ಸರ್ಕಾರದ ರೈತಮಿತ್ರ ಯೋಜನೆಯಡಿ ಕಡಿಮೆ ಹಣದಲ್ಲಿ ಜಮೀನಿನ ಪಂಪ್ ಸೆಟ್ ಗಳಿಗೆ ಟಿ.ಸಿ. ಮಂಜೂರು ಮಾಡಿಸುವುದಾಗಿ ನಂಬಿಸಿ ಕಡೂರು ತಾಲ್ಲೂಕಿನಲ್ಲಿ ಬಹಳಷ್ಟು ರೈತರಿಂದ ಅರ್ಜಿ, ದಾಖಲಾತಿಗಳು ಮತ್ತು ತಲಾ ರೂ. 3-4 ಸಾವಿರ ಹಣ ಪಡೆದು, ನಕಲಿ ಚಲನ್ ನೀಡಿ ಮೋಸ ಮಾಡುತ್ತಿದ್ದ 2 ಜನ ಆರೋಪಿಗಳನ್ನು ಕಡೂರು ಪೊಲೀಸರು ದಸ್ತಗಿರಿ ಮಾಡಿದ್ದು.ಪ್ರಕರಣ ದಾಖಲಾದ 5 ಗಂಟೆಯೊಳಗಾಗಿ ಆರೋಪಿಗಳನ್ನು ದಸ್ತಗಿರಿ ಮಾಡಲಾಗಿದ್ದು. ಲ್ಯಾಪ್ ಟಾಪ್, ಪೆನ್ ಡ್ರೈವ್, ಮೊಬೈಲ್ ಫೋನ್ & ನಕಲಿ ಚಲನ್ ಗಳನ್ನು ವಶಪಡಿಸಿಕೊಂಡಿದ್ದು. PSI ಕಡೂರು ರಮ್ಯ ಎನ್. ಕೆ. ಮತ್ತು ಸಿಬ್ಬಂದಿಗಳಾದ ಕೃಷ್ಣಮೂರ್ತಿ, ರಾಜಪ್ಪ, ಮಧುಕುಮಾರ್ & ಈಶ್ವರಪ್ಪ ರವರು ಆರೋಪಿಗಳನ್ನು ಬಂಧಿಸಿರುತ್ತಾರೆ. ತನಿಖೆ ಮುಂದುವರೆದಿದೆ
ನಮ್ಮ ಮುಖ್ಯ ವರದಿಗಾರರು ಕರ್ನಾಟಕದಿಂದ,