ಮಡಿವಾಳ ಪೊಲೀಸ್ ಠಾಣೆಯಲ್ಲಿ ಮೊಬೈಲ್ ಪೋನ್ ಕಳವು ಪ್ರಕರಣ ದಾಖಲಾದ ಹಿನ್ನೆಲೆಯಲ್ಲಿ ಆರೋಪಿಗಳ ಪತ್ತೆಗಾಗಿ ಒಂದು ವಿಶೇಷ ತಂಡವನ್ನು ರಚನೆ ಮಾಡಿರುತ್ತಾರೆ. ಸದರಿ ತಂಡವು ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ಮೂರು ಜನ ಆರೋಪಿಗಳು ಕಳವು ಮಾಡಿದ್ದ ಮೊಬೈಲ್ ಪೋನ್‌ಗಳನ್ನು ಮಡಿವಾಳ ಪೊಲೀಸ್ ಠಾಣಾ ಸರಹದ್ದಿನಲ್ಲಿ ಮಾರಾಟ ಮಾಡಲು ಪ್ರಯತ್ನಿಸುತ್ತಿದ್ದಾಗ ಸದರಿ ಮೂರು ಜನ ಆರೋಪಿಗಳನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆಗೆ ಒಳಪಡಿಸಲಾಯಿತು. ವಿಚಾರಣೆ ವೇಳೆ ಆರೋಪಿಗಳು ಬಸ್‌ನಿಲ್ದಾಣ, ದೇವಸ್ಥಾನ ಮತ್ತು ಜನಬಿಡ ಪ್ರದೇಶಗಳಲ್ಲಿ ಮೊಬೈಲ್‌ಗಳನ್ನು ಕಳವು ಮಾಡುತ್ತಿದ್ದಾಗಿ ಒಪ್ಪಿಕೊಂಡಿರುತ್ತಾರೆ.
ಆರೋಪಿಗಳಿಂದ ಸ್ಯಾಮ್‌ಸಂಗ್ ಕಂಪನಿಯ 18, ರಿಯಲ್ ಮಿ ಕಂಪನಿ 07, ವಿವೋ ಕಂಪನಿಯ 18 ರೆಡ್‌ಮಿ ಕಂಪನಿಯ 16, ಒಪ್ಪೋ ಕಂಪನಿ 10, ಒನ್‌ಪ್ಲಸ್ ಕಂಪನಿಯ 08, ಪೋಕೋ ಕಂಪನಿಯ 13, ನಿರೋ ಕಂಪನಿಯ 04, ಗೂಗಲ್ ಫಿಕ್ಸಲ್ ಕಂಪನಿಯ 01, ಟೆಕ್ಸ್ ಕಂಪನಿಯ 01, ಇನ್ಫಿನಿಕ್ಸ್ ಕಂಪನಿಯ 01, ಹಾನರ್ ಕಂಪನಿಯ 01, ನೋಕಿಯಾ ಕಂಪನಿಯ 01, ಮೊಟೊರೋಲಾ ಕಂಪನಿಯ 01, ಐಫೋನ್ ಕಂಪನಿಯ 10, ಇತರೆ ಕಂಪನಿಗಳ 20 ಒಟ್ಟು 120 ಮೊಬೈಲ್ ಫೋನ್‌ಗಳನ್ನು ವತಪಡಿಸಿಕೊಂಡಿರುತ್ತದೆ. ಇವುಗಳ ಒಟ್ಟು ಮೌಲ್ಯ 25,00,000/- ರೂ ಗಳಾಗಿರುತ್ತದೆ.
ಬೆಂಗಳೂರು ನಗರ ಆಗ್ನೆಯ ವಿಭಾಗದ ಉಪ ಪೊಲೀಸ್ ಆಯುಕ್ತಕರಾದ ಸಿ.ಕೆ. ಬಾಬಾ ರವರು ಮತ್ತು
ಮಡಿವಾಳ ಉಪ ವಿಭಾಗದ ಸಹಾಯಕ ಪೊಲೀಸ್ ಆಯುಕ್ತರಾದ ಕೆ.ಸಿ.ಲಕ್ಷ್ಮೀನಾರಾಯಣ ರವರುಗಳ ಮಾರ್ಗದರ್ಶನದಲ್ಲಿ ಮಡಿವಾಳ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ವಿನಯ್ ಹೆಚ್.ಎನ್. ರವರ ನೇತೃತ್ವದ ತಂಡ ಹಾಗೂ ಅಪರಾಧ ವಿಭಾಗದ ಸಿಬ್ಬಂದಿಯವರು ಪ್ರಕರಣವನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿರುತ್ತಾರೆ
ಈ ಮೇಲ್ಕಂಡ ಅಧಿಕಾರಿಗಳ ಮತ್ತು ಸಿಬ್ಬಂದಿಯವರುಗಳ ಕರ್ತವ್ಯವನ್ನು ಮಾನ್ಯ ಪೊಲೀಸ್ ಆಯುಕ್ತರು ಮತ್ತು ಅಪರ ಪೊಲೀಸ್ ಆಯುಕ್ತರು ಪೂರ್ವ, ರವರು ಪ್ರಶಂಸಿರುತ್ತಾರೆ.
ವರದಿ : ಆಂಟೋನಿ ಬೇಗೂರು
***
___________________________________________________________________