ಬೆಂಗಳೂರು : ಶ್ರೀಮತಿ. ಟಿ.ಬಿ ಪದ್ಮಾವತಿ ಎಸ್ .ಐ ಟ್ರಾಫಿಕ್ ಮಡಿವಾಳ ಠಾಣಾ ಅವರು ಇಷ್ಟಪಟ್ಟು ಆಯ್ಕೆ ಮಾಡಿಕೊಂಡ ವೃತ್ತಿಯಾಗಿತ್ತು .ಶ್ರೀಮತಿ ಟಿಬಿ ಪದ್ಮಾವತಿ ಅವರಿಗೆ ಪೊಲೀಸ್ ಇಲಾಖೆಯಲ್ಲಿ 28ವರುಷ ಸೇವೆಯಾಗಿತ್ತು .ಅದರಲ್ಲಿ 14ವರುಷ ಕ್ರೀಡೆಯಲ್ಲಿ ಸೇವೆ ಸಲ್ಲಿಸಿದರು ಅನಂತರ 14ವರುಷ ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸಿದ್ದಾರೆ .ಇವರ ಸೇವೆ ಯಲ್ಲಿ ಅನೇಕ ಪ್ರಶಸ್ತಿಗಳನ್ನು ಪಡೆದಿದ್ದಾರೆ ಅದರಲ್ಲೂ ಮುಖ್ಯವಾಗಿ ಮುಖ್ಯಮಂತ್ರಿ ಪದಕ ,ಏಕಲವ್ಯ ಪ್ರಶಸ್ತಿಯನ್ನು ಪಡೆದಿದ್ದಾರೆ .ಇದರಲ್ಲಿ ವಿಶೇಷ ಏನೆಂದರೆ ಭಾರತ ಕ್ರಿಕೆಟ್ ತಂಡದ ನಾಯಕರಾದ ಶ್ರೀ .ರಾಹುಲ್ ದ್ರಾವಿಡ್ ಅವರೊಂದಿಗೆ ಏಕಲವ್ಯ ಪ್ರಶಸ್ತಿ ಪಡೆದಿದ್ದಾರೆ .
ಶ್ರೀಮತಿ .ಪದ್ಮಾವತಿ ಅವರು ಕಾನೂನು ಮತ್ತು ಸುವ್ಯವಸ್ಥೆ ಅಡಿಯಲ್ಲಿ ಅನೇಕ ಠಾಣೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ ಅದರಲ್ಲಿ ವಿಶೇಷವಾಗಿ ಸುದ್ದುಗುಂಟೆ ಪಾಳ್ಯ ಹಾಗೂ ಮಡಿವಾಳ ಠಾಣೆಯಲ್ಲಿ ಸೇವೆ ಸಲ್ಲಿಸಿ ಸಾರ್ವಜನಿಕರಲ್ಲಿ ಮೆಚ್ಚುಗೆ ಪಡಿಸಿಕೊಂಡಿದ್ದಾರೆ .
ಪೋಲಿಸ್ ಇಲಾಖೆಯಲ್ಲಿ ಪುರುಷರು ಮತ್ತು ಮಹಿಳೆಯರು ಈ ರೀತಿಯ ಯಾವುದೇ ಭೇದಭಾವವಿಲ್ಲ .ಪುರುಷ ಅಧಿಕಾರಿಗಳು ಸಹ ಯಾವುದೇ ತಾರತಮ್ಯವನ್ನು ತೋರುವುದಿಲ್ಲ .ಈ ಇಲಾಖೆಯಲ್ಲಿಯೂ ಮಹಿಳೆಯರು ಯಶಸ್ವಿಯಾಗಿ ಕಾರ್ಯ ನಿರ್ವಹಿಸಬಹುದು .ಪೋಲಿಸ್ ಠಾಣಾ ವಿಭಾಗದಲ್ಲಿ ಕೆಲಸ ಮಾಡಲು ಆಸಕ್ತಿ ಇತ್ತು ಕೊನೆಗೆ ನಾಡಿನಲ್ಲಿ ಇದ್ದುಕೊಂಡೇ ನಾಡಿನ ಸೇವೆಯನ್ನು ಮಾಡಬೇಕೆಂದು ಉದ್ದೇಶದಿಂದ ಈ ವೃತ್ತಿ ಆಯ್ಕೆ ಮಾಡಿ ಕೊಂಡೆ ಈ ವೃತ್ತಿ ಬದುಕು ತೃಪ್ತಿ ನೀಡಿದೆ .ಪೊಲೀಸ್ ವೃತ್ತಿಯೇ ಒಂದು ಸಾವಿನ ಕೆಲಸ, ಇಲ್ಲಿ ನಿರ್ಭಯವಾಗಿ ಮತ್ತು ನಮ್ಮ ಮೇಲೆ ವಿಶ್ವಾಸವನ್ನು ಇರಿಸಿಕೊಂಡು ಕೆಲಸ ಮಾಡಬೇಕು ಆಗ ಮಾತ್ರ ಯಶಸ್ವಿಯಾಗಲು ಸಾಧ್ಯವಾಗುತ್ತದೆ ಎಂದು ಅವರು ತಿಳಿಸಿದರು ..
ನಮ್ಮ ಮುಖ್ಯ ವರದಿಗಾರರು ಕರ್ನಾಟಕದಿಂದ,