ದಿನಾಂಕ 13/12/2021ರಂದು ಜಿಲ್ಲಾ ಪೊಲೀಸ್ ಕಛೇರಿಯ ಕವಾಯತು ಮೈದಾನದಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ 2021 ನೇ ಸಾಲಿನ ಆಗಸ್ಟ್ ಮಾಹೆಯಿಂದ ನವೆಂಬರ್ ಮಾಹೆಯವರೆಗೆ ವರದಿಯಾಗಿರುವ ಒಟ್ಟು 54 ಮಾಲು ಕಳ್ಳತನ ಪ್ರಕರಣಗಳಲ್ಲಿ 844.671 ಗ್ರಾಂ ಬಂಗಾರದ ಆಭರಣಗಳು ಮತ್ತು 409.309 ಗ್ರಾಂ ಬೆಲೆಯ ಬೆಳ್ಳಿ ವಸ್ತುಗಳು, ದ್ವಿ ಚಕ್ರ ವಾಹನಗಳು, ಲಾರಿ, ಕ್ಯಾಂಟರ್ ಸೇರಿದಂತೆ ಇತರೆ ವಸ್ತುಗಳು ಸೇರಿ ಒಟ್ಟು 12505575/-ರೂಗಳ ಬೆಲೆಯ ಮಾಲನ್ನು ವಶಪಡಿಸಿಕೊಂಡಿದ್ದು, ಈ ವಸ್ತುಗಳನ್ನು ಗೌರವಾನ್ವಿತ ನ್ಯಾಯಾಲಯದ ಅನುಮತಿ ಪಡೆದು, ಶ್ರೀ ಚಂದ್ರಶೇಖರ್, ಐಪಿಎಸ್ ಮಾನ್ಯ ಆರಕ್ಷಕ ಮಹಾನಿರೀಕ್ಷಕರು, ಕೇಂದ್ರ ವಲಯ, ಬೆಂಗಳೂರು ರವರ ಸಮ್ಮುಖದಲ್ಲಿ ಮಾಲೀಕರಿಗೆ ಹಿಂದಿರುಗಿಸಲಾಗಿರುತ್ತದೆ.ಹಾಗೂ ಈ ಪ್ರಕರಣಗಳಲ್ಲಿ ಉತ್ತಮ ಕರ್ತವ್ಯ ನಿರ್ವಹಿಸಿದ ಅಧಿಕಾರಿ ಮತ್ತು ಸಿಬ್ಬಂದಿಯವರಿಗೆ ಮಾನ್ಯ ಕೇಂದ್ರ ವಲಯದ ಆರಕ್ಷಕ ಮಹಾನಿರೀಕ್ಷಕ ರವರು ಪ್ರಶಂಸನಾ ಪತ್ರಗಳನ್ನು ಮತ್ತು ಬೆರಳಚ್ಚು ಘಟಕದ ಅಧಿಕಾರಿ ಸಿಬ್ಬಂದಿಯವರಿಗೆ ಹತ್ತು ಸಾವಿರ ರೂಗಳ ನಗದು ಬಹುಮಾನವನ್ನು ಘೋಷಿಸಿದರು.