗ-ಬೆಟಗೇರಿ ಅವಳಿ ನಗರದಲ್ಲಿ ಒಟ್ಟು 27 ಸ್ಥಳಗಳಲ್ಲಿ ಡಿಎಸ್‌ಪಿ ಗದಗ ಉಪವಿಭಾಗ ರವರು ಸೇರಿದಂತೆ, 5 ಜನ ಸಿಪಿಐ/ಪಿಐ, 8 ಪಿಎಸ್‌ಐ, 22 ಎಎಸ್‌ಐ & ಸುಮಾರು 55 ಜನ ಪೊಲೀಸ್ ಸಿಬ್ಬಂದಿರವರಿಂದ ಬೆಳಗ್ಗೆ 10:00 ಗಂಟೆಯಿಂದ 02:00 ಗಂಟೆವರೆಗೆ & ಮಧ್ಯಾಹ್ನ 03:30 ಗಂಟೆಯಿಂದ 0615 ಗಂಟೆವರೆಗೆ ವಿಶೇಷ ಕಾರ್ಯಾಚರಣೆ ನಡೆಸಿದ್ದು, ಈ ಕೆಳಗಿನಂತೆ ವಿಶೇಷ ಕಾರ್ಯಾಚರಣೆ ಮೂಲಕ 95 ಪ್ರಕರಣಗಳನ್ನು ದಾಖಲಸಿಕೊಂಡು, ದೋಷಪೂರಿತ ಸೈಲೆನ್ಸರ್ ಅಳವಡಿಸಿದ ವಾಹನ ಚಾಲಕರಿಗೆ / ಅಪ್ರಾಪ್ತ ವಯಸ್ಸಿನ ವಾಹನ ಚಾಲಕರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಿದೆ.
ದ್ವಿಚಕ್ರ ವಾಹನಗಳ ದೋಷಪೂರಿತ ಸೈಲೆನ್ಸರ್ ವಶಕ್ಕೆ ಪಡೆದುಕೊಂಡು ದಾಖಲಿಸಿದ ಪ್ರಕರಣಗಳ ಸಂಖ್ಯೆ : 32
ಗ್ಯಾರೇಜ್ & ಇತರೆ ಸ್ಥಳಗಳಲ್ಲಿ ವಶಕ್ಕೆ ಪಡೆದಂತಹ ದೋಷಪೂರಿತ ಸೈಲೆನ್ಸರ್ ಸಂ. : 8
- ಅಪ್ರಾಪ್ತ ವಯಸ್ಸಿನವರ ಚಾಲನೆ ವಿರುದ್ಧ ದಾಖಲಾದ ಪ್ರಕರಣಗಳ ಸಂಖ್ಯೆ : 55
ಹೀಗೆ ಗದಗ-ಬೆಟಗೇರಿ ಅವಳಿ ನಗರದ 27 ಕಡೆಗಳಲ್ಲಿ ಒಟ್ಟು 91 ಅಧಿಕಾರಿ & ಸಿಬ್ಬಂದಿರವರ ಸತತ ಕಾರ್ಯಾಚರಣೆ ಮೂಲಕ ದೋಷಪೂರಿತ ಸೈಲೆನ್ಸರ್ / ಅಪ್ರಾಪ್ರ ವಾಹನ ಚಾಲಕರಿಗೆ ಕಾನೂನು ಕ್ರಮ ಜರುಗಿಸಿದ್ದು, ಸದರಿ ವಿಶೇಷ ಕಾರ್ಯಾಚರಣೆಯು ಶ್ರೀ. ಬಿ.ಎಸ್.ನೇಮಗೌಡ, ಐಪಿಎಸ್, ಪೊಲೀಸ್ ಅಧೀಕ್ಷಕರು, ಗದಗ ಜಿಲ್ಲೆ, ಗದಗ ರವರ ನೇತೃತ್ವದಲ್ಲಿ ಜರುಗಿದ್ದು ಇರುತ್ತದೆ.