ಸನ್ಮಾನ್ಯ ಕೇಂದ್ರ ಗೃಹ ಹಾಗೂ ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ರವರು ಹಾಗೂ ಶ್ರೀ ಬಸವರಾಜ ಬೊಮ್ಮಾಯಿ, ಸನ್ಮಾನ್ಯ ಮುಖ್ಯಮಂತ್ರಿಗಳು, ಕರ್ನಾಟಕ ಸರ್ಕಾರ ರವರು ದಾವಣಗೆರೆ ಜಿಲ್ಲೆ ಹರಿಹರ ತಾ. ಕೊಂಡಜ್ಜಿಯಲ್ಲಿ ನಿರ್ಮಿಸಿರುವ ನೂತನ ಪೊಲೀಸ್ ಪಬ್ಲಿಕ್ ವಸತಿ ಶಾಲೆ ಕಟ್ಟಡಗಳನ್ನು ಹಾಗೂ ದಾವಣಗೆರೆ ನಗರದ ಪಿಜೆ ಬಡಾವಣೆಯಲ್ಲಿ ಪೊಲೀಸ್ ಸಿಬ್ಬಂದಿ & ಅಧಿಕಾರಿಗಳ ನೂತನ ಪೊಲೀಸ್ ವಸತಿ ಗೃಹಗಳನ್ನು ಇಂದು (ದಿ-02-09-21ರಂದು ) ಜಿಎಂಐಟಿ ಕ್ಯಾಂಪಸ್ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಉದ್ಘಾಟಿಸಿದರು. ಮೊಬೈಲ್ ಪೊರೆನ್ಸಿಕ್ ಲ್ಯಾಬ್ ಹಾಗೂ ಪೊರೆನ್ಸಿಕ್ ಎಕ್ಷಿಬಿಷನ್ ಅನ್ನು ವೀಕ್ಷಿಸಿದರು.
ಸದರಿ ಕಾರ್ಯಕ್ರಮದಲ್ಲಿ ಶ್ರೀ ಆರಗ ಜ್ಞಾನೇಂದ್ರ ಮಾನ್ಯ ಗೃಹ ಮಂತ್ರಿಗಳು, ಕರ್ನಾಟಕ ಸರ್ಕಾರ, ಶ್ರೀ ಮುರುಗೇಶ್ ನಿರಾಣಿ, ಮಾನ್ಯ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವರು, ಮಾನ್ಯ ಸಂಸದರಾದ ಶ್ರೀ ಜಿ.ಎಂ.ಸಿದ್ದೇಶ್ವರ ರವರು,ಮಾನ್ಯ ಸಚಿವರುಗಳು, ಶ್ರೀ ಪ್ರವೀಣ್ ಸೂದ್ ಐಪಿಎಸ್, ಮಾನ್ಯ ಡಿಜಿ & ಐಜಿಪಿ, ಕರ್ನಾಟಕ ಪೊಲೀಸ್ ರವರು ಸೇರಿದಂತೆ ಶಾಸಕರುಗಳು, ಜನಪ್ರತಿನಿಧಿಗಳು, ಗಣ್ಯ ಅತಿಗಣ್ಯ ವ್ಯಕ್ತಿಗಳು, ಹಿರಿಯ ಪೊಲೀಸ್ ಅಧಿಕಾರಿಗಳು ಭಾಗವಹಿಸಿದ್ದರು.
ನಮ್ಮ ಮುಖ್ಯ ವರದಿಗಾರರು ಕರ್ನಾಟಕದಿಂದ,