ಬೆಂಗಳೂರು :ತಿಲಕನಗರ ಪೊಲೀಸ್ ಠಾಣೆಯ ಪೊಲೀಸರು, ಬೆಂಗಳೂರು ನಗರದ ವಿವಿಧ ಕಡೆಗಳಲ್ಲಿ ಕಾರುಗಳ ಮಾಲೀಕರಿಂದ, ಕಾರುಗಳನ್ನು ಬಾಡಿಗೆಗೆ ಪಡೆದು, ಕಾರುಗಳ ನಕಲಿ ದಾಖಲೆಗಳನ್ನು ಸೃಷ್ಟಿಸಿ ಅವುಗಳನ್ನು ಆಸಲಿ ದಾಖಲೆಗಳೆಂದು ನಂಬಿಸಿ, ಆ ಕಾರುಗಳನ್ನು ಬೇರೆಯವರ ಬಳಿ ಭದ್ರತೆಗಾಗಿ ಇಟ್ಟು ವಂಚನೆ ಮಾಡುವ ಉದ್ದೇಶದಿಂದ ಹಣ ಪಡೆದು ವಂಚಿಸುತ್ತಿದ್ದ.
ಆರೋಪಿಯನ್ನು ದಿನಾಂಕ:-19.06.2023 ರಂದು ದಸ್ತಗಿರಿ ಮಾಡಿ ಆರೋಪಿ ನೀಡಿದ ಮಾಹಿತಿ ಮೇರೆಗೆ ಬೆಂಗಳೂರು ನಗರದ ವಿವಿಧ ಕಡೆಗಳಲ್ಲಿ ಸಾರ್ವಜನಿಕರಿಂದ 25,00,000/-ರೂ.ಗಳಿಗೂ ಹೆಚ್ಚು ಹಣ ಪಡೆದು ವಂಚಿಸಿದ್ದು ಆತನಿಂದ ಸುಮಾರು 78,70,000/-ರೂ ಮೌಲ್ಯದ ಆರು ವಿವಿಧ ಕಂಪನಿಯ ಕಾರುಗಳು, ಒಂದು ದ್ವಿಚಕ್ರ ವಾಹನ ಹಾಗೂ ವಾಹನಗಳ ನಕಲಿ ದಾಖಲಾತಿಗಳು ಮತ್ತು ಮೊಬೈಲ್ ಪೋನ್‌ಗಳನ್ನು ವಶಪಡಿಸಿಕೊಳ್ಳುವಲ್ಲಿ ತಿಲಕನಗರ ಪೊಲೀಸರು ಯಶಸ್ವಿಯಾಗಿರುತ್ತಾರೆ.
ಆರೋಪಿಯಿಂದ ವಶಪಡಿಸಿಕೊಂಡಿರುವ ವಿವಿಧ ಕಂಪನಿಯ ಕಾರುಗಳ, ದ್ವಿಚಕ್ರ ವಾಹನ ಮತ್ತು ಮೊಬೈಲ್ ಫೋನ್ ಗಳ ವಿವರ ಈ ಕೆಳಕಂಡಂತೆ ಇರುತ್ತದೆ.
ವಿವಿಧ ಕಂಪನಿಯ ಕಾರುಗಳಾದ, ಫೋರ್ಡ್ ಈಕೋ ಸ್ಪೋಟ್ಸ್ ಕಾರ್, KA-01-MY-8631, ಟಾಟಾ ಟಿಗರ್ ಕಾರ್, KA-53-MF-9554, ಮಾರುತಿ ಸುಜುಕಿ ಎದ್ದಿಗೆ ಕಾರ್, KA-51-MT-3050, ಮಹೀಂದ್ರ ಎಕ್ಸ್.ಯು.ವಿ 500 ಕಾರ್, KA-05-MQ-0230, ಮಾರುತಿ ಸುಜುಕಿ ಸ್ವಿಫ್ಟ್ ಕಾರ್ KA-03-NQ-4244, ಟಾಟಾ ಇನ್ನೋವಾ ಕಾರ್, KA-05-MD-0840 ಹಾಗೂ ಟಿ.ವಿ.ಎಸ್ ಅಪ್ಪಾಚಿ ಬೈಕ್, KA-05-LN-4534, ಮತ್ತು 02 ವಿವೋ ಮೊಬೈಲ್ ಫೋನ್‌ಗಳು ಸೇರಿದಂತೆ ಇವುಗಳ ಮೌಲ್ಯ ಒಟ್ಟು 78,70,000/-ರೂ ಗಳಾಗಿರುತ್ತದೆ.
ಕಾರ್ಯಚರಣೆಯನ್ನು ಬೆಂಗಳೂರು ನಗರ ಆತ್ಮೀಯ ವಿಭಾಗದ ಮಾನ್ಯ ಉಪ ಪೊಲೀಸ್ ಆಯುಕ್ತರವರಾದ ಶ್ರೀ.ಸಿ.ಕೆ.ಬಾಬ ಮತ್ತು ಮೈಕೋ ಲೇಔಟ್ ಉಪ ವಿಭಾಗದ ಸಹಾಯಕ ಪೊಲೀಸ್ ಕಮೀಷನರ್ ರವರಾದ ಶ್ರೀ.ಎನ್.ಪ್ರತಾಪ್ ರೆಡ್ಡಿ ರವರ ಮಾರ್ಗದರ್ಶನದಲ್ಲಿ ತಿಲಕನಗರ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಶ್ರೀ.ಶಂಕರಾಚಾ.ಬಿ ರವರ ನೇತೃತ್ವದಲ್ಲಿ ಪಿ.ಎಸ್.ಐ ಶ್ರೀ.ಸದ್ದಾಂ ಹುಸೇನ್ ನದಾಪ್ ಮತ್ತು ಅಪರಾಧ ವಿಭಾಗದ ಸಿಬ್ಬಂದಿರವರುಗಳು ಪ್ರಕರಣವನ್ನು ಬೇದಿಸುವುವಲ್ಲಿ ಯಶಸ್ವಿಯಾಗಿರುತ್ತಾರೆ. ಇವರ ಉತ್ತಮ ಕಾರ್ಯವನ್ನು ಮಾನ್ಯ ಪೊಲೀಸ್ ಆಯುಕ್ತರು ಬೆಂಗಳೂರು ನಗರ ಹಾಗೂ ಅಪರ ಪೊಲೀಸ್ ಆಯುಕ್ತರು ಪೂರ್ವ, ಬೆಂಗಳೂರು ನಗರ ರವರು ಪ್ರಶಂಶಿಸಿರುತ್ತಾರೆ.
ಸಾರ್ವಜನಿಕರಲ್ಲಿ ವಿನಂತಿಸಿಕೊಳ್ಳುವುದೇನೆಂದರೆ, ಸಾರ್ವಜನಿಕರು ಇಂತಹ ಮೋಸ ವಂಚನೆಗಳಿಗೆ ಒಳಗಾಗಿದ್ದಲ್ಲಿ, ತಿಲಕ್‌ನಗರ ಪೊಲೀಸ್ ಠಾಣೆಯವರನ್ನು ಸಂಪರ್ಕಿಸಬೇಕೆಂದು ಕೋರಿದೆ.
ತಿಲಕ್ ನಗರ ಪೊಲೀಸ್ ಠಾಣೆ ದೂರವಾಣಿ ಸಂಖ್ಯೆ:080-2294-2571
ಪೊಲೀಸ್ ಇನ್ಸ್‌ಪೆಕ್ಟರ್ ಮೊಬೈಲ್ ನಂ:9480801621.
ವರದಿ : ಆಂಟೋನಿ ಬೇಗೂರು