ಕಾಮಸಮುದ್ರಂ ಪೊಲೀಸ್ ಠಾಣೆಯ ಸರಹದ್ದಿನಲ್ಲಿ ದಿನಾಂಕ:18-07-2022 ರಂದು ತಮಿಳುನಾಡಿನ ಸೇಲಂ ನಿಂದ ಅಕ್ಕಿ ಮೂಟೆಗಳನ್ನು ತುಂಬಿದ್ದ ಲಾರಿ ಸಂಖ್ಯೆ ಟಿ.ಎನ್.28, ಎ.ಪಿ 9919 9919 ರಲ್ಲಿ ಬಂಗಾರಪೇಟೆಗೆ ಬಂದು ಪಿ.ಆರ್.ಎಸ್ ಮಿಲ್ ಗೆ ಹೋಗಿ ಅಕ್ಕಿ ಮೂಟೆಗಳನ್ನು ಅನ್ ಲೋಡ್ ಮಾಡಿ 4,34,500 ರೂಪಾಯಿಗಳನ್ನು ಪಡೆದು ಅದರಲ್ಲಿ ಡೀಸೆಲ್ ಖರ್ಚಿಗೆ 10000/-ರೂಗಳನ್ನು ತೆಗೆದುಕೊಂಡು ಉಳಿದ 4,24,500 ರೂ ಹಣದ ಬಂಡಲ್ ಅನ್ನು ಲಾರಿಯಲ್ಲಿನ ಸೇಫ್ಟಿ ಬಾಕ್ಸ್ ನಲ್ಲಿಟ್ಟು ಲಾರಿಯನ್ನು ಚಲಾಯಿಸಿಕೊಂಡು ಬಂಗಾರಪೇಟೆಯಿಂದ ಕಾಮಸಮುದ್ರಂ ತೊಪ್ಪನಹಳ್ಳಿ ಮಧ್ಯೆ ಇರುವ ದೊಡ್ಡಬೊಂಪಲ್ಲಿ ಗ್ರಾಮವನ್ನು ಬಿಟ್ಟು ಸ್ವಲ್ಪ ಮುಂದೆ ಹೋದಾಗ ಲಾರಿಯ ಹಿಂಭಾಗದಿಂದ ಒಂದು ಟಯೋಟಾ ಕಾರ್ ನಂಬರ್ ಕೆಎ-50, 8660 ರಲ್ಲಿ ಮುಖಕ್ಕೆ ಮಾಸ್ಕ್ ಹಾಕಿಕೊಂಡಿದ್ದ ಸುಮಾರು 25 ರಿಂದ 30 ವರ್ಷ ವಯಸ್ಸಿನ ಒಟ್ಟು 04 ಜನರು ಲಾರಿಯನ್ನು ಓವರ್ ಟೇಕ್ ಮಾಡಿಕೊಂಡು ಬಂದು ಲಾರಿಗೆ ಅಡ್ಡಲಾಗಿ ನಿಲ್ಲಿಸಿ, 03 ಜನರು ಲಾರಿಯ ಕ್ಯಾಬಿನ್ ನಲ್ಲಿ ಹತ್ತಿಕೊಂಡು ಒಬ್ಬನು ಕೈಗಳಿಂದ ತಳಿಸಿ, ಲಾರಿಯ ಕ್ಯಾಬಿನ್ ನಲ್ಲಿನ ಬಾಕ್ಸ್ ಗಳನ್ನೆಲ್ಲಾ ಹುಡುಕಾಡಿ ಲಾರಿಯ ಸ್ಟೇರಿಂಗ್ ನಲ್ಲಿದ್ದ ಸೇಫ್ಟಿ ಬಾಕ್ಸ್ ನ ಬೀಗದ ಕೀಯನ್ನು ತೆಗೆದುಕೊಂಡು ಸೇಫ್ಟಿ ಬಾಕ್ಸ್ ಅನ್ನು ಓಪನ್ ಮಾಡಿ ಅದರಲ್ಲಿದ್ದ 4,24,500 ರೂ ಹಣದ ಬಂಡಲ್ ಅನ್ನು, ಹಾಗೂ ದೂರುದಾರರ ಜೀಬಿನಲ್ಲಿದ್ದ 10000/- ರೂ ಕಿತ್ತುಕೊಂಡು ಹೊರಟು ಹೋಗಿರುತ್ತಾರೆ.
ಈ ಬಗ್ಗೆ ಕಾಮಸಮುದ್ರಂ ಪೊಲೀಸ್ ಠಾಣೆಯಲ್ಲಿ ಮೊ.ಸಂ. 91/2022 ಕಲಂ. 394 ಐ.ಪಿ.ಸಿ ರಿತ್ಯಾ ಪ್ರಕರಣ ದಾಖಲಾಗಿ ತನಿಖೆ ಯಲ್ಲಿರುತ್ತದೆ. ಕೆ.ಜಿ.ಎಫ್. ಜಿಲ್ಲಾ ವರಿಷ್ಠಾಧಿಕಾರಿಗಳಾದ ಶ್ರೀಮತಿ. ಧರಣಿದೇವಿ ಐ.ಪಿ.ಎಸ್, ಡಿವೈ.ಎಸ್.ಪಿ. ಶ್ರೀ.ಪಿ.ಮುರಳಿಧರ್ ರವರ ಮಾರ್ಗದರ್ಶನದಲ್ಲಿ ಕಾಮಸಮುದ್ರಂ ಪೊಲೀಸ್ ವೃತ್ತ ನಿರೀಕ್ಷಕರಾದ ಶ್ರೀ.ಆನಂದ್ಕುಮಾರ್ ಜೆ.ಎನ್ ರವರ ನೇತೃತ್ವದಲ್ಲಿ ಪತ್ತೆ ತಂಡವನ್ನು ರಚನೆ ಮಾಡಿ ಆರೋಪಿಗಳನ್ನು ಪತ್ತೆ ಮಾಡಲು ಮೇಲಾಧಿಕಾರಿಗಳ ಮಾರ್ಗದರ್ಶನದಂತೆ ತನಿಖೆಯನ್ನು ಕೈಗೊಂಡು 5 ಆರೋಪಿಗಳನ್ನು ದಸ್ತಗಿರಿಮಾಡಿ ಆರೋಪಿಗಳಿಂದ ನಗದು ಹಣ 3,11,000/- ರೂ ಮತ್ತು ಆರೋಪಿಗಳು ಕೃತ್ಯಕ್ಕೆ ಉಪಯೋಗಿಸಿದ 6 ಮೊಬೈಲ್ ಪೋನ್ಗಳು, ಕಾರ್ ಸಂಖ್ಯೆ ಕೆಎ-50, 8660 ಮತ್ತು ದ್ವಿಚಕ್ರವಾಹನ ವನ್ನು ಅಮಾನತ್ತು ಪಡಿಸಿಕೊಂಡಿರುತ್ತೆ.
ಈ ಪ್ರಕರಣವನ್ನು ಪತ್ತೆ ಮಾಡಿರುವ ಅಧಿಕಾರಿಗಳಾದ ಶ್ರೀ.ಆನಂದ್ ಕುಮಾರ್ ಜೆ.ಎನ್, ಶ್ರೀ.ವಿಠ್ಠಲ್ ವೈ.ತಳವಾರ್, ಹೆಡ್ ಕಾನ್ಸ್ಟೇಬಲ್ ಕೃಷ್ಣ, ಕಾನ್ಸ್ಟೇಬಲ್ ಗಳಾದ ಮಂಜುನಾಥ, ಶಿವಕುಮಾರ್, ಬಿ.ಆರ್ ಜೀಪ್ ಚಾಲಕ ನರಸೋಜಿರಾವ್, ಶಶಿಧರ್ ರೆಡ್ಡಿ ರವರ ಕಾರ್ಯದಕ್ಷತೆಯನ್ನು ಪೊಲೀಸ್ ಅಧೀಕ್ಷಕರಾದ ಶ್ರೀಮತಿ.ಧರಣಿದೇವಿ ಐ.ಪಿ.ಎಸ್. ರವರು ಶ್ಲಾಘನೆ ಮಾಡಿರುತ್ತಾರೆ.