ವಿ .ವಿ.ಪುರಂ ಪೊಲೀಸ್ ಠಾಣೆಯ ಪೊಲೀಸ್‌ರು ರಾಜಸ್ಥಾನದಿಂದ ಕೊಲಿಯ ಮುಖಾಂತರ ಮಾದಕ ವಸ್ತುವಾದ ಓಪಿಎಂ ಪಟ್ಟಿಯನ್ನು ಕಡಿಮೆ ಬೆಲೆಗೆ ತರಿಸಿಕೊಂಡು ಇದನ್ನು ಮನೆಯಲ್ಲಿ ಮಿಕ್ಸ್ ಗ್ರೈಂಡರ್ ಮೂಲಕ ಪುಡಿಮಾಡಿ ರಾತ್ರಿ ಪೂರಾ ನೀರಿನಲ್ಲಿ ನೆನೆಸಿಟ್ಟು ನಂತರ ಅದರ ನೀರನ್ನು ಪಾರ್ಟಿ ಮತ್ತು ಇತರೆ ಮೋಜು-ಮಸ್ತಿಯ ಕೂಟಗಳಲ್ಲಿ ಬರುವ ಕಾಲೇಜು ವಿದ್ಯಾರ್ಥಿಗಳು, ಸಾಫ್ಟ್ ವೇರ್ ಇಂಜಿನಿಯರುಗಳಿಗೆ ನೀಡುತ್ತಿರುತ್ತಾರೆ ಹಾಗೂ ಪುಡಿಯನ್ನು ಸಹ ಬೆಂಗಳೂರಿನಲ್ಲಿ ಮಾರಾಟ ಮಾಡುತ್ತಿದ್ದ ರಾಜಸ್ಥಾನ ಮೂಲದ ಒಬ್ಬ ವ್ಯಕ್ತಿಯನ್ನು ಬಂಧಿಸಿ ಆತನು ಮಾರಾಟ ಮಾಡಲು ವಶದಲ್ಲಿ ಇಟ್ಟುಕೊಂಡಿದ್ದ 55 ಕೆ.ಜಿ. ಮಾದಕ ವಸ್ತುವನ್ನು ಮತ್ತು ಸಾಗಾಣಿಕೆಗೆ ಬಳಸುತ್ತಿದ್ದ ಒಂದು ಆಪೆ ಲಗೇಜ್ ಆಟೋವನ್ನು ವಶಪಡಿಸಿಕೊಂಡಿರುತ್ತಾರೆ.
ಬೆಂಗಳೂರು ನಗರ ದಕ್ಷಿಣ ವಿಭಾಗದ ಉಪ ಪೊಲೀಸ್ ಆಯುಕ್ತರಾದ ಶ್ರೀ.ಕೃಷ್ಣಕಾಂತ ಐ.ಪಿ.ಎಸ್ ಮಾರ್ಗದರ್ಶನದಲ್ಲಿ,ವಿ .ವಿ.ಪುರಂ ಪ ವಿಭಾಗದ ಸಹಾಯಕ ಪೊಲೀಸ್ ಆಯುಕ್ತರಾದ ಶ್ರೀ.ನಾಗರಾಜ,ಜಿ ರವರ ಉಸ್ತುವಾರಿಯಲ್ಲಿ, ವಿ. ವಿ .ಪುರಂ ಪೊಲೀಸ್ ಠಾಣೆಯ ಪೊಲೀಸ್ ಇನ್ಸಪೆಕ್ಟರ್ ಶ್ರೀ.ಮಿರ್ಜಾ ಅಲಿ ರಜಾ ರವರ ನೇತೃತ್ವದಲ್ಲಿ ಪಿ.ಎಸ್.ಐಗಳಾದ ಶ್ರೀ.ಸಿ.ರಾಜೇಂದ್ರ ಪ್ರಸಾದ, ಶ್ರೀಮತಿ, ಇಲ್ಲವಾ, ಶ್ರೀ.ಮಂಜುನಾಥ ಶ್ರೀ.ಮಾರುತಿ ಟಿ. ಮತ್ತು ಶ್ರೀ.ರಾಮಚಂದ್ರ ರವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿರುತ್ತಾರೆ.
ಈ ಉತ್ತಮ ಕಾರ್ಯವನ್ನು ಮಾನ್ಯ ಬೆಂಗಳೂರು ಪೊಲೀಸ್ ಆಯುಕ್ತರಾದ
ಶ್ರೀ.ದಯಾನಂದ ಐ.ಪಿ.ಎಸ್, ರವರು ಮತ್ತು ಮಾನ್ಯ ಪಶ್ಚಿಮ ವಿಭಾಗದ ಅಪರ ಪೊಲೀಸ್ ಆಯುಕ್ತರಾದ
ಶ್ರೀ ಸತೀಶ್ ಕುಮಾರ್ , ಐ.ಪಿ.ಎಸ್, ರವರು ಶ್ಲಾಘಿಸಿರುತ್ತಾರೆ.
ವರದಿ : ಆಂಟೋನಿ ಬೇಗೂರು