ಬೆಂಗಳೂರು ನಗರದ ಪ್ರತಿಷ್ಠಿತ ಕಾಲೇಜ್ ವಿದ್ಯಾರ್ಥಿಗಳಿಗೆ ಮತ್ತು ಸಾರ್ವಜನಿಕರಿಗೆ ಗಾಂಜಾ ,ಎಂ .ಡಿ.ಎಂ ಮಾತ್ರೆಗಳು, ಹೆರಾಯಿನ್ ಎಂಬ ಮಾದಕ ವಸ್ತು ಮಾರಾಟ ಮಾಡಿ ಯುವ ಪೀಳಿಗೆಗೆ ಮಾರಕವಾಗಿದಂತಹ ಅಂತರ್ ರಾಜ್ಯ ಆರೋಪಿಗಳ ವಶದಿಂದ ಸುಮಾರು 2,50,000/- ರೂ ಬೆಲೆಬಾಳುವ ಒಟ್ಟು 3 ಕೆಜಿ 750 ಗ್ರಾಂ ತೂಕದ ಗಾಂಜಾ, ಸುಮಾರು 4,50,000/-ರೂ ಬೆಲೆಬಾಳುವ 300 ಎಂ .ಡಿ .ಎಂ ಮಾತ್ರೆಗಳು ರೂ ಬೆಲೆ ಬಾಳುವ ಹೆರಾಯಿನ್ ಎಂಬ ಮಾದಕ ವಸ್ತು ಹಾಗೂ ಮಾದಕ ವಸ್ತು ಮಾರಾಟ ಮಾಡಿ ಸಂಪಾದನೆ ಮಾಡಿದ 3000ರೂ ನಗದು ಹಣ ಹೆಚ್ .ಎಸ್.ಆರ್ .ಲೇಔಟ್ ಪೊಲೀಸರು ವಶಪಡಿಸಿಕೊಂಡಿರುತ್ತಾರೆ .
ಕೇರಳ ಮೂಲದ ಒಬ್ಬ ಆಸಾಮಿ ಮತ್ತು ಮಣಿಪುರ ಮೂಲದ ಒಬ್ಬ ಆಸಾಮಿಯನ್ನು ಖಚಿತ ಮಾಹಿತಿಯ ಮೇರೆಗೆ ಮೇಲಧಿಕಾರಿಗಳ ನಿರ್ದೇಶನದ ಅನ್ವಯ ಆರೋಪಿಗಳನ್ನು ಬಂಧಿಸಿ ,ಆರೋಪಿಗಳ ವರ್ಷದಿಂದ ಸುಮಾರು
ಸುಮಾರು 2,50,000/- ರೂ ಬೆಲೆಬಾಳುವ ಒಟ್ಟು 3 ಕೆಜಿ 750 ಗ್ರಾಂ ತೂಕದ ಗಾಂಜಾ, ಸುಮಾರು 4,50,000/-ರೂ ಬೆಲೆಬಾಳುವ 300 ಎಂ .ಡಿ .ಎಂ ಮಾತ್ರೆಗಳು ರೂ ಬೆಲೆ ಬಾಳುವ ಹೆರಾಯಿನ್ ಎಂಬ ಮಾದಕ ವಸ್ತು ಹಾಗೂ ಮಾದಕ ವಸ್ತು ಮಾರಾಟ ಮಾಡಿ ಸಂಪಾದನೆ ಮಾಡಿದ 3000ರೂ ನಗದು ಹಣವನ್ನು ಅಮಾನತ್ತುಪಡಿಸಿಕೊಂಡು ಆರೋಪಿಗಳ ವಿರುದ್ಧ ಎನ್ .ಡಿ. ಪಿ .ಎಸ್ ಕಾಯ್ದೆ 1985ರ ಅನ್ವಯ ಕಾನೂನು ರೀತಿಯ ಕ್ರಮವನ್ನು ಜರುಗಿಸಲಾಗಿದೆ .
ಮಾನ್ಯ ಉಪ ಪೊಲೀಸ್ ಆಯುಕ್ತರು ಆಗ್ನೇಯ ವಿಭಾಗದ ಪೊಲೀಸರು ನಗರ ರವರಾದ ಶ್ರೀ. ಶ್ರೀನಾಥ್ ಮಹಾದೇವ್ ಜೋಷಿ ಐ .ಪಿ .ಎಸ್ ಮತ್ತು ಶ್ರೀ. ಸುಧೀರ್ .ಎಂ. ಹೆಗ್ಡೆ ಮಾನ್ಯ ಸಹಾಯಕ ಪೊಲೀಸ್ ಆಯುಕ್ತರು ಮಡಿವಾಳ ಉಪವಿಭಾಗ ಬೆಂಗಳೂರು ನಗರ ರವರ ಮಾರ್ಗದರ್ಶನದಲ್ಲಿ ಹೆಚ್.ಎಸ್.ಆರ್ ಲೇಔಟ್ ಪೊಲೀಸ್ ಠಾಣೆ ಪೊಲೀಸ್ ಇನ್ಸ್ ಪೆಕ್ಟರ್ ರವರಾದ ಶ್ರೀ. ಮುನಿರೆಡ್ಡಿ ವಿ., ಶ್ರೀ .ಕುಮಾರ್ ಮುಖ ನವರ್ ಪಿ. ಎಸ್ .ಐ .,ಶ್ರೀ ಶರಣಪ್ಪ ವಣಗೇರಿ ಎ.ಎಸ್ .ಐ . ಶ್ರೀ ಚೇತನ್ ರವರುಗಳು ದಾಳಿಯನ್ನು ನಡೆಸಿ ಮೇಲ್ಕಂಡ ಆರೋಪಿಗಳ ಬಂಧಿಸಿ ಮಾಲುಗಳನ್ನು ಅಮಾನತ್ತುಪಡಿಸಿಕೊಂಡು ಇರುತ್ತಾರೆ ಹೆಚ್.ಎಸ್.ಆರ್ ಲೇಔಟ್ ಪೊಲೀಸ್ ಠಾಣೆಯ ಸಿಬ್ಬಂದಿಯವರ ಈ ಅವರ ಈ ಕಾರ್ಯದ ಬಗ್ಗೆ ಮೇಲಾಧಿಕಾರಿಗಳು ಪ್ರಶಂಸೆ ಮತ್ತು ಮೆಚ್ಚುಗೆಯನ್ನು ವ್ಯಕ್ತಪಡಿಸಿರುತ್ತಾರೆ.
ನಮ್ಮ ಮುಖ್ಯ ವರದಿಗಾರರು ಕರ್ನಾಟಕದಿಂದ,