ಬೆಂಗಳೂರು ನಗರದ 18ಕ್ಕೂ ಹೆಚ್ಚು ಸರ್ಕಾರೇತರ ಸಂಸ್ಥೆ (ಎನ್.ಜಿ.ಓ.) ಗಳಿಗೆ 100ಕ್ಕೂ ಹೆಚ್ಚು ಲ್ಯಾಪ್‌ಟಾಪ್‌ಗಳನ್ನು, ಖಾಸಗಿ ಕಂಪನಿಗಳು ನೀಡುವ ಸಿ.ಎಸ್.ಆರ್ ಫಂಡ್‌ನಿಂದ ಮತ್ತು ಪೆಟ್ರೋ ಕಂಪನಿಗಳಿಂದ * 50 ಲಕ್ಷದ ವರೆಗೆ ಸಹಾಯಧನವನ್ನು ಜನರಿಗೆ ಕೊಡಿಸಿಕೊಡುವುದಾಗಿ ನಂಬಿಸುತ್ತಿದ್ದ ವ್ಯಕ್ತಿಯ ವಶ.
ಈ ಅರೋಪಿಯು ಅಂಧರ, ವೃದ್ಧರ ಮತ್ತು ಅಂಗವಿಕಲರನ್ನು ಪೋಷಿಸುವ ಎನ್.ಜಿ.ಓ. ಸಂಸ್ಥೆಗಳ ಕಡೆಯಿಂದ ಆನ್‌ಲೈನ್ ಮುಖಾಂತರ * 2,53,000/- (ಎರಡು ಲಕ್ಷದ ಐವತ್ತುಮೂರು ಸಾವಿರ ರೂಪಾಯಿಗಳು) ಪಡೆದುಕೊಂಡು ಸ್ವಂತ ಖರ್ಚಿಗೆ ಬಳಸಿಕೊಂಡು ವಂಚಿಸಿರುತ್ತಾನೆ.
ಮಂಡ್ಯ, ತುಮಕೂರು ಮತ್ತು ಮೈಸೂರು ಜಿಲ್ಲೆಗಳಲ್ಲಿ ವಾಸಿಸುವಂತಹ ಅಮಾಯಕ ರೈತರನ್ನು ಗುರಿಯಾಗಿಸಿಕೊಂಡು ಅವರ ಜಮೀನನ್ನು ಅಭಿವೃದ್ಧಿ ಪಡಿಸುವುದಾಗಿ, ಸರ್ಕಾರದಿಂದ ನೀಡಲಾಗುವ ಸ್ತ್ರೀಂಗಳ ಮುಖಾಂತರ ಸಬ್ಸಿಡಿಗಳನ್ನು ಮಾಡಿಸಿಕೊಡುವುದಾಗಿ ನಂಬಿಸಿರುತ್ತಾನೆ. ರೈತಾಪಿ ವರ್ಗಾದವರು ಬೆಳೆಯುವಂತಹ ಎಳನೀರು, ಕಾಯಿಗಳನ್ನು ಹೊರರಾಜ್ಯಗಳಿಗೆ ಅಧಿಕ ಬೆಲೆಗೆ ಮಾರಾಟ ಮಾಡಿಸಿಕೊಡುವುದಾಗಿ ನಂಬಿಸಿರುತ್ತಾನೆ. ರೈತರಿಂದ ಹಣವನ್ನು ಪಡೆದು ಅದೇ ರೀತಿ ಹೊರರಾಜ್ಯಗಳಾದ ದೆಹಲಿ, ಲಕ್ಕೋ, ಆಗ್ರಾ, ಹಿಮಾಚಲಪ್ರದೇಶಗಳಲ್ಲಿ ವಾಸಿಸುವ ವ್ಯಾಪಾರಿಗಳನ್ನು ನಂಬಿಸಿ ಎಳನೀರು ವ್ಯವಹಾರಕ್ಕೆ ಪಾಲುದಾರರನ್ನಾಗಿ ಮಾಡಿಕೊಳ್ಳುತ್ತೇನೆಂದು ನಂಬಿಸಿ ಅವರುಗಳಿಂದಲೂ ಸಹ ಲಕ್ಷಾಂತರ ರೂಗಳನ್ನು ಪಡೆದುಕೊಂಡಿರುತ್ತಾನೆ. ಆತನು ರೈತರು ಮತ್ತು ವ್ಯಾಪಾರಿಗಳಿಗೆ ಯಾವುದೇ ವ್ಯವಹಾರ ಮಾಡಿಸದೇ, ಹಣವನ್ನು ಸಹ ಹಿಂತಿರುಗಿಸದೇ ತನ್ನ ಸ್ವಂತ ಖರ್ಚಿಗೆ ಬಳಸಿಕೊಂಡು ವಂಚಿಸಿರುತ್ತಾನೆ.
ಬೆಂಗಳೂರು ನಗರದಲ್ಲಿ ವಾಸಿಸುವ ಸಾರ್ವಜನಿಕರಿಗೆ ವಿವಿಧ ಪ್ರತಿಷ್ಠಿತ ಕಂಪನಿಯ ಲ್ಯಾಪ್‌ಟಾಪ್‌ಗಳನ್ನು ನೇರವಾಗಿ ಕಂಪನಿಗಳಿಂದ ಮತ್ತು ಫ್ಯಾಕ್ಟರಿಗಳಿಂದ ಉತ್ತಮ ಗುಣಮಟ್ಟದ ಲ್ಯಾಪ್‌ಟಾಪ್‌ಗಳನ್ನು ಅತೀ ಕಡಿಮೆ ಬೆಲೆಗೆ ಕೊಡಿಸಿಕೊಡುತ್ತೇನೆಂದು ನಂಬಿಸಿ ಅವರಿಂದ ಮುಂಗಡ ಹಣವನ್ನು ಪಡೆದು ತನ್ನ ಬ್ಯಾಂಕ್ ಖಾತೆಗೆ ಲಕ್ಷಾಂತರ ರೂಗಳನ್ನು ವರ್ಗಾವಣೆ ಮಾಡಿಸಿಕೊಂಡು, ತನ್ನ ಸ್ವಂತ ಖರ್ಚಿಗೆ ಹಣವನ್ನು ಬಳಸಿ ವಂಚಿಸಿರುತ್ತಾನೆ.
ಈ ರೀತಿ ಈತನು ಸುಮಾರು 8 ರಿಂದ 9 ವರ್ಷಗಳಿಂದ ಅಮಾಯಕ ಸಾರ್ವಜನಿಕರನ್ನು ನಂಬಿಸಿ ಅವರ ವಿಶ್ವಾಸವನ್ನು ಗಳಿಸಿ ಅವರುಗಳಿಂದ ಸುಮಾರು * 50 ಲಕ್ಷಗಳಿಗೂ ಹೆಚ್ಚಿನ ಹಣವನ್ನು ಪಡೆದುಕೊಂಡು ಯಾರಿಗೂ ಯಾವುದೇ ಕೆಲಸ ಮಾಡಿಕೊಡದೇ ಸುಮಾರು 3 ವರ್ಷಗಳಿಂದ ತಲೆಮರೆಸಿಕೊಂಡಿರುತ್ತಾನೆ. ಆತನ ವಿರುದ್ಧ ಹೊರರಾಜ್ಯಗಳಲ್ಲಿ ಮತ್ತು ಬೆಂಗಳೂರಿನ ನ್ಯಾಯಾಲಯಗಳಲ್ಲಿ ಹಲವಾರು ಚೆಕ್ ಬೌನ್ಸ್ ಪ್ರಕರಣಗಳು ಹಾಗೂ ಬೆಂಗಳೂರು ನಗರದ ಹಲಸೂರು ಪೊಲೀಸ್ ಠಾಣೆ ಮತ್ತು ಪೀಣ್ಯ ಪೊಲೀಸ್ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿರುತ್ತವೆ.
ಈತನ ವಿರುದ್ಧದ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿ, ಸಿ.ಸಿ.ಬಿ. ಘಟಕಕ್ಕೆ ವರ್ಗಾವಣೆ ಪಡೆದುಕೊಂಡು
ತನಿಖೆಯನ್ನು ಪ್ರಾರಂಭಿಸಿದ ಮೊದಲ ದಿನವೇ ತಲೆಮರೆಸಿಕೊಂಡ ವ್ಯಕ್ತಿಯನ್ನು
ಪಡೆದುಕೊಂಡಿರುತ್ತಾರೆ. ತನಿಖೆಯು ಪ್ರಗತಿಯಲ್ಲಿರುತ್ತದೆ.
ಸದರಿ ಕಾರ್ಯಾಚರಣೆಯನ್ನು ಉಪ ಪೊಲೀಸ್ ಆಯುಕ್ತರು, ಅಪರಾಧ-1 ಮತ್ತು ಸಹಾಯಕ ಪೊಲೀಸ್ ಆಯುಕ್ತರು, ವಿಶೇಷ ವಿಚಾರಣಾ ದಳ ರವರ ಮಾರ್ಗದರ್ಶನದಲ್ಲಿ, ಪೊಲೀಸ್ ಇನ್ಸ್‌ಪೆಕ್ಟರ್ ಹಾಗೂ ಸಿಬ್ಬಂದಿಗಳು ಆರೋಪಿಯನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿರುತ್ತಾರೆ.