ಹೊಸಕೋಟೆ:ಸೆಪ್ಟೆಂಬರ್ ತಿಂಗಳಲ್ಲಿ ವಿವಿಧ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಆರೋಪಿಗಳನ್ನು ಪತ್ತೆ ಮಾಡಿ ಒಂದು ಕೋಟಿ ಮೌಲ್ಯದ 900 ಗ್ರಾಂ ಚಿನ್ನಾಭರಣ ಮತ್ತು 150 ಸ್ಮಾರ್ಟ್ ಫೋನ್ ಗಳನ್ನು ವಶಪಡಿಸಿಕೊಂಡಿರುವ ಹೊಸಕೋಟೆ ಪೊಲೀಸರನ್ನು ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ಅಭಿನಂದಿಸಿದ್ದಾರೆ.
ಬುದ್ಧಿಮಾಂದ್ಯನ ವೇಷದಲ್ಲಿ ಕಳವು: ಬುದ್ಧಿಮಾಂದ್ಯನಂತೆ ನಟಿಸುತ್ತಾ ನಗರದ ವಿವಿಧ ಬಡಾವಣೆಗಳಲ್ಲಿ ಹಾಗೂ ಬಸ್ ನಿಲ್ದಾಣಗಳಲ್ಲಿ ಬಸ್ ಹತ್ತುವ ಹಾಗೂ ಇಳಿಯುವವರ ಗಮನ ಬೇರೆಡೆ ಸೆಳೆದು ಸುಮಾರು 50 ಲಕ್ಷ ಮೌಲ್ಯದ 150ಕ್ಕೂ ಹೆಚ್ಚು ಮೊಬೈಲ್ ಗಳನ್ನು ಬಂಧಿಸಿ ಮೊಬೈಲ್ ಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಕದ್ದ ಮೊಬೈಲ್ ಗಳನ್ನು ಮಾರಾಟ ಮಾಡಿ ಪ್ರವಾಸ ತಾಣಗಳಿಗೆ ತೆರಳಿ ವಿಲಾಸಿ ಜೀವನ ನಡೆಸುತ್ತಿದ್ದ. ಅಲ್ಲದೆ ಮೊಬೈಲ್ ಲಾಕ್ ಗಳನ್ನು ಓಪನ್ ಮಾಡಿ ಗೂಗಲ್ ಪೇ, ಫೋನ್ ಪೇ ಮೂಲಕ ಸುಮಾರು 2 ಲಕ್ಷದ ವರೆಗೂ ಹಣ ಪಡೆದುಕೊಂಡಿದ್ದು ಹೊಸಕೋಟೆ ಠಾಣೆ ಇನ್ಸ್ಪೆಕ್ಟರ್ ಬಿ ಎಸ್ ಅಶೋಕ್ ಹಾಗೂ ಸಿಬ್ಬಂದಿ ಆತನನ್ನು ಬಂಧಿಸಿ ಜೈಲಿಗಟ್ಟಿದ್ದಾರೆ.
ಬೀಗ ಹಾಕಿರುವ ಮನೆಗೆ ಕನ್ನ: ಬೀದಿ ಬೀದಿ ಸುತ್ತಾಡಿ ಬೀಗ ಹಾಕಿರುವ ಮನೆಗಳನ್ನು ಗುರುತಿಸಿ ಮನೆಯಲ್ಲಿ ಯಾರು ಇಲ್ಲವೆಂದು ಖಚಿತಪಡಿಸಿಕೊಂಡು ರಾತ್ರಿ ವೇಳೆ ಕಳ್ಳತನ ಮಾಡುತ್ತಿದ್ದ ಅಂತರಾಜ್ಯ ಕಳ್ಳರನ್ನು ಬಂಧಿಸಿ 40 ಲಕ್ಷ ಮೌಲ್ಯದ 700 ಗ್ರಾಂ ಚಿನ್ನ ವಸಪಡಿಸಿಕೊಳ್ಳಲಾಗಿದೆ.
ಸಹಾಯ ಮಾಡುವ ನಿಬಂಧದಲ್ಲಿ ಕಳವು: ಬಸ್ಸಿನಲ್ಲಿ ಪ್ರಯಾಣಿಸುವ ವಯೋ ವೃದ್ಧರು, ಮಹಿಳೆಯರಿಗೆ ಸಹಾಯ ಮಾಡುವ ನೆಪದಲ್ಲಿ ಅವರ ಗಮನ ಸೆಳೆದು ಕತ್ತಿನಲ್ಲಿದ್ದ ಚಿನ್ನದ ಸರ ಕಳವು ಮಾಡುತ್ತಿದ್ದ ಬೆಂಗಳೂರು ನಗರದ ಗೌರಿಪಾಳ್ಯದ ಪೂರ್ವ ಮಹಿಳೆಯನ್ನು ಬಂಧಿಸಿ 125 ಗ್ರಾಂ ಚಿನ್ನಾಭರಣ ವಶಪಡಿಸಿಕೊಳ್ಳಲಾಗಿದೆ.
ನೀರು ಕೇಳುವ ನೆಪದಲ್ಲಿ ಕಳವು: ನಗರದ ವಿ ಆರ್ ಶೋಭಾ ಮೆಡೋಸ್ ಅಪಾರ್ಟ್ಮೆಂಟ್ನಲ್ಲಿ ಓರ್ವ ವೃದ್ಧ ಮಹಿಳೆಯನ್ನು ನೆರೆಮನೆಯ ವ್ಯಕ್ತಿ ನೀರು ಕೇಳುವ ನೆಪದಲ್ಲಿ ಮನೆಗೆ ನುಗ್ಗಿ ಹಲ್ಲೆ ಮಾಡಿ 80 ಗ್ರಾಂ ತೂಕದ ಮಾಂಗಲ್ಯ ಸರ ಇದು ಪರಾರಿಯಾಗಿದ್ಧವನನ್ನು ಬಂಧಿಸಿ ಮಾಂಗಲ್ಯ ಸರ ವಶಪಡಿಸಿಕೊಡಲಾಗಿದೆ.
ಡಿವೈಎಸ್ಪಿ ಶಂಕರ್ ಗೌಡ ಅಣ್ಣ ಸಾಹೇಬ್ ಪಾಟೀಲ್ ಮಾರ್ಗದರ್ಶನದಲ್ಲಿ ಹೊಸಕೋಟೆ ಠಾಣೆ ಇನ್ಸ್ಪೆಕ್ಟರ್ ಅಶೋಕ್, ಪಿಎಸ್ಐ ಮುನಿರಾಜು, ಅಪರಾಧ ವಿಭಾಗದ ದತ್ತಾತ್ರೇಯ. ಪ್ರಕಾಶ್ ಬಾಬು, ರಮೇಶ್, ನಾಗರಾಜು, ವಿಠಲ್, ಜೋಯಲ್ ಜೋರಾಲ್ಡ್, ಗೋಪಾಲ್, ಮತಿವಣ್ಣನ್, ಜಗನ್ನಾಥ್ ,ಮಹಿಳಾ ಪಿ ಸಿ ಮುಬಾರಕ್ ರನ್ನು ಎಸ್ ಪಿ ಮಲ್ಲಿಕಾರ್ಜುನ ಬಾಲದಂಡಿ, ಎಸ್ ಪಿ ಪುರುಷೋತ್ತಮ್ ಅಭಿನಂದಿಸಿದರು.