ಇಂದು ಬೆಂಗಳೂರು ಕಮಿಷನರ್ ಕಚೇರಿಯಲ್ಲಿ ಮಹತ್ವದ ಸಭೆ ನಡೆಯಲಿದೆ.
ಈ ಸಭೆಯಲ್ಲಿ ರಾಜ್ಯ ಪೊಲೀಸ್ ಮಹಾನಿರ್ದೇಶಕ ಅಲೋಕ್ ಮೋಹನ್, ನಗರ ಪೊಲೀಸ್ ಆಯುಕ್ತ ದಯಾನಂದ್, ಹೆಚ್ಚುವರಿ ಪೊಲೀಸ್ ಆಯುಕ್ತರು ಸೇರಿ ಬೆಂಗಳೂರಿನ ಎಲ್ಲ ವಿಭಾಗದ ಡಿಸಿಪಿಗಳು ಭಾಗಿಯಾಗಲಿದ್ದಾರೆ. ಡಿಜಿ ಐಜಿಪಿಯಾದ ನಂತರ ಎರಡನೇ ಬಾರಿ ಬೆಂಗಳೂರಿನ ಹಿರಿಯ ಅಧಿಕಾರಿಗಳ ಜೊತೆ ಡಿಜಿ ಐಜಿಪಿ ಸಭೆ ನಡೆಸುತ್ತಿದ್ದು, ಬೆಳಗ್ಗೆ 11 ಕ್ಕೆ ನಿಗದಿಯಾಗಿರೋ ಸಭೆಯಲ್ಲಿ ಹಿರಿಯ ಐಪಿಎಸ್ ಅಧಿಕಾರಿಗಳು ಭಾಗವಹಿಸಲಿದ್ದಾರೆ. ಈ ವೇಳೆ ಸೋಷಿಯಲ್ ಮೀಡಿಯಾದಲ್ಲಿ ಹರಡುತ್ತಿರುವ ಫೇಕ್ ಸುದ್ದಿಗಳ ಬಗ್ಗೆ ಕ್ರಮದ ಬಗ್ಗೆ ಚರ್ಚೆ ನಡೆದಲಿದ್ದಾರೆ. ಕಳೆದ ತಿಂಗಳು ಬೆಂಗಳೂರಿನ ಐಪಿಎಸ್ ಗಳ ಸಭೆ ನಡೆಸಿದ್ದ ಅಲೋಕ್ ಮೋಹನ್, ಕಳೆದ ಬಾರಿ ಸಭೆಯಲ್ಲಿ ಕಾನೂನು ಸುವ್ಯವಸ್ಥೆ ಬಗ್ಗೆ ಚರ್ಚೆ ಮಾಡಿ ಬಾಕಿ ಉಳಿದಿದ್ದ ಪ್ರಕರಣಗಳ ಬಗ್ಗೆ ಡಿಟೇಲ್ಸ್ ಪಡೆದಿದ್ದರು.