ವಿಲ್ಸನ್ ಗಾರ್ಡನ್ ಪೊಲೀಸ್ ಠಾಣಾ ಸರಹದ್ದಿನಲ್ಲಿರುವ ರೈಟರ್ ಸೆಫ್ಟ್‌ಗಾರ್ಡ್ ಪ್ರೈ.ಅ ಕಂಪನಿಯಲ್ಲಿ ಏಟಿಎಂ ಗಳಿಗೆ ಕ್ಯಾಶ್ ಲೋಡಿಂಗ್ ಮಾಡುತ್ತಿದ್ದ ಇಬ್ಬರು ಸಿಬ್ಬಂದಿಗಳು ದಿನಾಂಕ:19/06/2023 ರಿಂದ ದಿನಾಂಕ:21/06/2023 ರ ನಡುವಿನ ದಿನಗಳಲ್ಲಿ ಆರೋಪಿತರು ಕಂಪನಿಗೆ ಮೋಸ ಮಾಡುವ ಉದ್ದೇಶದಿಂದ 5,00,000/-ರೂಗಳು ಇಂಡೆಂಟ್ ಇರುವ ಎ.ಟಿ.ಎಂ. ಕ್ಯಾಸೆಟ್‌ಗಳಿಗೆ ಹೆಚ್ಚುವರಿಯಾಗಿ 20,00,000/-ರೂಗಳನ್ನು ಕ್ಯಾಶ್ ವಾಲ್ಟ್ ಕಛೇರಿಯಲ್ಲಿ ಕ್ಯಾಶ್ ಲೋಡ್ ಮಾಡಿದ್ದು, ಇದೆ ರೀತಿ ಐದೈದು ಲಕ್ಷ ರೂಗಳಂತೆ ನಾಲ್ಕು ಬಾರಿ ಮಾಡಿ, ಒಟ್ಟು ಇಪ್ಪತ್ತು ಲಕ್ಷ ಹಣವನ್ನು ತೆಗೆದುಕೊಂಡು ತಮ್ಮ ಸ್ವಂತಕ್ಕೆ ಬಳಸಿಕೊಂಡಿರುತ್ತಾರೆ. ಈ ಸಂಬಂಧ ವಿಲ್ಲನ್‌ಗಾರ್ಡನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.
ತನಿಖೆ ಕೈಗೊಂಡು ತನಿಖಾಧಿಕಾರಿಯವರು ಇಬ್ಬರು ಆರೋಪಿಗಳನ್ನು ದಸ್ತಗಿರಿ ಮಾಡಿ, ಆರೋಪಿತರಿಂದ 8,00,000/-ರೂ ನಗದು ಹಣ ಮತ್ತು 1,50,000/- ಬೆಲೆ ಬಾಳುವ ಒಂದು ಐಫೋನ್ ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿರುತ್ತಾರೆ.
ಕೇಂದ್ರ ವಿಭಾಗದ ಉಪ-ಪೊಲೀಸ್ ಆಯುಕ್ತರಾದ ಶ್ರೀ ಶ್ರೀನಿವಾಸ್‌ಗೌಡ ಐಪಿಎಸ್, ಹಲಸೂರುಗೇಟ್ ಉಪ-ವಿಭಾಗದ ಸಹಾಯಕ ಪೊಲೀಸ್ ಆಯುಕ್ತರಾದ ಶ್ರೀ.ವಿ.ನಾರಾಯಣಸ್ವಾಮಿ ರವರ ಮಾರ್ಗದರ್ಶನದಲ್ಲಿ ವಿಲ್ಸನ್‌ಗಾರ್ಡನ್ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ಶ್ರೀ.ಎ.ರಾಜು ರವರ ನೇತೃತ್ವದಲ್ಲಿ ಪೊಲೀಸ್ ಸಬ್‌ಇನ್ಸ್‌ಪೆಕ್ಟರ್ ರವರಾದ ಶ್ರೀ.ನಬೀಸಾ ವಾಧಿಕಾರ ಹಾಗೂ ಸಿಬ್ಬಂದಿಯವರುಗಳು ಪ್ರಕರಣವನ್ನು ಬೇದಿಸುವಲ್ಲಿ ಯಶಸ್ವಿಯಾಗಿರುತ್ತಾರೆ.
ಈ ಉತ್ತಮ ಕಾರ್ಯವನ್ನು ಬೆಂಗಳೂರು ನಗರದ ಪೊಲೀಸ್ ಆಯುಕ್ತರಾದ ಶ್ರೀ. ಬಿ .ದಯಾನಂದ ಮತ್ತು ಅಪರ ಪೋಲೀಸ್ ಆಯುಕ್ತರು ಪಶ್ಚಿಮ ಶ್ರೀ ಸತೀಶ್‌ಕುಮಾರ್ ರವರು ಶ್ಲಾಘಿಸಿರುತ್ತಾರೆ.