ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯು ತನ್ನ 50ನೇ ವರ್ಷದ ಸುವರ್ಣ ಮಹೋತ್ಸವದ 5 ಕಿ.ಮೀ ಮತ್ತು 10 ಕಿ.ಮೀ ಓಟವನ್ನು ಭಾರತೀಯ ಸ್ಟೇಟ್ ಬ್ಯಾಂಕ್ (ಎಸ್‌ಬಿಐ) ಸಹಯೋಗದೊಂದಿಗೆ ಆಯೋಜಿಸುತ್ತಿದೆ. ಈ ಓಟವು ಫಿಟ್‌ನೆಸ್ ಫಾರ್ ಆಲ್’ ಎಂಬ ಶೀರ್ಷಿಕೆ ಅಡಿಯಲ್ಲಿ ಹಾಗೂ ಮಾದಕ ವಸ್ತು ಮುಕ್ತ ಕರ್ನಾಟಕವನ್ನು ಪ್ರಚಾರಪಡಿಸಲು ಉದ್ದೇಶಿಸಲಾಗಿದೆ. ಈ ಓಟವನ್ನು ನಿಗದಿತ ಸಮಯದ 10 ಕಿಮೀ ಹಾಗೂ ಜಾಗೃತಿ ಮೂಡಿಸುವ 5 ಕಿ.ಮೀ ಓಟಗಳನ್ನಾಗಿ ವಿಭಾಗಿಸಿ ಆಯೋಜಿಸಲು ಉದ್ದೇಶಿಸಲಾಗಿದೆ. ಈ ಓಟದಲ್ಲಿ ಪಾಲ್ಗೊಳ್ಳಲು ಈಗಾಗಲೇ ನೋಂದಣಿ ಕಾರ್ಯವನ್ನು ಪ್ರಾರಂಭಿಸಲಾಗಿದ್ದು, ಬೆಂಗಳೂರು ನಗರ, ರಾಜ್ಯ ಹಾಗೂ ರಾಷ್ಟ್ರಾದ್ಯಾಂತ ಎಲ್ಲಾ ವಯೋಮಾನದ ಸರಿ ಸುಮಾರು 10,000 ಜನರು ಈ ಓಟದಲ್ಲಿ ಭಾಗವಹಿಸುವುದಾಗಿ ನಿರೀಕ್ಷಸಲಾಗಿದೆ. ಹೆಮ್ಮೆಯಾದ ವಿಧಾನಸೌಧದ ಮುಂಭಾಗದಿಂದ ಈ ಓಟವು ಬೆಂಗಳೂರಿನ ಪ್ರಾರಂಭವಾಗಲಿದ್ದು, ಸುಂದರವಾದ ಕಬ್ಬನ್ ಉದ್ಯಾನವನದ ಮುಖಾಂತರ ಹಾದು ಹೋಗಅದೆ. ಈ ಓಟವು ಹಸಿರು ಬೆಂಗಳೂರು, ಮಾದಕ ವಸ್ತು ಮುಕ್ತ ಕರ್ನಾಟಕ ಮತ್ತು ಸೈಬರ್ ಕ್ರೈಮ್ ಬಗ್ಗೆ ಜಾಗೃತಿಯನ್ನು ಮೂಡಿಸಲಿದೆ.
ಈ ಓಟದ ಮುಖ್ಯ ಗುರಿಯು ನಾಗರೀಕರಲ್ಲಿ ಆರೋಗ್ಯಕರ ಜೀವನವನ್ನು ಅಳವಡಿಸಲು ಉತ್ತೇಜನ ನೀಡುವುದು. ಅಲ್ಲದೇ, ಕರ್ನಾಟಕದ ಹೆಮ್ಮೆಯ ಪೊಲೀಸ್ ಬ್ಯಾಂಡ್ ತಂಡವು ಓಟದ ಪ್ರಾರಂಭದಿಂದ ಓಟವು ಹಾದುಹೋಗುವ ಆಯ್ದ ಸ್ಥಳಗಳಲ್ಲಿ ಬ್ಯಾಂಡ್ ಪ್ರದರ್ಶನ ನೀಡಲಿದ್ದಾರೆ.
ಈ ಓಟದಲ್ಲಿ 5 ಕಿ.ಮೀ ಮತ್ತು 10 ಕಿ.ಮೀ ವಿಭಾಗಗಳಲ್ಲಿ ಪ್ರತ್ಯೇಕವಾಗಿ 03 ವಿವಿಧ ನಗದು ಬಹುಮಾನ (ಸುಮಾರು ರೂ.18 ಲಕ್ಷಗಳು) ನೀಡಲು ಉದ್ದೇಶಿಸಲಾಗಿದೆ. ಅದರಂತೆ, 10 ಕಿ.ಮೀ ವಿಭಾಗದ 03 ವಿವಿಧ ಉಪ ವಿಭಾಗಗಳಲ್ಲಿ ಪುರುಷ ಮತ್ತು ಮಹಿಳಾ ವಿಜೇತರಿಗೆ ಪ್ರತ್ಯೇಕವಾಗಿ ತಲಾ 1.00 ಲಕ್ಷ ರೂಗಳನ್ನು ನೀಡಲಾಗುವುದು. ಹಾಗೆಯೇ 5 ಕಿ.ಮೀ ವಿಭಾಗದ 03 ಉಪ ವಿಭಾಗಗಳಿಗೆ ಮಹಿಳಾ ಮತ್ತು ಪುರುಷ ವಿಜೇತರಿಗೆ ಪ್ರತ್ಯೇಕವಾಗಿ ರೂ.40,000 ಗಳನ್ನು ನೀಡಲಾಗುವುದು. ಈ ಓಟದಲ್ಲ ಹಿರಿಯ ನಾಗರಿಕರು, ವಿಶೇಷ ಚೇತನರು, ಹವ್ಯಾಸಿ ಹಾಗೂ ವೃತ್ತಿಪರ ಓಟಗಾರರನ್ನು ಒಳಗೊಂಡಿರುತ್ತದೆ. ಈ ಓಟದಲ್ಲಿ ಭಾಗವಹಿಸುವವರಿಗೆ ಒಂದು ಟೀ-ಶರ್ಟ್, ಪದಕ ಮತ್ತು ಉಪಹಾರದ ವ್ಯವಸ್ಥೆ ಇರುತ್ತದೆ. ಆಸಕ್ತರು www.click2race.com ವೆಬ್‌ಸೈಟ್ ಮುಖಾಂತರ ನೊಂದಾಯಿಸಲು ಕೋರಲಾಗಿದೆ.