ದಿನಾಂಕ:22-06-2023 ರಂದು ಗಿರಿನಗರ ಪೊಲೀಸ್ ಠಾಣೆಯ ಎನ್.ಡಿ.ಪಿ.ಎಸ್ ಕಾಯ್ದೆ ಅಡಿ ದಾಖಲಾಗಿದ್ದ ಪ್ರಕರಣದಲ್ಲಿ ಆರೋಪಿಯನ್ನು ವಿಚಾರಣೆಗೊಳಪಡಿಸಿದಾಗ, ಆತನು ನೀಡಿದ ಮಾಹಿತಿ ಮೇರೆಗೆ ಮಾದಕವಸ್ತು ಗಾಂಜಾವನ್ನು ಮಹಾರಾಷ್ಟ್ರ ರಾಜ್ಯದಿಂದ ಸರಬರಾಜಾಗಿರುವ ಬಗ್ಗೆ ಮಾಹಿತಿಯನ್ನು ಸಂಗ್ರಹಿಸಿದ ಪೊಲೀಸರು, ತನಿಖೆಯನ್ನು ಮುಂದುವರೆಸಿದ ತನಿಖಾಧಿಕಾರಿಯು ಸಿಬ್ಬಂದಿಯೊಂದಿಗೆ ಮಹಾರಾಷ್ಟ್ರ ರಾಜ್ಯಕ್ಕೆ ತೆರಳಿ | ಜನ ಆರೋಪಿಗಳನ್ನು ವಶಕ್ಕೆ ಪಡೆದುಕೊಂಡು ಅವರುಗಳು ತಪ್ಪೋನ್ನೊಪ್ಪಿಕೊಂಡ ಮೇರೆಗೆ ಆರೋಪಿಗಳನ್ನು ದಸ್ತಗಿರಿ ಮಾಡಿರುತ್ತದೆ. ಸದರಿ ಆರೋಪಿಗಳು ಗಿರಿನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬಚ್ಚಿಟ್ಟಿರುವ ಸುಮಾರು 5೦,೦೦,೦೦೦/- ರೂ ಬೆಲೆಬಾಳುವ ಒಟ್ಟು 95 ಕೆ.ಜಿ 400 ಗ್ರಾಂ ಮಾದಕವಸ್ತು ಗಾಂಜಾವನ್ನು ಅಮಾನತ್ತು ಪಡಿಸಿಕೊಂಡಿರುತ್ತದೆ.
ಈ ಯಶಸ್ವಿ ಕಾರ್ಯಾಚರಣೆಯನ್ನು ಮಾನ್ಯ ಉಪ ಪೊಲೀಸ್ ಆಯುಕ್ತರು ದಕ್ಷಿಣ ವಿಭಾಗ ಶ್ರೀ ಪಿ. ಕೃಷ್ಣಕಾಂತ್ ರವರ ಮಾರ್ಗದರ್ಶನದಲ್ಲಿ ಶ್ರೀ ಬಿ. ನಾಗರಾಜ್ ಸಹಾಯಕ ಪೊಲೀಸ್ ಆಯುಕ್ತರು. ವಿವಿ ಪುರಂ ಉಪವಿಭಾಗ ರವರ ನೇತೃತ್ವದಲ್ಲಿ ಗಿರಿನಗರ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ಶ್ರೀ ಬಿ.ಎನ್. ಸಂದೀಪ್ ಕುಮಾರ್ ಹಾಗೂ ಸಿಬ್ಬಂದಿರವರ ತಂಡ ಯಶಸ್ವಿಯಾಗಿ ನಿರ್ವಹಿಸಿದೆ.
ಈ ಮೇಲೆ ತಿಳಿಸಿದ ಅಧಿಕಾರಿ ಹಾಗೂ ಸಿಬ್ಬಂದಿಯವರನ್ನು ಮಾನ್ಯ ಪೊಲೀಸ್ ಆಯುಕ್ತರು, ಬೆಂಗಳೂರು ನಗರ ಹಾಗೂ ಅಪರ ಪೊಲೀಸ್ ಆಯುಕ್ತರು, ಪಶ್ಚಿಮ ರವರು ಶ್ಲಾಘಿಸಿರುತ್ತಾರೆ.