ಬೆಂಗಳೂರು ನಗರದ ಪಶ್ಚಿಮ ವಿಭಾಗದ ವಿವಿಧ ಪೊಲೀಸ್ ಠಾಣೆಗಳು ಹಾಗೂ ಕಾಟನ್ ಪೇಟೆ ಪೊಲೀಸ್ ಠಾಣೆಯ ಸರಹದ್ದಿನಲ್ಲಿ ದ್ವಿಚಕ್ರ ವಾಹನಗಳನ್ನು ಕಳ್ಳತನ ಮಾಡುತ್ತಿದ್ದ 8 ಜನ ಆರೋಪಿಗಳನ್ನು ಕಾಟನ್ ಪೇಟೆ ಪೊಲೀಸರು ಬಂಧಿಸಿರುತ್ತಾರೆ. ಆರೋಪಿಗಳಿಂದ ಸುಮಾರು 20,00,000/-ರೂ ಬೆಲೆ ಬಾಳುವ 22 ದ್ವಿಚಕ್ರ ವಾಹನಗಳನ್ನು ಹಾಗೂ ಕಳ್ಳತನ ಮಾಡಲು ಬಳಕೆ ಮಾಡಿದ್ದ 01 ಆಟೋ ರಿಕ್ಷಾವನ್ನು ವಶಪಡಿಸಿಕೊಂಡಿರುತ್ತಾರೆ.
ಕಾಟನ್‌ಪೇಟೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ 4 ವಾಹನ ಕಳವು ಪ್ರಕರಣಗಳಲ್ಲಿ ತನಿಖೆ ಕೈಗೊಂಡು ಇದುವರೆವಿಗೂ 8 ಜನ ಆರೋಪಿಗಳನ್ನು ದಸ್ತಗಿರಿ ಮಾಡಿರುತ್ತಾರೆ. ಆರೋಪಿಗಳ ಮಾಹಿತಿಯ ಮೇರೆಗೆ ವಿವಿಧ ಪೊಲೀಸ್ ಠಾಣೆಗಳಾದ ಚಂದ್ರಾಲೇಔಟ್, ಜ್ಞಾನಭಾರತಿ, ಆಮೃತಹಳ್ಳಿ, ಹಲಸೂರು, ಸಂಪಗಿರಾಮನಗರ, ಕೆ.ಆರ್ ಮಾರ್ಕೆಟ್, ಹನುಮಂತನಗರ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿದ್ದ ಒಟ್ಟು 2) ಪ್ರಕರಣಗಳು ಪತ್ತೆಯಾಗಿರುತ್ತದೆ.
ಆರೋಪಿ ಮತ್ತು ಮಾಲು ಪತ್ತೆ ಕಾರ್ಯಾಚರಣೆಗೆ ಶ್ರೀ, ಲಕ್ಷ್ಮಣ ನಿಂಬರಗಿ, ಉಪ ಪೊಲೀಸ್ ಆಯುಕ್ತರು ಪಶ್ಚಿಮ ವಿಭಾಗ ರವರ ನೇತೃತ್ವದಲ್ಲಿ, ಶ್ರೀ ID ಕೆ.ಸಿ ಸಹಾಯಕ ಪೊಲೀಸ್ ಆಯುಕ್ತರು ಚಿಕ್ಕಪೇಟೆ ಉಪ-ವಿಭಾಗ ರವರ ಮಾರ್ಗದರ್ಶನದಲ್ಲಿ ಕಾಟನ್ ಪೇಟೆ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ಶ್ರೀ ಬಾಲರಾಜ್.ಜಿ ಹಾಗೂ ಅಧಿಕಾರಿ, ಸಿಬ್ಬಂದಿಯವರನ್ನೊಳಗೊಂಡ ತಂಡವನ್ನು ರಚಿಸಿದ್ದು, ಸದರಿ ತಂಡವು ಅವಿರತವಾಗಿ ಶ್ರಮಿಸಿ ಕಾಟನ್ ಪೇಟೆ ಪೊಲೀಸ್ ತಾಣೆಯ ಪ್ರಕರಣವೂ ಸೇರಿದಂತೆ ವಿವಿಧ ಪೊಲೀಸ್ ಠಾಣೆಯ 20 ಪ್ರಕರಣಗಳನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿರುತ್ತಾರೆ.