ಬ್ಯಾಟರಾಯನಪುರ ಪೊಲೀಸ್ ಠಾಣಾ ಸರಹದ್ದಿನಲ್ಲಿರುವ, ಎಲೆಕ್ಟ್ರೋ ಶೆಲ್ ಫೋನ್ ಡಿಸ್ಟ್ರಿಬ್ಯೂಟರ್ ಶಾಫ್ ನಲ್ಲಿ
ಉದ್ಯೋಗದಲ್ಲಿದ್ದ ಇಬ್ಬರು ಉದ್ಯೋಗಸ್ತರು ಡಿಸ್ಟ್ರೀಬ್ಯೂಟ್ ಮಾಡಿದ್ದ. ಹಣವನ್ನು ತೆಗೆದುಕೊಂಡು ಅವರ ಕಛೇರಿಗೆ ತೆರಳುತ್ತಿದ್ದಾಗ ಬ್ಯಾಟರಾಯನಪುರ ಪೊಲೀಸ್ ಠಾಣಾ ಸರಹದ್ದಿನ ಕಸ್ತೂರಿಬಾ ನಗರ, ಮೈಸೂರು ರಸ್ತೆಯಲ್ಲಿ ಇಬ್ಬರು ಅಸಾಮಿಗಳು ಪೊಲೀಸರೆ೦ಂದು ಹೇಳಿ FF, ಬಗ್ಗೆ ತಪಾಸಣೆ ಮಾಡುತ್ತಿದ್ದೇವೆ. ಎಂದು ತಿಳಿಸಿ, ನಂತರ ಸದರಿ ಉದ್ಯೋಗಸ್ತರಿಂದ ಅವರ ಬಳಿ ಇದ್ದ ಹಣ ಮತ್ತು ದ್ವಿಚಕ್ರ ವಾಹನವನ್ನು ಸುಲಿಗೆ ಮಾಡಿಕೊ೦ಡು ಹೋಗಿರುತ್ತಾರೆ.
ಈ ಬಗ್ಗೆ ಎಲೆಕ್ಟ್ರೋ ಶೆಲ್ ಫೋನ್ ಡಿಸ್ಟ್ರಿಬ್ಯೂಟರ್ ಶಾಫ್ ಮ್ಯಾನೇಜರ್ ರವರು ಬ್ಯಾಟರಾಯನಪುರ ಪೊಲೀಸ್ ಠಾಣೆಯಲ್ಲಿ ಸುಲಿಗೆ ಪ್ರಕರಣ ದಾಖಲಿಸಿರುತ್ತಾರೆ.
ತನಿಖೆಯನ್ನು ಮುಂದುವರಿಸಿದ ಬ್ಯಾಟರಾಯನಪುರ ಪೊಲೀಸರವರು ವಾಹನ ಚಾಲಯಿಸುತ್ತಿದ್ದ ನೌಕರನು ಹಾಗೂ ಪೊಲೀಸನೆಂದು ಬಿಂಬಿಸಿಕೊ೦ಡು ವಾಹನವನ್ನು ತಪಾಸಣೆ ಮಾಡುವ ನೆಪದಲ್ಲಿ ದ್ವಿಚಕ್ರ ವಾಹನ ಮತ್ತು ನಗದು ಹಣ ರೂ.3,40,000/- ಹಣವನ್ನು ಸುಲಿಗೆ ಮಾಡಿರುವುದು ಸಹೋದರರೆಂದು ತನಿಖೆಯಿಂದ ತಿಳಿದು ಬಂದಿರುತ್ತದೆ. ಸದರಿ ಸಹೋದರರು ಪೂರ್ವ ತಯಾರಿಯೊಂದಿಗೆ ಸುಲಿಗೆ ಪ್ರಕರಣವೆಂದು ಬಿಂಬಿಸುವುದಕ್ಕೋಸ್ಕರ, ಪೊಲೀಸರೆಂದು ಒಬ್ಬ ಸಹೋದರ ಮತ್ತು ಆತನ ಸ್ನೇಹಿತ ನಟಿಸಿ ಹಾಗೂ ಇನ್ನೋಬ್ಬ ನೌಕರನು ವಾಹನದಲ್ಲಿ ಹಿಂದೆ ಕೂರಿಸಿಕೊಂಡು ಬಂದು ನಿಜವಾಗಿಯೂ ಸುಲಿಗೆ ಆಗಿರುವಂತೆ ನಟಸಿರುವುದು ತನಿಖೆಯಿಂದ ಧೃಡಪಟ್ಟರುತ್ತದೆ. ವಾಹನ ಮತ್ತು ಹಣವನ್ನು ಜಪ್ತಿ ಮಾಡಲಾಗಿದೆ.
ಈ ಕಾರ್ಯಾಚರಣೆಯನ್ನು ಬೆಂಗಳೂರು ನಗರದ ಪಶ್ಚಿಮ ವಿಭಾಗದ ಉಪ ಪೊಲೀಸ್ ಆಯುಕ್ತರಾದ ಶ್ರೀ ಲಕ್ಷ್ಮಣ್
ನಿಂಬರ್ಗಿ, ಐ.ಪಿ.ಎಸ್, ಕೆ೦ಗೇರಿ ಗೇಟ್ ಉಪ-ವಿಭಾಗದ ಸಹಾಯಕ ಪೊಲೀಸ್ ಕಮೀಷನರ್‌ರವರಾದ ಶ್ರೀ. ಭರತ್ ಎಸ್ ರೆಡ್ಡಿ ರವರ ಸೂಕ್ತ ಮಾರ್ಗದರ್ಶನದಲ್ಲಿ, ಬ್ಯಾಟರಾಯನಪುರ ಪೊಲೀಸ್ ಠಾಣೆಯ ಪೊಲೀಸ್ ಇನ್ಸಪೆಕ್ಟರ್ ಶ್ರೀ. ನಿಂಗನಗೌಡ ಎ ಪಾಟೀಲ ರವರ ನೇತೃತ್ವದ ಸಿಬ್ಬಂಧಿಯವರ ತಂಡ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿರುತ್ತಾರೆ.
ಈ ಮೇಲ್ಕಂಡ ಅಧಿಕಾರಿಗಳ ಮತ್ತು ಸಿಬ್ಬಂದಿಯವರುಗಳ ಕರ್ತವ್ಯವನ್ನು ಬೆ೦ಗಳೂರು ನಗರದ ಪೊಲೀಸ್
ಆಯುಕ್ತರಾದ ಶ್ರೀ. ಬಿ.ದಯಾನಂದ ಮತ್ತು ಅಪರ ಪೊಲೀಸ್ ಆಯುಕ್ತರು ಪಶ್ಚಿಮ ಶ್ರೀ. ಎನ್.ಸತೀಶ್‌ಕುಮಾರ್ ರವರು ಪ್ರಶಂಸಿರುತ್ತಾರೆ.