ಶಾಂತಮ್ಮ, 60 ವರ್ಷ ರವರು ನಂದಿನಿಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯ ಲಗ್ಗೆರೆ. ವಾಸಿಯಾಗಿದ್ದು, ಈಕೆ ಒಂಟಿಯಾಗಿ ವಾಸವಿದ್ದು, ಈಕೆಯ ಮನೆಗೆ ಒಬ್ಬ ಅಪರಿಚಿತ 38-40 ವರ್ಷದ ಮಹಿಳೆಯೊಬ್ಬಳು ಶಾಂತಮ್ಮ ರವರ ಮನೆಗೆ ಆಗಾಗ್ಗೆ ಮನೆ ಬಾಡಿಗೆ ಇದೆಯೇ ಎಂದು ಕೇಳುವ ನೆಪದಲ್ಲಿ ಬರುತ್ತಿದ್ದು, ದಿನಾಂಕ 25-05-2023 ರಂದು ಬೆಳಗ್ಗೆ 09-30 ಗಂಟೆಯಿಂದ 12-00 ಗಂಟೆಯ ನಡುವೆ ಮನೆಗೆ ಬಂದು ಹಾಲನ್ನು ಉಕ್ಕಿಸುವುದಾಗಿ ಅಡುಗೆ ಮನೆಗೆ ಪಿರಾದಿಯನ್ನು ಕರೆದುಕೊಂಡು ಹೋಗಿ ದೊಣ್ಣೆಯಿಂದ ಏರಾದಿ ತಲೆಗೆ ಹೊಡೆದು ಆಕೆಯ ಕೊರಳಿನಲ್ಲಿದ್ದ ಚಿನ್ನದ ಸರವನ್ನು ಸುಲಿಗೆ ಮಾಡಿಕೊಂಡು ಹೋಗಿರುತ್ತಾಳೆ. ಈ ಸಂಬಂಧ ನಂದಿನಿಲೇಔಟ್ ಪೊಲೀಸ್ ಠಾಣೆಯಲ್ಲಿ ಸುಲಿಗೆ ಪಕರಣ ದಾಖಲಾಗಿರುತ್ತದೆ.
ಈ ಪ್ರಕರಣದ ಕೃತ್ಯ ನಡೆದ ಸ್ಥಳಕ್ಕೆ ಭೇಟಿ ನೀಡಿದ ಹಿರಿಯ ಅಧಿಕಾರಿಗಳು ಕೃತ್ಯ ನಡೆದ ಸ್ಥಳವನ್ನು ಪರಿಶೀಲಿಸಿ, ಒಂಟಿಯಾಗಿ ವಾಸವಿದ್ದ ವೃದ್ಧ ಮೇಲೆ ನಡೆದಿರುವ ಕೃತ್ಯವನ್ನು ಗಂಭೀರವಾಗಿ ಪರಿಗಣಿಸಿ ನಂದಿನಿ ಲೇಔಟ್ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ರವರ ನೇತೃತ್ವದಲ್ಲಿ ಒಂದು ತಂಡವನ್ನು ರಚಿಸಿದ್ದು, ಸದರಿ ತಂಡವು ಕೃತ್ಯ ನಡೆದ ಸ್ಥಳದ ಅಕ್ಕಪಕ್ಕವಿದ್ದ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸಿ ಆರೋಪಿತೆಯ ಚಹರೆಗಳನ್ನು ಪಡೆದುಕೊಂಡು ಈ ಕೃತ್ಯದಲ್ಲಿ ಭಾಗಿಯಾಗಿದ್ದ ಲಕ್ಷ್ಮೀ @ ಗಂಗಾ, 38 ವರ್ಷ ಎಂಬಾಕೆಯನ್ನು ದಸ್ತಗಿರಿ ಮಾಡಿ ಮಾಹಿತಿ ಮೇರೆಗೆ ಸುಲಿಗೆ ಮಾಡಿದ್ದ ಸುಮಾರು 80 ಸಾವಿರ ರೂ. ಬೆಲೆ ಬಾಳುವ 20 ಗ್ರಾಂ ಚಿನ್ನದ ಸರವನ್ನು ವಶಪಡಿಸಿಕೊಳುವಲ್ಲಿ ನುದಿನಿಲೇಔಟ್ ಪೊಲೀಸರು ಯಶಸ್ವಿಯಾಗಿರುತ್ತಾರೆ.
ಆರೋಪಿಯನ್ನು ಹೆಚ್ಚಿನ ವಿಚಾರಣೆಗೊಳಪಡಿಸಿದಾಗ
ಆರೋಪಿತೆಯು ಕೋರಮಂಗಲದ ಆಸ್ಪತ್ರೆಯೊಂದರಲ್ಲಿ ಶುಶೂಷಕಿ (ನರ್ಸಿಂಗ್) ಕೆಲಸ ಮಾಡಿಕೊಂಡಿದ್ದು, 2023 ನೇ ಸಾಲಿನಲ್ಲಿ ಅಶೋಕನಗರ ಪೊಲೀಸ್ ಠಾಣಾ ವ್ಯಾಪ್ತಿಯ ಸೈಂಟ್ ಫಿಲೋಮಿನಾ ಆಸ್ಪತ್ರೆಯಲ್ಲಿ ನರ್ಸ್ ನ ವೇಶದಲ್ಲಿ ಹೋಗಿ ರೋಗಿಯೊಬ್ಬರಿಗೆ ಮಂಪರು ಬರುವ ಇಂಜೆಕ್ಷನ್ ನೀಡಿ, ಅವರ ಕೊರಳಿನಲ್ಲಿದ್ದ ಚಿನ್ನದ ಸರವನ್ನು ಕಳವು ಮಾಡಿರುವ ಸಂಬಂಧ ಅಶೋಕನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ಜೈಲಿಗೆ ಹೋಗಿ ಬಂದಿರುವುದಾಗಿ ತನಿಖೆಯಿಂದ ತಿಳಿದು ಬಂದಿರುತ್ತದೆ.
ಈ ಪ್ರಕರಣದಲ್ಲಿ ಶ್ರೀ ಶಿವ ಪ್ರಕಾಶ್ ದೇವರಾಜು, ಉಪ ಪೊಲೀಸ್ ಆಯುಕ್ತರು, ಉತ್ತರ ವಿಭಾಗ ರವರ ಮಾರ್ಗದರ್ಶನದಲ್ಲಿ ಶ್ರೀ. ಪ್ರವೀಣ್ ಎಂ. ಸಹಾಯಕ ಪೊಲೀಸ್ ಆಯುಕ್ತರು. ಮಲ್ಲೇಶ್ವರಂ ಉಪ- ವಿಭಾಗ ಮತ್ತು ಶ್ರೀವೆಂಕಟೇಗೌಡ, ಪೊಲೀಸ್ ಇನ್ಸ್‌ಪೆಕ್ಟರ್, ನಂದಿನಿಲೇಔಟ್ ಪೊಲೀಸ್ ಠಾಣೆ ರವರ ನೇತೃತ್ವದಲ್ಲಿ ಹಾಗೂ ಅಪರಾಧ ಪತ್ತೆದಳದ ಸಿಬ್ಬಂದಿಯವರೊಂದಿಗೆ ಆರೋಪಿತೆಯನ್ನು ದಸ್ತಗಿರಿ ಮಾಡುವಲ್ಲಿ ಯಶಸ್ವಿಯಾಗಿರುತ್ತಾರೆ.
A.Antonty Raju- Citizen Reporter-Karnataka