ಮೈಸೂರು ಜಿಲ್ಲಾ ಪೊಲೀಸರ ವತಿಯಿಂದ ಒಂದು ದಿನದ ಕಾರ್ಯಾಗಾರವನ್ನು ನಡೆಸಲಾಯಿತು

ಜಿಲ್ಲಾ ಅಭಿಯೋಜನಾ ಮತ್ತು ಜಿಲ್ಲಾ ಪೊಲೀಸ್ ವತಿಯಿಂದ ಇಂದು ಕಲಂ 293 CRPC ಅಡಿಯಲ್ಲಿ ನೀಡಲಾದ ತಜ್ಞ ವರದಿಗಳನ್ನು ನ್ಯಾಯಾಲಯಕ್ಕೆ ಹಾಜರ್ಪಡಿಸಿ ಸಾಕ್ಷ್ಯ ನೀಡುವಾಗ ಮತ್ತು ಕೋರ್ಟ್ ನಲ್ಲಿ ವಿಡಿಯೋ ಸಂವಾದ ನಡೆಸುವಾಗ ಅನುಸರಿಸಬೇಕಾದ ನಿಯಮಗಳ ಕುರಿತಾದ ಒಂದು ದಿನದ ಕಾರ್ಯಾಗಾರವನ್ನು ನಡೆಸಲಾಯಿತು. ಗೌರವಾನ್ವಿತ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರು ಆದ ಶ್ರೀ.ರಘುನಾಥ್ ಎಂ.ಎಲ್ ರವರು, ನಿವೃತ್ತ ಜಿಲ್ಲಾ ನ್ಯಾಯಾಧೀಶರಾದ ಶ್ರೀ.ಚಂದ್ರಶೇಖರ್.ಆರ್ ರವರು , ಹಿರಿಯ ಕಾನೂನು ಅಧಿಕಾರಿಗಳಾದ ಶ್ರೀಮತಿ.ಮಂಜುಳ ಎಂ.ಎಸ್ ರವರು , ಸರ್ಕಾರಿ ಅಭಿಯೋಜಕರಾದ ಶ್ರೀ.ಚಿನ್ನಪ್ಪ ರವರು, ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಶ್ರೀ. ಚೇತನ್. ಆರ್ ಐಪಿಎಸ್ ರವರು , ಅಪರ‌ ಪೊಲೀಸ್ ಅಧೀಕ್ಷಕರಾದ ಶ್ರೀ. ಆರ್.ಶಿವಕುಮಾರ್ ರವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *