ತಲಘಟ್ಟಪುರ ಪೊಲೀಸ್ ಠಾಣೆಯಲ್ಲಿ 2018ನೇ ಸಾಲಿನಲ್ಲಿ ದಾಖಲಾಗಿದ್ದ ಪಕರಣ ಕಲಂ-5 (ಎಲ್), 6 ಪೋಸ್ಕೋ ಆಕ್ಟ್, ಕಲಂ-376 ಐಪಿಸಿ ಮತ್ತು 31Xಡಬ್ಲ್ಯೂ ಎಸ್ ಸಿ ಎಸ್‌ಟಿ ಆಕ್ಟ್-2015.
ಪ್ರಕರಣದ ಸಾರಾಂಶ : ಆರೋಪಿಯು ಪ್ರಕರಣದಲ್ಲಿ ಅಪ್ರಾಪ್ತ ವಯಸ್ಸಿನ ನೊಂದ ಬಾಲಕಿ, 16 ವರ್ಷ ಈಕೆಯ ಮೇಲೆ ದಿನಾಂಕ:29/09/2018 4 ತಿಂಗಳು ಮೊದಲು ಅವರ ಮನೆಗೆ ಹೋಗಿ ಅಪ್ರಾಪ್ತ ಬಾಲಕಿಯ ಮೈಕೈ ಅನ್ನು ಮುಟ್ಟಿ, ಕೈಯಿಂದ ಬಾಯನ್ನು ಮುಚ್ಚಿ ಬಲವಂತದಿಂದ ಅತ್ಯಾಚಾರವೆಸಗಿ, ಯಾರಿಗೂ ಹೇಳಬಾರದೆಂದು ಎದರಿಸಿ 4 ತಿಂಗಳ ಗರ್ಭಿಣಿಯಾಗಲು ಕಾರಣನಾಗಿದ್ದನು. ಈ ಬಗ್ಗೆ ತಲಘಟ್ಟಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿ, ಆರೋಪಿಯನ್ನು ದಸ್ತಗಿರಿಮಾಡಿ, ಆರೋಪಿಯ ವಿರುದ್ಧ ಮಾನ್ಯ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿಯನ್ನು ಸಲ್ಲಿಸಿದ್ದರು.
ಮಾನ್ಯ ಎಫ್.ಟಿ.ಎಸ್.ಸಿ-2ನೇ ನ್ಯಾಯಾಲಯ, ಬೆಂಗಳೂರು ಗ್ರಾಮಾಂತರ ನ್ಯಾಯಾಧೀಶರು ಪ್ರಕರಣದ ವಿಚಾರಣೆಯನ್ನು ನಡೆಸಿ, ದಿನಾಂಕ:12.07.2023 ರಂದು ಆರೋಪಿಗೆ 20 ವರ್ಷ ಕಠಿಣ ಶಿಕ್ಷೆ ಹಾಗೂ 5,000/-ರೂ ಗಳ ದಂಡವನ್ನು ವಿಧಿಸಿ ತೀರ್ಪು ನೀಡಿರುತ್ತಾರೆ.
ಪ್ರಕರಣದ ತನಿಖಾಧಿಕಾರಿ ಎಸಿಪಿ ಸುಬ್ರಮಣ್ಯ ಪುರ ಉಪ ವಿಭಾಗ ರವರು ಪ್ರಕರಣದಲ್ಲಿ ಭೌತಿಕ, ವೈಜ್ಞಾನಿಕ ಸಾಕ್ಷಾಧಾರಗಳು ಮತ್ತು ದಾಖಲಾತಿಗಳನ್ನು ಸಂಗ್ರಹಿಸಿ ಆರೋಪಿಯ ವಿರುದ್ಧ ದೋಷರೋಪಣಾ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿ, ಆರೋಪಿಗೆ ಕಠಿಣ ಶಿಕ್ಷೆ ಕೊಡಿಸುವಲ್ಲಿ ಯಶಸ್ವಿಯಾಗಿರುತ್ತಾರೆ ಹಾಗೂ ನ್ಯಾಯಾಲಯದ ಸಿಬ್ಬಂದಿಗಳು ಸಕಾಲಕ್ಕೆ ಸಾಕ್ಷಿದಾರರನ್ನು ಅಭಿಯೋಜನೆಗೆ ಹಾಜರುಪಡಿಸಿ ಆರೋಪಿಗೆ ಶಿಕ್ಷೆ ಕೊಡಿಸುವಲ್ಲಿ ಸಹಕರಿಸಿರುತ್ತಾರೆ.
ಸರ್ಕಾರಿ ಅಭಿಯೋಜಕರಾದ ಶ್ರೀ.ಎಸ್.ಬಿ.ಹಾವೇರಿ ರವರು ಮಾನ್ಯ ನ್ಯಾಯಾಲಯದಲ್ಲಿ ವಾದ ಮಂಡಿಸಿ, ಆರೋಪಿಗೆ ಶಿಕ್ಷೆ ಕೊಡಿಸುವಲ್ಲಿ ಯಶಸ್ವಿಯಾಗಿರುತ್ತಾರೆ.