ದಿನಾಂಕ:-18-01-2023ರ ರಾತಿ 1:30 ಗಂಟೆಯಲ್ಲಿ ಆಟೋ ಚಾಲಕನಾದ ಆಫೀದ್ ರವರು ಚಾಮೀಯಾ ಮಸೀದಿಯ ಬಳಿ ಇರುವ ಸವೆರಾ ಹೋಟೆಲ್ಗೆ ಹೋಗಿ ಟೀಯನ್ನು ಕುಡಿದು ವಿವಾ ಮೊಬೈಲ್ ಪೋನ್ನ್ನು ಟೇಬಲ್ ಮೇಲೆ ಇಟ್ಟಿದ್ದು, ಯಾರೋ ಕಳ್ಳರು ತನ್ನ ಮೊಬೈಲ್ ಫೋನ್ ಅನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಸಿಟಿ ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ಕಳವು ಪ್ರಕರಣ ದಾಖಲಾಗಿರುತ್ತದೆ.
ಆ ನಂತರದಲ್ಲಿ ಪ್ರಕರಣದ ತನಿಖೆ ಕೈಗೊಂಡು ಆರೋಪಿತನಾದ ಪೈರೋಜ್ ಖಾನ್ , ಸೋನು ಬನ್ ಅಕ್ರಂ ಪಾಷಾ, 28ವರ್ಷ ಎಂ.ಎಸ್.ಪಾಳ್ಯ ವಿದ್ಯಾರಣ್ಯಪರದ ವಾಸಿ ಆತನನ್ನು ದಸ್ತಗಿರಿ ಮಾಡಿ ಆತನನ್ನು ವಿಚಾರಣೆ ಮಾಡಲಾಗಿ ಆತನ ಮೂಲ ಚಿಕ್ಕಬಳ್ಳಾಪ್ಟರದ ಜಿಲ್ಲೆ, ಚಿಂತಾಮಣಿ ಪಟ್ಟಣದವನಾಗಿದ್ದು, ಆತನಿಂದ 3 ಸ್ಯಾಮ್ಸಂಗ್ ಮೊಬೈಲ್, 5 ವಿವಾ ಮೊಬೈಲ್, 3 ರೆಡ್ ಮಿ ಮೊಬೈಲ್ ಹಾಗೂ 5 ವಿವಿಧ ರೀತಿಯ ಮೊಬೈಲ್ಗಳನ್ನು ವಶಪಡಿಸಿಕೊಂಡಿರುತ್ತೇ. ಒಟ್ಟು 16 ಮೊಬೈಲ್ಗಳ ಅಂದಾಜು ರೂ.2,27,000/-ಆಗಿರುತ್ತದೆ.
ಕಾರ್ಯಚರಣೆಯನ್ನು ಬೆಂಗಳೂರು ನಗರದ ಡಿ.ಸಿ.ಪಿ(ಪಶ್ಚಿಮ) ಶ್ರೀ ಲಕ್ಷ್ಮಣ್ ಬನಿಂಬರಗಿ, ಚಿಕ್ಕಪೇಟೆ ಉಪ ವಿಭಾಗದ ಸಹಾಯಕ ಪೊಲೀಸ್ ಆಯುಕ್ತರಾದ ಶ್ರೀ ಕೆ.ಸಿ.ಗಿರಿ ರವರುಗಳ ಮಾರ್ಗದರ್ಶನದಲ್ಲಿ ಸಿಟಿಮಾರ್ಕೆಟ್ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ ಪೆಕ್ಟರ್ ಶ್ರೀ, ಎಂ.ಶಿವಕುಮಾರ್ ರವರ ನೇತೃತ್ವದಲ್ಲಿ ಸಿಬ್ಬಂದಿಯವರ ತಂಡ ಕಾರ್ಯಚರಣೆಯನ್ನು ಕೈಗೊಂಡು ಪ್ರಕರಣವನ್ನು ಭೇದಿಸುವಲ್ಲಿ ಯಶಸ್ವಿಯಾಗಿರುತ್ತಾರೆ.