ಮೈಸೂರು ಜಿಲ್ಲಾ ಪೊಲೀಸರಿಂದ ಅಧಿಕಾರಿಗಳಿಗೆ ಸಭೆ ನಡೆಸಲಾಯಿತು

ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಶ್ರೀಮತಿ‌.ಸೀಮಾ ಲಾಟ್ಕರ್ ಐಪಿಎಸ್ ರವರು Dysp, CPI, & PSI ವೃಂದದ ಅಧಿಕಾರಿಗಳ ಸಭೆ ನಡೆಸಿ ಪ್ರಕರಣಗಳ ವಿಲೇವಾರಿ ಕ್ರಮದ ಬಗ್ಗೆ , ಠಾಣೆಗಳು ಸಮುದಾಯ ಭಾಗಿತ್ವವನ್ನು ಒಳಗೊಂಡ ಜನಸ್ನೇಹಿ ಪೊಲೀಸ್ ಆಗಿರಬೇಕೆಂದು ಹಾಗೂ ಸಂಚಾರ ನಿಯಂತ್ರಣ, ಅಕ್ರಮ ಚಟುವಟಿಕೆಗಳ ಮೇಲೆ ಸೂಕ್ತ ಕ್ರಮ ಕೈಗೊಂಡು Area Domination ಕಾರ್ಯಾಚರಣೆ ನಡೆಸಲು ಕಟ್ಟುನಿಟ್ಟಾಗಿ ಸೂಚಿಸಿದರು. ಇದಲ್ಲದೆ ಮಹಿಳೆ ಮತ್ತು ಮಕ್ಕಳ ರಕ್ಷಣೆ ಹಾಗೂ ಅವರುಗಳ ಮೇಲಿನ ದೌರ್ಜನ್ಯ ತಡೆಯುವ ಕ್ರಮಗಳ ಕುರಿತಂತೆ ಸೂಚಿಸಿ, ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ನಿಟ್ಟಿನಲ್ಲಿ ಇಲಾಖಾ ಅಧಿಕಾರಿ ಸಿಬ್ಬಂದಿಗಳನ್ನು ದಕ್ಷತೆಯಿಂದ ಬಳಸಿಕೊಂಡು , ನೊಂದು ಬರುವ ನಾಗರೀಕರೊಡನೆ ಸಾವಧಾನದಿಂದ‌ ಎಲ್ಲರೂ ವರ್ತಿಸುವಂತೆ ಸೂಚಿಸಿದರು. ಅಲ್ಲದೆ ಇತ್ತೀಚಿನ ದಿನಗಳಲ್ಲಿ ಸೈಬರ್ ಅಪರಾಧಗಳು ಹೆಚ್ಚಾಗುತ್ತಿದ್ದು ಈ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಆಯೋಜಿಸಿ ಜಾಗೃತಿ ಮೂಡಿಸಲು ಆದೇಶಿಸಿದರು.

\"\"

Leave a Reply

Your email address will not be published. Required fields are marked *