ಈ ದಿನ ಬೆಂಗಳೂರು ನಗರದ ಎಲ್ಲ ಪೊಲೀಸ್ ಅಧಿಕಾರಿಗಳು ನಗರ ಸಾರಿಗೆ ಬಸ್ಸುಗಳಲ್ಲಿ ಪ್ರಯಾಣಿಸಿ ಪ್ರಯಾಣ ಮಾಡುವಾಗ ಮಹಿಳೆಯರು ಅನುಸರಿಸಬೇಕಾದ ಸುರಕ್ಷಾ ಕ್ರಮಗಳು ಹಾಗೂ ಮಹಿಳೆಯರ ಸುರಕ್ಷತೆಗಾಗಿ ಪೊಲೀಸರು ಕೈಗೊಂಡಿರುವ ವಿವಿಧ ಕ್ರಮಗಳ ಬಗ್ಗೆ ಭಿತ್ತಿ ಪತ್ರಗಳನ್ನು ಹಂಚುವ ಮೂಲಕ ಅರಿವು ಮೂಡಿಸಿರುತ್ತಾರೆ.
ಮಹಿಳಾ ಸುರಕ್ಷತೆ ಬೆಂಗಳೂರು ನಗರ ಪೊಲೀಸರ ಮೊದಲ ಆದ್ಯತೆ. ಇವತ್ತು ಬೆಂಗಳೂರು ನಗರದ ಎಲ್ಲ ಪೊಲೀಸ್ ಅಧಿಕಾರಿಗಳು ನಗರ ಸಾರಿಗೆ ಬಸ್ಸುಗಳಲ್ಲಿ ಸಂಚರಿಸಿ ಮಹಿಳೆಯರ ಜೊತೆ ಮಾತುಕತೆ ನಡೆಸಿರುತ್ತೇವೆ. ಹಾಗೂ ಅವರಿಗೆ ಮಹಿಳೆಯರ ಸುರಕ್ಷತೆಗಾಗಿ ಪೊಲೀಸರು ಕೈಗೊಂಡಿರುವ ವಿವಿಧ ಕ್ರಮಗಳ ಬಗ್ಗೆ ಅರಿವು ಮೂಡಿಸಿರುತ್ತಾರೆ.
ನಗರದ ಹಲವೆಡೆ ಸೇಫ್ಟಿ ಐಸ್‌ಲ್ಯಾಂಡ್ ಸ್ಥಾಪನೆ
ಮಹಿಳೆಯರ ಸುರಕ್ಷತೆಗಾಗಿ ‘ಸೇಫ್ಟಿ ಐಸ್ ಲ್ಯಾಂಡ್’ ಎಂದು ಬೆಂಗಳೂರು ಪೊಲೀಸರು ವಿನೂತನ ಪ್ರಯತ್ನಕ್ಕೆ ಮುಂದಾಗಿದ್ದಾರೆ. ಇದಕ್ಕಾಗಿ ಮಹಿಳೆಯರು ಹೆಚ್ಚು ಓಡಾಡುವ ಸ್ಥಳಗಳು ಸೇರಿದಂತೆ 30 ಸ್ಥಳಗಳಲ್ಲಿ ಸೇಫ್ಟಿ ಐಸ್‌ಲ್ಯಾಂಡ್ ಸ್ಥಾಪಿಸಲಾಗಿದೆ. ಈ ಬಗ್ಗೆ ಕೇಂದ್ರ ವಿಭಾಗದ ಡಿಸಿಪಿ ಶ್ರೀನಿವಾಸ್ ಗೌಡ ಸಾರ್ವಜನಿಕವಾಗಿ ಜಾಗೃತಿ ಮೂಡಿಸಿದ್ದಾರೆ.
ಸಂಕಷ್ಟದ ಸಂದರ್ಭದಲ್ಲಿ ಮಹಿಳೆಯರು ಸೇಫ್ಟಿ ಐಸ್‌ಲ್ಯಾಂಡ್ ಮೂಲಕ ಬಟನ್ ಒತ್ತಿದರೆ ಕೂಡಲೇ ಅಲ್ಲಿಗೆ ಪೊಲೀಸರು ಬಂದು ರಕ್ಷಣೆ ನೀಡುವಂತಹ ವ್ಯವಸ್ಥೆ ರೂಪಿಗೊಳಿಸಲಾಗಿದೆ. ಏನೇ ಸಮಸ್ಯೆಯಾದರೂ ನೂತನ ವ್ಯವಸ್ಥೆ ಮೂಲಕ ಪೊಲೀಸರನ್ನು ಸಂಪರ್ಕಿಸಬಹುದಾಗಿದೆ.
ಹೇಗೆ ಕೆಲಸ ಮಾಡುತ್ತದೆ?
ಬೆಂಗಳೂರು ನಗರದದ್ಯಾಂತ ಸುಮಾರು 30 ಪ್ರಮುಖ ಸ್ಥಳಗಳಲ್ಲಿ ಮಹಿಳೆಯರ ಸುರಕ್ಷತೆಗಾಗಿ ಸೇಫ್ಟಿ ಐಸ್‌ಲ್ಯಾಂಡ್ ಸ್ಥಾಪಿಸಲಾಗಿದೆ. ಸೇಫ್ಟಿ ಐಸ್ಲ್ಯಾಂಡ್ನಲ್ಲಿರುವ ಒಂದು ಬಟನ್ ಅನ್ನು ಒತ್ತಿದರೆ, ಕಮಾಂಡ್ ಸೆಂಟರ್‌ಗೆ ಕೂಡಲೇ ಅಲರಾಂನಿಂದ ಮಾಹಿತಿ ರವಾನೆಯಾಗುತ್ತದೆ. ತಕ್ಷಣವೇ ಕಮಾಂಡ್ ಸೆಂಟರ್ನವರು ಹೊಯ್ಸಳ ವಾಹನವನ್ನು ಮಹಿಳೆಯರ ನೆರವಿಗೆ ಕಳುಹಿಸಿಕೊಡುತ್ತಾರೆ.
ಮಹಿಳೆಯರು, ಕಾಲೇಜ್ ಹೋಗುವ ಹೆಣ್ಣುಮಕ್ಕಳು BCP ಸುರಕ್ಷಾ app ಬಳಸಿ ಅಥವಾ 112 ಗೆ ಕರೆ ಮಾಡಿ.
ಸೈಬರ್ ಅಪರಾಧಕ್ಕೆ 1930 ಗೆ ಕರೆ ಮಾಡಿ.
ಜೊತೆಗೆ ಬೆಂಗಳೂರು ಮಹಿಳೆಯರಿಗೆ 2 ಮಹಿಳಾ ಪೊಲೀಸ್ ಠಾಣೆ ಸ್ಥಾಪಿತ ಶಿವಾಜಿನಗರ ಹಾಗೂ ಬಸವನಗುಡಿ ಅಲ್ಲಿ ಇರುತ್ತೆ, ಈ ಮಹಿಳಾ ಠಾಣೆಗಳು ಬೆಳಗ್ಗೆ 8 ರಿಂದ ರಾತ್ರಿ ವರೆಗೆ ತೆರೆದುರುತ್ತೆ. ಈ ಪೊಲೀಸ್ ಠಾಣೆಗಳಲ್ಲಿ ಮಹಿಳೆಯರ ಕುಂದುಕೊರತೆ ಆಲಿಸಿ ಸೂಕ್ತ ಕ್ರಮ ಕೈಗೊಂಡು ಮಹಿಳೆಯರಿಗೆ ಸಹಾಯಹಸ್ತ ನೀಡಿ ನ್ಯಾಯ ಒದಗಿಸುವುದು.
ವರದಿ : ಆಂಟೋನಿ ಬೇಗೂರು