ರೈತರ ಹಾಗೂ ವರ್ತಕರಿಂದ ಮೆಕ್ಕೆಜೋಳ ಖರೀದಿಸಿ ಹಣ ನೀಡದೆ ವಂಚನೆ ಮಾಡಿದ್ದವರಿಂದ ಹಣ ವಶಪಡಿಸಿಕೊಂಡು ರೈತರಿಗೆ ವಾಪಸ್ ಮರಳಿಸಿದ್ದರಿಂದ ರೈತರು ದಿನಾಂಕ-13-01-2022 ರಂದು ಅಭಿನಂದನಾ ಕಾರ್ಯಕ್ರಮವನ್ನು ಮಾನ್ಯ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಎ.ಬಸವರಾಜ್ ರವರ ಅಧ್ಯಕ್ಷತೆಯಲ್ಲಿ ಜಿಲ್ಲಾಧಿಕಾರಿ ಕಛೇರಿಯ ತುಂಗಭದ್ರಾ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದರು. ಕಾರ್ಯಕ್ರಮದಲ್ಲಿ ಮಾನ್ಯ ಸಂಸದರಾದ ಶ್ರೀ ಜಿ.ಎಂ.ಸಿದ್ದೇಶ್ವರ ರವರು, ಮಾನ್ಯ ಶಾಸಕರುಗಳಾದ ಶ್ರೀ ಎಸ್.ಎ. ರವೀಂದ್ರನಾಥ್, ಶ್ರೀ ಪ್ರೋ. ಲಿಂಗಣ್ಣ ರವರು, ಪೂಜ್ಯ ಮೇಯರ್ ಶ್ರೀ ವೀರೇಶ್ ರವರು, ಜಿಲ್ಲಾಧಿಕಾರಿಗಳಾದ ಶ್ರೀ ಮಹಾಂತೇಶ್ ಬೀಳಗಿ ರವರು, ಪೊಲೀಸ್ ಅಧೀಕ್ಷಕರವರಾದ ಶ್ರೀ ಸಿ.ಬಿ.ರಿಷ್ಯಂತ್ ಐಪಿಎಸ್ ರವರು, ಹೆಚ್ಚುವರಿ ಎಸ್ಪಿಯವರಾದ ಶ್ರೀ ರಾಮಗೊಂಡ ಬಸರಗಿ, ಡಿಸಿಆರ್ ಬಿ ಶ್ರೀ ಬಸವರಾಜ್ ಬಿ.ಎಸ್, ಪಿಐ ಶ್ರೀ ಬಂಕಾಳಿ ನಾಗಪ್ಪ ಹಾಗೂ ತಂಡ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಸಾಂಕೇತಿಕವಾಗಿ ಮಾನ್ಯ ಉಸ್ತುವಾರಿ ಸಚಿವರು ರೈತರಿಗೆ ಅವರ ಹಣ ಮರಳಿಸಿದರು.ಈ ಸಂದರ್ಭದಲ್ಲಿ ರೈತರು ಅಧಿಕಾರಿ ಸಿಬ್ಬಂದಿಗಳಿಗೆ ಸನ್ಮಾನಿಸಿದರು.