ಬೀದರ ಜಿಲ್ಲೆಯ ಹುಮನಾಬಾದ ಪೊಲೀಸ್ ಠಾಣೆಯಲ್ಲಿ 2021 ನೇ ಸಾಲಿನಲ್ಲಿ ಹುಮನಾಬಾದ ಪಟ್ಟಣದ ಜೇರಪೇಟ ಓಣೆಯಲ್ಲಿ ಅಪರಾಧ ನಡೆದಿದ್ದು, ಹುಮನಾಬಾದ ಪೊಲೀಸ್ ಠಾಣೆಯಲ್ಲಿ ಪೊಕ್ಸೋ ಕಾಯ್ದೆ ಅಡಿ ಪ್ರಕರಣವನ್ನು ಅಂದಿನ ಪಿ.ಎಸ್.ಐ ಶ್ರೀ, ರವಿಕುಮಾರ ರವರು ದಾಖಲಿಸಿಕೊಂಡಿದ್ದು, ಪ್ರಕರಣದ ತನಿಖೆಯನ್ನು ಶ್ರೀ, ಮಲ್ಲಿಕಾರ್ಜುನ. ಆರ್ ಯಾತನೂರ ಸಿ.ಪಿ.ಐ. ಹುಮನಾಬಾದ ವೃತ್ತ ರವರು ಶಿಸ್ತು ಬದ್ಧವಾಗಿ ನಡೆಸಿ, ದೊಷಾರೋಪಣೆ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದು, ನ್ಯಾಯಾಲಯದಲ್ಲಿ ಸ್ಪೇಷಲ್.ಸಿ ನಂ: 5011/2021 ರಂತೆ ಶ್ರೀ, ಬಸವಂತರೆಡ್ಡಿ, ಅಪರ ಸರ್ಕಾರಿ ಅಭಿಯೋಜಕರು ಶಿಸ್ತು ಬಧವಾಗಿ ವಾದ ಮಂಡಿಸಿದ್ದರಿಂದ ಮಾನ್ಯ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಬಸವಕಲ್ಯಾಣ ನ್ಯಾಯಾಧಿಶರಾದ ಮಾನ್ಯ ಶ್ರೀ, ರಾಘವೇಂದ್ರ ಎಸ್. ಚನ್ನಬಸಪ್ಪ ರವರು ಆರೋಪಿ ಸಾಯಿಕುಮಾರ ತಂದೆ ವಿಜಯಕುಮಾರ ಮೇತ್ರೆ, ಸಾ: ಜೇರಪೇಟ ಹುಮನಾಬಾದ. ಇತನಿಗೆ 20 ವರ್ಷ ಕಠಿಣ ಕಾರಾಗೃಹವಾಸ ಮತ್ತು 5000=00 ಸಾವಿರ ರೂಪಾಯಿ ದಂಡ ವಿಧಿಸಿರುತ್ತಾರೆ.
ಪ್ರಕರಣದ ತನಿಖೆಯನ್ನು ಶಿಸ್ತು ಬದ್ದವಾಗಿ ತನಿಖೆ ಮಾಡಿ ನ್ಯಾಯಾಲಯಕ್ಕೆ ದೊಷಾರೋಪಣೆ ಪಟ್ಟಿ ಸಲ್ಲಿಸಿದ ಪೊಲೀಸ್ ಅಧಿಕಾರಿ ಶ್ರೀ, ಮಲ್ಲಿಕಾರ್ಜುನ. ಆರ್ ಯಾತನೂರ ಸಿಪಿಐ ಹುಮನಾಬಾದ ವೃತ್ತ. ಸದ್ಯ: ಪಿ.ಐ ಬೀದರ ಗ್ರಾಮೀಣ ಠಾಣೆ ಮತ್ತು ತನಿಖೆಗೆ ಸಹಕರಿಸಿದ ತನಿಖಾ ಸಹಾಯಕ ಶ್ರೀ, ರಮೇಶ ಸಿ.ಹೆಚ್.ಸಿ-826, ಶ್ರೀ ಬಾಬುರಾವ, ಸಿಪಿಸಿ-1619 ಮತ್ತು ಕೋರ್ಟ ಕರ್ತವ್ಯ ನಿರ್ವಹಿಸುತ್ತಿರುವ ಶ್ರೀ, ದೇವಿದಾಸ ಸಿ.ಹೆಚ್.ಸಿ-538 ಹಾಗೂ ಸರಕಾರದ ಪರವಾಗಿ ವಾದ ಮಂಡಿಸಿದ ಶ್ರೀ, ಬಸವಂತರೆಡ್ಡಿ, ಅಪರ ಸರ್ಕಾರಿ ಅಭಿಯೋಜಕ ರವರಿಗೆ ಅಭಿನಂದನೆಗಳು.
ಆಪರೋಪಿತನಿಗೆ ಕಠಿಣ ಶಿಕ್ಷೆ ಕೊಡಿಸುವಲ್ಲಿ ಹಾಗೂ ಅಪರಾಧ ಮುಕ್ತ ಜಿಲ್ಲೆಗೊಳಿಸಲು ಜಿಲ್ಲೆಯ ಪೊಲೀಸರ ಕಾರ್ಯಾಚರಣೆಯು ಮುಂದುವರೆಯುತ್ತದೆ.
ವರದಿ :- ಸಿದ್ದಪ್ಪ ಪಟ್ಟೇದಾರ್