ಸಂಪಿಗೆಹಳ್ಳಿ ಪೊಲೀಸರಿಗೆ ಒಬ್ಬ ವಿದೇಶಿ ಆಸಾಮಿ ಗಾಂಜಾ ಮಾರಾಟ ಮಾಡುತ್ತಿದ್ದಾನೆ ಎಂದು ದಿನಾಂಕ:- 08/07/2023ರ ರಾತ್ರಿ ದೊರೆತ ಖಚಿತ ಮಾಹಿತಿ ಮೆರೆಗೆ ಕೂಡಲೇ ಕಾರ್ಯ ಪ್ರವೃತ್ತರಾದ ಪೊಲೀಸರ ತಂಡ ದಾಳಿ ಮಾಡಿ ವಿದೇಶಿ ಪ್ರಜೆಯನ್ನು ವಶಕ್ಕೆ ಪಡೆದುಕೊಂಡಿರುತ್ತಾರೆ. ಸದರಿ ವಿದೇಶಿ ಪ್ರಜೆಯ ಬಳಿ ಇದ್ದ ಬ್ಯಾಗ್‌ನಲ್ಲಿ 1.4 ಕೆ.ಜಿ ಗಾಂಜಾ ಹಾಗೂ ಒಂದು ತೂಕದ ಯಂತ್ರವನ್ನು ವಶಪಡಿಸಿಕೊಳ್ಳಲಾಗಿದೆ. ಆತನನ್ನು ವಿಚಾರ ಮಾಡಲಾಗಿ ಆತನ ವೀಸಾ ಅವಧಿ ಮುಗಿದ ನಂತರವೂ ಅನಧಿಕೃತವಾಗಿ ಭಾರತ ದೇಶದಲ್ಲಿಯೇ ವಾಸವಾಗಿರುವುದು ತನಿಖೆಯಿಂದ ತಿಳಿದುಬಂದಿರುತ್ತದೆ. ಬಂಧಿತನ ವಿರುದ್ಧ ಎನ್.ಡಿ.ಪಿ.ಎಸ್ ಕಾಯ್ದೆ ಹಾಗೂ ಫಾರಿನರ್ಸ್ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಪ್ರಗತಿಯಲ್ಲಿರುತ್ತದೆ.
ದಾಳಿಯನ್ನು ಈಶಾನ್ಯ ವಿಭಾಗದ ಉಪ ಪೊಲೀಸ್ ಆಯುಕ್ತರಾದ ಶ್ರೀ. ಲಕ್ಷ್ಮೀಪ್ರಸಾದ್, ರವರ ಮಾರ್ಗದರ್ಶನದಲ್ಲಿ, ಸಂಪಿಗೆಹಳ್ಳಿ ಉಪ ವಿಭಾಗದ ಸಹಾಯಕ ಪೊಲೀಸ್ ಆಯುಕ್ತರಾದ ಶ್ರೀ. ಟಿ.ರಂಗಪ್ಪ ರವರ ನೇತೃತ್ವದಲ್ಲಿ ಸಂಪಿಗೆಹಳ್ಳಿ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಶ್ರೀ. ಕೆ.ಟಿ.ನಾಗರಾಜ್ ಹಾಗೂ ಸಿಬ್ಬಂದಿಯವರ ತಂಡವು ಆರೋಪಿಯನ್ನು ಬಂದಿಸುವಲ್ಲಿ ಯಶಸ್ವಿಯಾಗಿರುತ್ತಾರೆ.
ಈ ಮೇಲ್ಕಂಡ ಅಧಿಕಾರಿಗಳ ಮತ್ತು ಸಿಬ್ಬಂದಿಯವರುಗಳ ಕರ್ತವ್ಯವನ್ನು ಬೆಂಗಳೂರು ನಗರದ ಪೊಲೀಸ್
ಆಯುಕ್ತರಾದ ಶ್ರೀ. ಬಿ.ದಯಾನಂದ ಮತ್ತು ಅಪರ ಪೊಲೀಸ್ ಆಯುಕ್ತರು ಪೂರ್ವ ಶ್ರೀ.ರಮನ್‌ಗುಪ್ತಾ ರವರು
ಪ್ರಶಂಸಿರುತ್ತಾರೆ.
ವರದಿ : ಆಂಟೋನಿ ಬೇಗೂರು