ಚನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಕಳವು ಪ್ರಕರಣದಲ್ಲಿ ಆರೋಪಿ ದಂಡಪಾಣಿ ( ಮಣಿಕಂಠ ಈತನನ್ನು ದಸ್ತಗಿರಿಮಾಡಿ ಆರೋಪಿಯು ನೀಡಿದ ಮಾಹಿತಿ ಮೇರೆಗೆ ಸುಮಾರು 154 ಗ್ರಾಂ ತೂಕದ ಅಂದಾಜು ಬೆಲೆ 9.50,000/- ರೂಗಳ ಮೌಲ್ಯದ ಚಿನ್ನಾಭರಣಗಳನ್ನು ಹಾಗೂ 2 ದ್ವಿ-ಚಕ್ರ ವಾಹನಗಳು, ಅಂದಾಜು ಬೆಲೆ 10,000/-ರೂಗಳು ಒಟ್ಟು ಅಂದಾಜು ಬೆಲೆ 10,60,000/-ರೂಗಳ ಮೌಲ್ಯದ ಮಾಲುಗಳನ್ನು ಆರೋಪಿಯಿಂದ ವಶಪಡಿಸಿಕೊಂಡಿರುತ್ತೇವೆ.
ಈ ಪತ್ತೆ ಕಾರ್ಯವನ್ನು ಬೆಂಗಳೂರು ನಗರ, ದಕ್ಷಿಣ ವಿಭಾಗದ ಮಾನ್ಯ ಉಪ ಪೊಲೀಸ್ ಆಯುಕ್ತರು ಶ್ರೀ ಪಿ. ಕೃಷ್ಣಕಾಂತ್ ರವರ ಮಾರ್ಗದರ್ಶನದಲ್ಲಿ ವಿ.ವಿ ಪುರಂ ಉಪ ವಿಭಾಗದ ಮಾನ್ಯ ಸಹಾಯಕ ಪೊಲೀಸ್ ಆಯುಕ್ತರು ಶ್ರೀ ನಾಗರಾಜ ರವರ ನೇತೃತ್ವದಲ್ಲಿ ಸಿ.ಕೆ ಅಚ್ಚುಕಟ್ಟು ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಶ್ರೀ ಜಿ.ಉದಯರವಿ, ಪೊಲೀಸ್ ಸಬ್ ಇನ್ಸ್ಪೆಕ್ಟರ್ಗಳಾದ ಶ್ರೀ ಮಧು, ಅರವಿಂದ್ ಕುಮಾರ್ ಶ್ರೀ ಮಹೇಶ್ ಕುದರಿ ಹಾಗೂ ಅಪರಾಧ ವಿಭಾಗದ ಸಿಬ್ಬಂದಿಗಳು ಪ್ರಕರಣವನ್ನು ಭೇದಿಸುವಲ್ಲಿ ಯಶಸ್ವಿಯಾಗಿರುತ್ತಾನೆ.