ಜನ ಅಂತಾರಾಜ್ಯ ಕಳ್ಳರು ಸುರಪುರ ಪೋಲಿಸರ ವಶಕ್ಕೆಸುರಪುರ ತಾಲೂಕಿನ ಪೇಟ ಅಮ್ಮಾಪೂರ ಗ್ರಾಮದವರಾದ ಬಾಲಪ್ಪ ಎಂಬುವರ ಜುಲೈ 22 ರಂದು ಬ್ಯಾಂಕ್ ನಿಂದ 3 ಲಕ್ಷ ಹಣ ಡ್ರಾ ಮಾಡಿಕೊಂಡು ಮನೆಗೆ ಹೋಗುತ್ತಿರುವ ಸಂದರ್ಭದಲ್ಲಿ ನಗರದ ವಡ್ಡರ ಗಲ್ಲಿಯ ಸಮೀಪ ಬಾಲಪ್ಪ ಎನ್ನುವವರ ಗಮನ ಬೇರೆಡೆ ಸೆಳೆದು ಮೂರ್ ಲಕ್ಷ ಹಣವನ್ನು ಎಗರಿಸಿ ಪರಾರಿ ಯಾಗಿದ್ದ ಆರೋಪಿಗಳನ್ನು ಬಂಧಿಸುವಲ್ಲಿ ಸುರಪುರ ನಗರದ ಪೊಲೀಸರು ಯಶಸ್ವಿಯಾಗಿದ್ದಾರೆ.ಯಾದಗಿರಿ ಪೊಲೀಸ್ ವರಿಷ್ಠಾಧಿಕಾರಿಗಳಾದ ಸಿಬಿ ವೇದಮೂರ್ತಿ ಹಾಗೂ ಡಿವೈಎಸ್ಪಿ ವೆಂಕಟೇಶ ಉಗಿಬಂಡಿ ಮಾರ್ಗದರ್ಶನದಲ್ಲಿ ಸುರಪುರ ಠಾಣೆಯ ಸಿಬಿಐ ಸುನಿಲ್ ಕುಮಾರ್ ಮೂಲಿಮನಿ ಅವರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿದ ತಂಡ ಹುನುಗುಂದ ದಲ್ಲಿ ಸೆರೆಸಿಕ್ಕ ಆರೋಪಿಗಳನ್ನು ಸುರಪುರ ಪೊಲೀಸ್ ಠಾಣೆಗೆ ಕರೆತಂದು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ.
ನಮ್ಮ ಮುಖ್ಯ ವರದಿಗಾರರು ಕರ್ನಾಟಕದಿಂದ,