ಬೆಂಗಳೂರು ನಗರದ ಸಿಸಿಬಿ ಮಹಿಳಾ ಸಂರಕ್ಷಣಾ ದಳದ ಅಧಿಕಾರಿ ರವರಿಗೆ ದೊರೆತ ಖಚಿತ ಮಾಹಿತಿ ಮೇರೆಗೆ ಬೆಂಗಳೂರಿನ ಎಂ.ಜಿ.ರಸ್ತೆಯ ಚರ್ಚ್ ಸ್ಟ್ರೀಟ್ ಎಂಪೈರ್ ಹೋಟೆಲ್ ಎದುರು ಭಾಗದಲ್ಲಿರುವ ಸ್ಟೋಕ್ ರಾಪ್ ಅಂಗಡಿಯಲ್ಲಿ ಭಾರತದಲ್ಲಿ ಮಾರಾಟವನ್ನು ನಿಷೇದಿಸಿರುವ ಎಲೆಕ್ನಿಕ್ ಸಿಗರೆಟ್ ಮತ್ತು ಇದಕ್ಕೆ ಭರ್ತಿ ಮಾಡುವ ಇತರೆ ಫಿಲಿಂಗ್ ವಸ್ತುಗಳು ಹಾಗೂ ವಿದೇಶಿ ಸಿಗರೇಟ್‌ಗಳನ್ನು ಮಾರಟ ಮಾಡುತ್ತಾ ಹಣ ಸಂಪಾದನೆ ಮಾಡುತ್ತಿರುತ್ತಾರೆಂದು ಖಚಿತ ಮಾಹಿತಿ ಆಧಾರಿಸಿ ಸಿಸಿಬಿ ಮಹಿಳಾ ಸಂರಕ್ಷಣಾ ದಳದ ಅಧಿಕಾರಿ ಮತ್ತು ಸಿಬ್ಬಂದಿಗಳು ಸ್ಟೋಕ್ ಶಾಪ್ ಅಂಗಡಿಯ ಮೇಲೆ ದಾಳಿ ಮಾಡಿ ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದಿಕೊಂಡಿರುತ್ತಾರೆ ಆರೋಪಿಗಳಿಂದ 5 ಲಕ್ಷ ಮೌಲ್ಯ ಬೆಲೆಬಾಳುವ ಇ ಸಿಗರೇಟ್ ಮತ್ತು ಅದರ ಬಿಡಿ ಭಾಗಗಳನ್ನು ವಶಪಡಿಸಿಕೊಂಡಿರುತ್ತದೆ.
ಆರೋಪಿಗಳು ಕೇಂದ್ರ ಸರ್ಕಾರದಿಂದ ನಿಷೇದವಾಗಿರುವ ಇ ಸಿಗರೇಟ್, ಲಿಕ್ವಿಡ್ ಮತ್ತು ಅದರ ಬಿಡಿಭಾಗಗಳನ್ನು ಹೊರ ದೇಶದಿಂದ ಅಕ್ರಮವಾಗಿ ಭಾರತಕ್ಕೆ ತಂದು ಮಾರಾಟ ಮಾಡುತ್ತಿರುವುದು ಕಂಡು ಬಂದಿರುತ್ತದೆ. ಆರೋಪಿಗಳ ವಿರುದ್ಧ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ತನಿಖೆಯಲ್ಲಿರುತ್ತದೆ.
ಮಾನ್ಯ ಜಂಟಿ ಪೊಲೀಸ್ ಆಯುಕ್ತರವರ ನಿರ್ದೇಶನದಂತೆ ಮಾನ್ಯ ಉಪಪೊಲೀಸ್
ಆಯುಕ್ತರವರ ಮಾರ್ಗದರ್ಶನದಲ್ಲಿ ಸಿಸಿಬಿ ಮಹಿಳಾ ಸಂರಕ್ಷಣಾ ದಳದ ಅಧಿಕಾರಿ ಹಾಗೂ
ಸಿಬ್ಬಂದಿಗಳು ಉತ್ತಮ ಕಾರ್ಯಚಾರಣೆ ಮಾಡಿರುತ್ತಾರೆ.
ಮೇಲೆ ತಿಳಿಸಿದ ಅಧಿಕಾರಿ ಮತ್ತು ಸಿಬ್ಬಂದಿಯವರ ಕಾರ್ಯವನ್ನು ಬೆಂಗಳೂರು ನಗರದ ಮಾನ್ಯ
ಪೊಲೀಸ್ ಆಯುಕ್ತರಾದ ಬಿ. ದಯಾನಂದ ರವರು ಶ್ಲಾಘಿಸಿರುತ್ತಾರೆ.