ಹಾಸನ ಜಿಲ್ಲಾ ಪೊಲೀಸ್ ವತಿಯಿಂದ ನೂತನ ಇ -ಪೋರ್ಟಲ್ ವ್ಯವಸ್ಥೆ ಜಾರಿ

ಕಳೆದು ಹೋದ ಮೊಬೈಲ್ ಫೋನ್‌ಗಳನ್ನು ಪತ್ತೆ ಮಾಡಲು ಹಾಗೂ ಅವುಗಳ ದುರ್ಬಳಕೆ ತಡೆಯಲು ಹಾಸನ ಜಿಲ್ಲಾ ಪೊಲೀಸ್ ವತಿಯಿಂದ ನೂತನ ಇ-ಪೋರ್ಟಲ್‌ ವ್ಯವಸ್ಥೆ ಜಾರಿಗೆ ತರಲಾಗಿದೆ. ಈ ನೂತನ ವ್ಯವಸ್ಥೆಗಾಗಿ ಹೊಸದಾಗಿ ವಾಟ್ಸಾಪ್ ಮೊಬೈಲ್ ನಂಬರ್ “82779 59500\” ಪ್ರಾರಂಭಿಸಲಾಗಿದೆ.ಹಾಸನ ಜಿಲ್ಲಾ ಪೊಲೀಸ್ ವ್ಯಾಪ್ತಿಯಲ್ಲಿ ಸಾರ್ವಜನಿಕರು ತಮ್ಮ ಮೊಬೈಲ್ ಫೋನ್ ಕಳೆದುಕೊಂಡಲ್ಲಿ ಈ ಕೆಳಕಂಡಂತೆ ಕ್ರಮ ವಹಿಸಲು ತಿಳಿಸಿದೆ. ಮೊಬೈಲ್ ಫೋನ್ ಕಳೆದು ಹೋದಲ್ಲಿ ಕೂಡಲೇ ವಾಟ್ಸ್‌ಅಪ್ ಮೊಬೈಲ್ ನಂಬರ್ “82779 59500\” ಗೆ \’Hi” ಎಂದು Text Message ಕಳುಹಿಸುವುದು. ಸಂದೇಶ ಕಳುಹಿಸಿದ ಮೊಬೈಲ್‌ ನಂಬರ್‌ಗೆ ಒಂದು ಇ-ಪೋರ್ಟಲ್ ಲಿಂಕ್‌ನ ಸಂದೇಶ ಬರುತ್ತದೆ.

ಈ ಲಿಂಕ್ ಮೂಲಕ ತೆರೆದುಕೊಳ್ಳುವ ಇ-ಪೋರ್ಟಲ್‌ನಲ್ಲಿ ಕೇಳಲಾಗಿರುವ ಎಲ್ಲಾ ಅವಶ್ಯಕ ಮಾಹಿತಿಗಳನ್ನು ಸಾರ್ವಜನಿಕರು ಭರ್ತಿ ಮಾಡಿ Submit ಮಾಡುವುದು. ನಂತರ ಕಳೆದು ಹೋದ ಮೊಬೈಲ್ ಫೋನ್ ಪತ್ತೆಗೆ ಹಾಸನ ಜಿಲ್ಲಾ ಪೊಲೀಸ್‌ ವತಿಯಿಂದ ಕ್ರಮ ಕೈಗೊಳ್ಳಲಾಗುವುದು.

ಸಾರ್ವಜನಿಕರ ಅನುಕೂಲಕ್ಕಾಗಿ ಹಾಸನ ಜಿಲ್ಲಾ ಪೊಲೀಸ್‌ ವತಿಯಿಂದ ಮೇಲ್ಕಂಡಂತೆ ಹೊಸ ವಾಟ್ಸ್‌ಅಪ್ ವ್ಯವಸ್ಥೆಯನ್ನು ಪ್ರಾರಂಭಿಸಿದ್ದು, ಹಾಸನ ಜಿಲ್ಲಾ ಪೊಲೀಸ್ ವ್ಯಾಪ್ತಿಯಲ್ಲಿ ಮೊಬೈಲ್ ಕಳೆದುಕೊಂಡ ಸಾರ್ವಜನಿಕರು ಈ ನೂತನ ವ್ಯವಸ್ಥೆಯ ಉಪಯೋಗವನ್ನು ಪಡೆದುಕೊಳ್ಳುವುದು.

Leave a Reply

Your email address will not be published. Required fields are marked *