15-09-2023 ರಂದು ರಾತ್ರಿ ಸುಮಾರು 11-00 ಗಂಟೆಯ ಸಮಯದಲ್ಲಿ ಆರ್. ವಿ ಕಾಲೇಜ್‌ನ ಪಿದ್ಯಾರ್ಥಿಗಳಾದ ಮನ್ವಿತ್ ರಾವ್ 19 ವರ್ಷ, ಜೋಸ್ಟಾ 18 ವರ್ಷ, ದೃತಿ 18 ವರ್ಷ, ಆರೈತ 18 ವರ್ಷ, ರಿಯಾ 18 ವರ್ಷ ಎಂಬುವರುಗಳು ಸೇರಿಕೊಂಡು ಟ್ರಕ್ಕಿಂಗ್ ಮಾಡಿಕೊಂಡು ಸೂರ್ಯೋದಯವನ್ನು ನೋಡುವ ಉದ್ದೇಶದಿಂದ ಪಿಇಎಸ್ ಕಾಲೇಜ್ ಹತ್ತಿರದಲ್ಲಿರುವ ವೀರಭದ್ರೇಶ್ವರ ದೇವಸ್ಥಾನಕ್ಕೆ ಹೋಗುವ ಸಲುವಾಗಿ ತಮ್ಮ ಮೊಬೈಲ್‌ನಲ್ಲಿ ಉಬರ್ ಕ್ಯಾಬ್ ಬುಕ್ ಮಾಡಿಕೊಂಡು ಬಂದಿದ್ದು, ಈ ಸಮಯದಲ್ಲಿ ತಾವು ಹೋಗಬೇಕಾಗಿದ್ದ ಲೋಕೇಷನ್ ಅನ್ನು ತಪ್ಪಾಗಿ ನಮೂದಾಗಿದ್ದರಿಂದ ಮೇಲ್ದಂಡ 5 ಜನ ವಿದ್ಯಾರ್ಥಿಗಳು ತಡರಾತ್ರಿ 12-50 ಗಂಟೆಯ ಸಮಯದಲ್ಲಿ ಆಂಧ್ರಹಳ್ಳಿ ಮುಖ್ಯರಸ್ತೆಯ ವೆಂಕಟೇಶ್ವರ ಬಡಾವಣೆಯಲ್ಲರುವ ಫಾರ್ಮಸಿ ಬಳಿ ಬಂದು ವಿಳಾಸ ಪರಿಶೀಲನುತ್ತಿರುವಾಗ ಯಾರೋ 3 ಜನ ಅಪರಿಚಿತ ವ್ಯಕ್ತಿಗಳು ಒಂದು ಹೊಂಡಾ ಆಕ್ಟಿವಾ ದ್ವಿಚಕ್ರ ವಾಹನದಲ್ಲಿ ತಮ್ಮ ಕೈಯಲ್ಲಿ ಕಬ್ಬಿಣದ ಲಾಂಗ್, ತಲ್ವಾರ್ ಮತ್ತು ಡ್ಯಾಗಾರ್ ಹಿಡಿದುಕೊಂಡು ಮೇಲ್ಕಂಡ ವಿದ್ಯಾರ್ಥಿಗಳನ್ನು ಬೆದರಿಸಿ ಅವರ ಬಳಿ ಇದ್ದ ವಿವಿಧ ಕಂಪನಿಯ 4 ಮೊಬೈಲ್ ಫೋನ್‌ಗಳು, 3500/- ರೂ ನಗದು ಹಣವನ್ನು ಸುಲಿಗೆ ಮಾಡಿಕೊಂಡು ಹೋಗಿರುವ ಬಗ್ಗೆ ಮಾಹಿತಿಯನ್ನು ನಿಯಂತ್ರಣ ಕೋಣೆ ನಂ-112 ರಿಂದ ಪಡೆದುಕೊಂಡ 10 ನಿಮಿಷದಲ್ಲ ಸರಹದ್ದಿನಲ್ಲಿ ಹೊಯ್ಸಳ ವಾಹನ ಮತ್ತು ಅಬ್‌ನಲ್ಲ ಕರ್ತವ್ಯ ನಿರ್ವಹಿಸುತ್ತಿದ್ದ ಶ್ರೀ. ಸಿದ್ದಪ್ಪ ಎಎಸ್‌ಐ, ರೇಣುಕುಮಾರ್ ಹೆಚ್‌ಸಿ-8679 ಕಾಡೇಗೌಡ ಎಹಸಿ- 19031 ಹಾಗೂ ಕಸ್ತೂರಿ, ಪಿಸಿ-15593 ರವರುಗಳು ಸ್ಥಳಸ್ಥೆ ತರಳ, 5 ಜನ ವಿದ್ಯಾರ್ಥಿಗಳಿಂದ ಸುಲಗೆ ಮಾಡಿದ್ದ ಬಗ್ಗೆ ಲಭ್ಯವಿದ್ದ ಉಪಯುಕ್ತ ಮಾಹಿತಿಯನ್ನು ಪಡೆದುಕೊಂಡು ಕೃತ್ಯ ನಡೆದ ಸುಮಾರು 2 ಗಂಟೆಯ ಒಳಗೆ ಸುಲಿಗೆ ಮಾಡಿದ್ದ. 03 ಜನ ಆಸಾಮಿಗಳನ್ನು ಪತ್ತೆ ಮಾಡಿ ವಶಕ್ಕೆ ಪಡೆಕೊಳ್ಳುವಲ್ಲ ಯಶಸ್ವಿಯಾಗಿರುತ್ತಾರೆ.