ರಂಜಾನ್ ಕೊನೆ ದಿನದ ಉಪವಾಸದ ಪ್ರಾರ್ಥನೆಗೆ ಮಸೀದಿಗೆ ತೆರಳುತಿದ್ದ ಬಾಲಕನ ಮೇಲೆ ನಾಯಿಗಳು ಏಕಾಏಕಿ ದಾಳಿ ನಡೆಸಿ ಗಾಯಗೊಳಿಸಿದ್ದು, ನಾಯಿಗಳ ಕೈಗೆ ಸಿಕ್ಕಿ ಪ್ರಾಣ ಉಳಿಸಿಕೊಳ್ಳಲು ಪರದಾಡುತ್ತಿದ್ದ ಬಾಲಕನ ಪ್ರಾಣವನ್ನ ಪೊಲೀಸ್ ಕಾನ್ಸ್ ಟೇಬಲ್ ವೊಬ್ಬರು ಉಳಿಸಿದ ಘಟನೆ ನಡೆದಿದೆ.
ಮುಂಜಾನೆ ಕೋಲಾರದ ರಹಮತ್ ನಗರದ 9 ವರ್ಷದ ಬಾಲಕ ಜಾಫರ್ ರಂಜಾನ್ ಕೊನೆಯ ದಿನದ ಜಾಗರಣೆಯನ್ನು ಮಸೀದಿಯಲ್ಲಿ ಮುಗಿಸಿದ್ದ.ಮನೆಗೆ ಬಂದು ಮತ್ತೆ ಮನೆಯಿಂದ ಪ್ರಾರ್ಥನೆಗಾಗಿ ಮಸೀದಿಗೆ ತೆರಳುತ್ತಿದ್ದ.ಈ ವೇಳೆ ನಾಯಿಗಳು ಮೇಲೆರೆಗಿ ಮನಸ್ಸು ಇಚ್ಛೆ ಕಚ್ಚಿ ಗಾಯಗೊಳಿಸಿದೆ. ನಾಯಿಗಳಿಂದ ಬಿಡಿಸಿಕೊಳ್ಳಲಾಗದೆ ಪ್ರಾಣವೇ ಕಳೆದುಕೊಳ್ಳುವ ಪರಿಸ್ಥಿತಿಯಲ್ಲಿ ಬಾಲಕ ಪರದಾಡುತ್ತಿದ್ದಂತಹ ಸಂದರ್ಭದಲ್ಲಿ ರಾತ್ರಿ ಗಸ್ತಿನಲ್ಲಿದ್ದ ಪೊಲೀಸ್ ಕಾನ್ಸ್ ಟೇಬಲ್ ಬಾಲಕನ ಚಿರಾಟ ಕಂಡು ಕೂಡಲೇ ರಕ್ಷಣೆಗೆ ದಾವಿಸಿ ನಾಯಿಗಳಿಂದ ಬಾಲಕನನ್ನು ರಕ್ಷಣೆ ಮಾಡಿ ಕೂಡಲೇ ಕೋಲಾರದ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿ ಮಾನವೀಯತೆ ಮೆರೆದಿದ್ದಾರೆ.