ಅಕ್ರಮ ಮಾದಕ ವಸ್ತು ಮಾರಾಟ ಪ್ರಕರಣ ಕೊಡಗು ಜಿಲ್ಲಾ ಪೊಲೀಸರಿಂದ ಕಾರ್ಯಚರಣೆ

ಕೊಡಗು ಜಿಲ್ಲಾ ವಾಪ್ತಿಯ ಕುಶಾಲನಗರ ಗ್ರಾಮಾಂತರ ಠಾಣಾ ಸರಹದ್ದಿನಲ್ಲಿ MDMA (Methylenedioxy Methamphetamine) ಎಂಬ ಮಾದಕ ವಸ್ತುವನ್ನು ಅಕ್ರಮವಾಗಿ ಮಾರಾಟ ಮಾಡುತ್ತಿದ್ದ ಪ್ರಕರಣವನ್ನು ಪತ್ತೆ ಮಾಡುವಲ್ಲಿ ಕೊಡಗು ಜಿಲ್ಲಾ ಪೊಲೀಸ್ ಯಶಸ್ವಿಯಾಗಿದೆ.

ದಿನಾಂಕ: 29.03.2023 ರಂದು ಕುಶಾಲನಗರ ತಾಲ್ಲೂಕು ಕೂಡಿಗೆ ಗ್ರಾಮದ ಸೇತುವೆ ಬಳಿ ಮಾದಕ ವಸ್ತು ಮಾರಾಟ ಮಾಡುತ್ತಿರುವ ಬಗ್ಗೆ ದೊರೆತ ಖಚಿತ ಮಾಹಿತಿ ಮೇರೆ ಮೇರೆ ಸ್ಥಳೀಯ ಪೊಲೀಸ್ ಅಧಿಕಾರಿಗಳಾದ ಗಂಗಾಧರಪ್ಪ ಆರ್.ವಿ ಡಿವೈ.ಎಸ್.ಪಿ ಸೋಮವಾರಪೇಟೆ ಉಪವಿಭಾಗ, ಮಹೇಶ್ ಬಿ.ಜಿ, ಸಿ.ಪಿಐ, ಕುಶಾಲನಗರ ವೃತ್ತ ನೇತೃತ್ವದ ಪುನೀತ್ ಡಿ.ಎಸ್, ಪಿ.ಎಸ್.ಐ, ದಿನೇಶ್ ಕುಮಾರ್‌ ಎಂ, ಪಿ.ಎಸ್‌.ಐ ಕುಶಾಲನಗರ ಗ್ರಾಮಾಂತರ ಠಾಣೆ ಮತ್ತು ಪೊಲೀಸ್ ಸಿಬ್ಬಂದಿಯವರನ್ನೊಳಗೊಂಡ ತಂಡ ದಾಳಿ ನಡೆಸಿ ಅಕ್ರಮವಾಗಿ MDMA ಎಂಬ ಮಾದಕವಸ್ತು ಮಾರಾಟ ಮಾಡುತ್ತಿದ್ದ ಕೇರಳ ಮೂಲದ ಕುಶಾಲನಗರ ನಿವಾಸಿಗಳಾದ ಅಕ್ಬರ್, ಮಹಮ್ಮದ್ ರಾಫಿ, ರಿಷಿಕುಮಾರ್ ಎಂಬುವವರನ್ನು ದಸ್ತಗಿರಿ ಮಾಡಿ 41 ಗ್ರಾಂ MDMA ಮತ್ತು 13 ಗ್ರಾಂ ಗಾಂಜಾ, ನಗದು ಹಾಗೂ ಕೃತ್ಯಕ್ಕೆ ಉಪಯೋಗಿಸಿದ ಮೊಬೈಲ್ ಫೋನ್ ಗಳು , 2 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ. ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಯವರ ಕಾರ್ಯವನ್ನು ಶ್ಲಾಘಿಸಲಾಗಿದೆ.

Leave a Reply

Your email address will not be published. Required fields are marked *