ದಿನಾಂಕ:27/06/2023 ರಂದು ಒರಿಸ್ಸಾ ರಾಜ್ಯದಿಂದ ಅಪರಿಚಿತ ಆಸಾಮಿಗಳು ಬೃಹತ್ ಪ್ರಮಾಣದಲ್ಲಿ ಗಾಂಜಾ ಎಂಬ ಮಾದಕ ವಸ್ತುವನ್ನು ಬೆಂಗಳೂರು ನಗರದಲ್ಲಿ ಮಾರಾಟ ಮಾಡಲು ಬರುತ್ತಿರುತ್ತಾರೆಂಬ ಮಾಹಿತಿ ಮೇರೆಗೆ ದಾಳಿ ಕ್ರಮ ಜರುಗಿಸಿ 5 ಜನ ಆಸಾಮಿಗಳನ್ನು ವಶಕ್ಕೆ ಪಡೆದಿರುತ್ತಾರೆ. ಅವರುಗಳ ಬಳಿಯಿದ್ದ 28 ಕೆ.ಜಿ ತೂಕದ ಗಾಂಜಾ ವಶಪಡಿಸಿಕೊಂಡಿರುತ್ತದೆ. ಇದರ ಒಟ್ಟು ಮೌಲ್ಯ 14 ಲಕ್ಷಗಳಾಗಿರುತ್ತದೆ.
ಆರೋಪಿಗಳ ಬಳಿಯಿದ್ದ 05 ಮೊಬೈಲ್ಗಳನ್ನು ಮುಂದಿನ ತನಿಖೆಗಾಗಿ ವಶಪಡಿಸಿಕೊಂಡಿರುತ್ತದೆ. ಆರೋಪಿಗಳು ಒರಿಸ್ಸಾ ರಾಜ್ಯದ ಪಂಡಿಮುಂಡಾ ಗ್ರಾಮ, ಬೋಲಾಂಗೀರ್ ಜಿಲ್ಲೆಯವರಾಗಿರುತ್ತಾರೆ.
ಈ ಕಾರ್ಯಾಚರಣೆಯನ್ನು ಶ್ರೀ ಲಕ್ಷ್ಮೀ ಪ್ರಸಾದ್, ಐಪಿಎಸ್, ಉಪ ಪೊಲೀಸ್ ಆಯುಕ್ತರು ಈಶಾನ್ಯ ವಿಭಾಗ ರವರ ಮಾರ್ಗದರ್ಶನದಲ್ಲಿ ಶ್ರೀ ಆರ್. ಮಂಜುನಾಥ ಎ.ಸಿ.ಪಿ ಯಲಹಂಕ ಉಪವಿಭಾಗ ರವರ ನೇತೃತ್ವದಲ್ಲಿ ಶ್ರೀ ಗೋವಿಂದ ರಾಜು.ಬಿ, ಪೊಲೀಸ್ ಇನ್ಸ್ಪೆಕ್ಟರ್ ಠಾಣಾಧಿಕಾರಿ ಮತ್ತು ಸುಷ್ಮಾ.ಎಂ.ಎಲ್ ಪಿಎಸ್ಐ ಹಾಗೂ ಸಿಬ್ಬಂದಿಯವರ ತಂಡವು ಆರೋಪಿತರನ್ನು ಬಂಧಿಸಿ ಮಾಲನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿರುತ್ತಾರೆ. ಆರೋಪಿತರನ್ನು ಘನ ನ್ಯಾಯಾಲಯದಲ್ಲಿ ಹಾಜರುಪಡಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿರುತ್ತಾರೆ.
ಈ ಮೇಲ್ಕಂಡ ಅಧಿಕಾರಿಗಳ ಮತ್ತು ಸಿಬ್ಬಂದಿಯವರುಗಳ ಕರ್ತವ್ಯವನ್ನು ಪೊಲೀಸ್ ಆಯುಕ್ತರು,
ಬೆಂಗಳೂರು ನಗರ ಮತ್ತು ಅಪರ ಪೊಲೀಸ್ ಆಯುಕ್ತರು ಪೂರ್ವ ರವರು ಪ್ರಶಂಸಿರುತ್ತಾರೆ.
ವರದಿ : ಆಂಟೋನಿ ಬೇಗೂರು