ಕಳವು ಪ್ರಕರಣ ಪತ್ತೆ, ಆರೋಪಿ ಬಂಧನ:

ಪೊನ್ನಂಪೇಟೆ ಮತ್ತು ಗೋಣಿಕೊಪ್ಪ ಠಾಣಾ ಸರಹದ್ದಿನಲ್ಲಿ ವ್ಯಾಪಾರ ಮಳಿಗೆಗಳ ಕ್ಯಾಶ್ ಕೌಂಟರಿನಿಂದ ಹಣ ಕಳ್ಳತನ ಮಾಡಿದ್ದ 3 ಪ್ರತ್ಯೇಕ ಪ್ರಕರಣಗಳನ್ನು ಪೊನ್ನಂಪೇಟೆ ಠಾಣೆ ಪೊಲೀಸರ ಪತ್ತೆ ಮಾಡಿ ಓರ್ವ ಆರೋಪಿಯನ್ನು ದಸ್ತಗಿರಿ ಮಾಡಿದ್ದಾರೆ.

ಪ್ರಕರಣ-1 ದಿನಾಂಕ: 20-04-2022 ರಂದು ರಾತ್ರಿ ಪೊನ್ನಂಪೇ‌ಟೆ ನಿವಾಸಿ ಸೀತಾರಾಮ್‌ ಎಂಬುವವರು ಕಾಫಿ ಅಂಗಡಿಯ ಶೆಟರ್ಸ್‌ ಬೀಗ ವನ್ನು ಯಾರೋ ಕಳ್ಳರು ತೆಗೆದು ಒಳನುಗ್ಗಿ ಕ್ಯಾಶ್‌ ಬಾಕ್ಸ್‌ ನಲ್ಲಿ ಇಟ್ಟಿದ್ದ ₹. 1,12,500 ನಗದು ಹಣವನ್ನು ಕಳವು ಮಾಡಿಕೊಂಡು ಹೋಗಿದ್ದು ಈ ಬಗ್ಗೆ ನೀಡಿದ ಪುಕಾರಿನ ಮೇರೆ ಪೊನ್ನಂಪೇಟೆ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದರು.

ಪ್ರಕರಣ-2 ದಿನಾಂಕ: 22-07-2022 ರಂದು ಪೊನ್ನಂಪೇಟೆ ನಗರದ ಕೌಶಲ್ಯ ಟ್ರೇಡರ್ಸ್‌ ಸಿಮೆಂಟ್‌ ಅಂಗಡಿಯ ಕ್ಯಾಶ್‌ ಬಾಕ್ಸ್‌ನ್ನು ಯಾರೋ ಕಳ್ಳರು ಒಡೆದು ₹. 10,000 ನಗದು ಕಳವು ಮಾಡಿಕೊಂಡು ಹೋಗಿದ್ದು ಈ ಬಗ್ಗೆ ನೀಡಿದ ಪುಕಾರಿನ ಮೇರೆ ಪೊನ್ನಂಪೇಟೆ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದರು.

ಪ್ರಕರಣ-3 ದಿನಾಂಕ: 26-05-2022 ರಂದು ಪೊನ್ನಂಪೇಟೆ ತಾಲ್ಲೂಕು ಗೋಣಿಕೊಪ್ಪ ಬೈಪಾಸ್‌ ರಸ್ತೆಯಲ್ಲಿರುವ ಪೂವಣ್ಣ ಎಂಬುವವರಿಗೆ ಸೇರಿದ ಡಿ.ಜಿ ಫಾರ್ಮ್ಸ್‌ ಮಳಿಗೆಗೆ ಇಬ್ಬರು ಅಪರಿಚಿತ ವ್ಯಕ್ತಿಗಳು ಫೀಡ್ಸ್‌ ಖರೀದಿ ನೆಪದಲ್ಲಿ ಮಾಲೀಕನ ಗಮನ ಬೇರೆಡೆ ಸೆಳೆದು ಡ್ರಾಯರ್‌ನಲ್ಲಿ ಇಟ್ಟಿದ್ದ ₹. 51,800 ನಗದು ಹಣವನ್ನು ಕಳವು ಮಾಡಿಕೊಂಡು ಹೋಗಿದ್ದು ಈ ಬಗ್ಗೆ ನೀಡಿದ ಪುಕಾರಿನ ಮೇರೆ ಗೋಣಿಕೊಪ್ಪ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದರು.

ವಿರಾಜಪೇಟೆ ಉಪವಿಭಾಗ ಡಿವೈ.ಎಸ್‌.ಪಿ ರವರ ಮಾರ್ಗದರ್ಶನದಲ್ಲಿ ಗೋಣಿಕೊಪ್ಪ ವೃತ್ತ ನಿರೀಕ್ಷಕರ ನೇತೃತ್ವದ ತನಿಖಾ ತಂಡ ಪ್ರಕರಣದ ಆರೋಪಿ ಹಾಸನ ನಗರದ ವಿಜಯನಗರ 2 ನೇಹಂತ, 4ನೇ ಕ್ರಾಸ್‌ ನಿವಾಸಿ ಮಹಮ್ಮದ್‌ ಇಕ್ಬಾಲ್‌ ತಂದೆ ಪೌತಿ ಜಬ್ಬಾರ್‌ ಎಂಬಾತನನ್ನು ದಸ್ತಗಿರಿ ಮಾಡಿ ಬಂಧಿತನಿಂದ ₹. 33,700 ನಗದು ಮತ್ತು ಕೃತ್ಯಕ್ಕೆ ಉಪಯೋಗಿಸಿದ ಕಾರನ್ನು ವಶಪಡಿಸಿಕೊಂಡಿದ್ದಾರೆ. ಪ್ರಕರಣದ ಪತ್ತೆ ಕಾರ್ಯದಲ್ಲಿ ಗೋಣಿಕೊಪ್ಪ ವೃತ್ತ ನಿರೀಕ್ಷಕರಾದ ಗೋವಿಂದರಾಜು, ಪೊನ್ನಂಪೇಟೆ ಠಾಣೆ ಪಿಎಸ್‌ಐ ಡಿ.ಕುಮಾರ್‌, ಪಿಎಸ್‌ಐ ಹೆಚ್.ಸಿ ಸುಬ್ರಹ್ಮಣ್ಯ, ಸಿಬ್ಬಂದಿಯವರಾದ ಎಂ.ಡಿ ಮನು, ಮಹದೇಶ್ವರಸ್ವಾಮಿ ಪಾಲ್ಗೊಂಡಿದ್ದರು. ಪೊಲೀಸರ ಕಾರ್ಯವನ್ನು ಶ್ಲಾಘಿಸಲಾಗಿದೆ.

Leave a Reply

Your email address will not be published. Required fields are marked *