ದೇಶದ್ಯಾಂತ ಇರುವ 176 ಸ್ಥಳಗಳ 275 ಪರೀಕ್ಷಾ ಕೇಂದ್ರಗಳಲ್ಲಿ ಭಾರತೀಯ ಸೇನೆ ಅಗ್ನಿವೀರ್ ನೇಮಕಾತಿಗಾಗಿ ತನ್ನ ಮೊದಲ ಆನ್ಲೈನ್ ಸಾಮಾನ್ಯ ಪ್ರವೇಶ ಪರೀಕ್ಷೆಗಳನ್ನು ಇಂದಿನಿಂದ ಏ.26ರವರೆಗೆ ನಡೆಸಲು ತೀರ್ಮಾನಿಸಿದೆ.
ತಂತ್ರಜ್ಞಾನದ ವೇಗವನ್ನು ಮುಂದುವರಿಸಲು ಮತ್ತು ಡಿಜಿಟಲ್ ಇಂಡಿಯಾದ ಪ್ರೋತ್ಸಾಹದಿಂದ ಇದೇ ಮೊದಲ ಬಾರಿಗೆ ಆನ್ಲೈನ್ ಪರೀಕ್ಷೆಯನ್ನು ನಡೆಸುವ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ಭಾರತೀಯ ಸೇನೆಯ ಪ್ರಕಟಣೆ ತಿಳಿಸಿದೆ.
ಇದು ಭಾರತೀಯ ಸೇನೆಯ ನೇಮಕಾತಿ ಪ್ರಕ್ರಿಯೆಗಳಲ್ಲಿ ಪ್ರಮುಖ ಬದಲಾವಣೆಯನ್ನು ಸೂಚಿಸುತ್ತದೆ. ರಾಷ್ಟ್ರದಲ್ಲಿ ತಾಂತ್ರಿಕ ಮಿತಿ ಗಮನಾರ್ಹವಾಗಿ ಸುಧಾರಿಸಿದೆ ಮತ್ತು ರ್ವತ ಡಿಜಿಟಲ್ ಅರಿವಿನೊಂದಿಗೆ, ಯುವಜನರು ಈಗ ಆನ್ಲೈನ್ ಪರೀಕ್ಷೆಗಳನ್ನು ಕೈಗೊಳ್ಳಲು ಸಬಲರಾಗಿದ್ದಾರೆ ಎಂದು ಭಾರತೀಯ ಸೇನೆಯ ಪ್ರಕಟಣೆ ತಿಳಿಸಿದೆ.
ಈ ವರ್ಷದಿಂದ ಮೂರು ಹಂತಗಳಲ್ಲಿ ನೇಮಕಾತಿ ನಡೆಯಲಿದೆ. ಮೊದಲ ಹಂತದಲ್ಲಿ, ಎಲ್ಲಾ ಅಭ್ಯರ್ಥಿಗಳು ಆನ್ಲೈನ್ ಸಾಮಾನ್ಯ ಪ್ರವೇಶ ಪರೀಕ್ಷೆಗೆ ಒಳಗಾಗುತ್ತಾರೆ. ಎರಡನೇ ಹಂತದಲ್ಲಿ, ಶಾರ್ಟ್ಲಿಸ್ಟ್ ಮಾಡಿದ ಅಭ್ಯರ್ಥಿಗಳ ದೈಹಿಕ ಸಾಮಥ್ರ್ಯ ಪರೀಕ್ಷೆ ಮತ್ತು ದೈಹಿಕ ಮಾಪನ ಪರೀಕ್ಷೆಗಾಗಿ ಆಯಾ ಸೇನಾ ನೇಮಕಾತಿ ಕಚೇರಿ ನಿರ್ಧರಿಸಿದ ಸ್ಥಳಗಳಲ್ಲಿ ನೇಮಕಾತಿ ರ್ಯಾಲಿಗಳಿಗೆ ಕರೆಯಲಾಗುವುದು.
ಅಂತಿಮವಾಗಿ, ಮೂರನೇ ಹಂತದಲ್ಲಿ ಆಯ್ಕೆಯಾದ ಅಭ್ಯರ್ಥಿಗಳು ವೈದ್ಯಕೀಯ ಪರೀಕ್ಷೆಗೆ ಒಳಗಾಗುತ್ತಾರೆ. ಅದರ ನಂತರ, ಪತ್ರಿಕಾ ಪ್ರಕಟಣೆಯ ಪ್ರಕಾರ ಯಶಸ್ವಿ ಅಭ್ಯರ್ಥಿಗಳ ಅಂತಿಮ ಮೆರಿಟ್ ಪಟ್ಟಿಯನ್ನು ಘೋಷಿಸಲಾಗುತ್ತದೆ.
ಎಲ್ಲಾ ಏಳು ರಾಜ್ಯಗಳ 14 ನಗರಗಳಲ್ಲಿ 26 ಕೇಂದ್ರಗಳಲ್ಲಿ ಈಶಾನ್ಯ ವಲಯದಲ್ಲಿ ಪರೀಕ್ಷೆಯನ್ನು ನಡೆಸಲಾಗುವುದು. 14 ನಗರಗಳೆಂದರೆ ಅರುಣಾಚಲ ಪ್ರದೇಶದ ನಹರ್ಲಗುನ್, ದಿಬ್ರುಗಢ, ಗುವಾಹಟಿ, ಜೋರ್ಹತ್, ಅಸ್ಸಾಂನ ಸಿಲ್ಚಾರ್ ಮತ್ತು ತೇಜ್ಪುರ್, ಮಣಿಪುರದ ಇಂಫಾಲï, ಉಖ್ರುಲ್ ಮತ್ತು ಚುರಾಚಂದ್ಪುರ, ಮೇಘಾಲಯದ ಶಿಲ್ಲಾಂಗ್ಗ್, ಮಿಜೋರಾಂನ ಐಜ್ವಾಲï, ನಾಗಾಲ್ಯಾಂಡ್ನ ದಿಮಾಪುರ್ ಮತ್ತು ಕೊಹಿಮಾ ಮತ್ತು ತ್ರಿಪುರದ ಅಗರ್ತಲಾಗಳಲ್ಲಿ ಪರೀಕ್ಷೆಗಳು ನಡೆಯಲಿವೆ.