ನವಂಬರ್ 19ರಂದು ಸಂಸ್ಕಾರ್ ಎಂಟರ್ಪ್ರೈಸಸ್ ಮಾಲೀಕ ಅಟ್ಟಿಕಾ ಗೋಲ್ಡ್ ಕಂಪನಿಯಲ್ಲಿ ಚಿನ್ನದ ಗಟ್ಟಿಗಳನ್ನು ಖರೀದಿಸಿ ವಾಪಸ್ಸಾಗುತ್ತಿದ್ದ ವೇಳೆ ಹಲಸೂರು ಗೇಟ್ ಪೊಲೀಸ್ ಠಾಣೆ ವ್ಯಾಪ್ತಿಯ ರಾಜ್ ಹೋಟೆಲ್ ಹತ್ತಿರ ಸಿನಿಮೀಯ ರೀತಿಯಲ್ಲಿ ಬಂದ 7 ಖದೀಮರು, ಲಾಂಗ್ ತೋರಿಸಿ 5 ಕೆಜಿ ಚಿನ್ನವನ್ನು ಎಗರಿಸಿ ಪರಾರಿಯಾಗಿದ್ದರು.
ಈ ಕುರಿತು ದೂರು ದಾಖಲಿಸಿಕೊಂಡಿದ್ದ ಹಲಸೂರು ಗೇಟ್ ಪೊಲೀಸರು, ಆರೋಪಿಗಳಾದ ಮೊಹಮ್ಮದ್ ಪರಾನ್, ಹಂಜುಮ್, ಮೊಹಮ್ಮದ್ ಹುಸೇನ್, ಮೊಹಮ್ಮದ್ ಅರಿಫ್, ಸೊಹೈಲ್ ಬೇಗ್, ಶಾಹಿದ್ ಅಹ್ಮದ್ ಹಾಗೂ ಉಮೇಶ್ ಎನ್ನುವವರನ್ನು ಬಂಧಿಸಿ 5 ಕೆಜಿ ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ. ಪೊಲೀಸರ ಕಾರ್ಯಾಚರಣೆಗೆ ಶ್ಲಾಘನೆ ವ್ಯಕ್ತಪಡಿಸಿರುವ ಕಮಿಷನರ್ ಕಮಲ್ ಪಂತ್, ತನಿಖಾ ತಂಡಕ್ಕೆ 70 ಸಾವಿರ ರೂ. ಬಹುಮಾನ ಘೋಷಿಸಿದ್ದಾರೆ.
ಬೆಂಗಳೂರು ನಗರ ಕೇಂದ್ರ ವಿಭಾಗದ ಮಾನ್ಯ ಡಿ.ಸಿ.ಪಿ ರವರಾದ ಶ್ರೀ .ಎಂ .ಎನ್. ಅನುಚೇತ್ ಐ.ಪಿ.ಎಸ್ ರವರ ಮಾರ್ಗದರ್ಶನದ ಮೇರೆಗೆ ಹಲಸೂರು ಗೇಟ್ ಉಪವಿಭಾಗದ ಶ್ರೀಮತಿ .ನಜ್ಮ ಫಾರೂಕಿ ಕೆ.ಎಸ್. ಪಿ.ಎಸ್. ನೇತತ್ವದಲ್ಲಿ ಹಲಸೂರು ಗೇಟ್ ಪೊಲೀಸ್ ಠಾಣೆ ಪಿ.ಐ. ಶ್ರೀ. ಸಿ ವಿ ದೀಪಕ್, ಶ್ರೀ. ಎನ್ ಸಿ ಮಲ್ಲಿಕಾರ್ಜುನ್ ಪಿ.ಎಸ್ .ಐ., ಶ್ರೀ. ಗೋಪಾಲಕೃಷ್ಣ ಪಿ.ಎಸ್. ಐ., ಶ್ರೀ . ಶಿವಕುಮಾರ್ ಪಿ.ಎಸ್. ಐ., ಮತ್ತು ಸಿಬ್ಬಂದಿ ಅವರುಗಳ ತಂಡ ಮೇಲ್ಕಂಡ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿರುತ್ತಾರೆ ಸಹೋದರಿ ತಂಡದ ಕಾರ್ಯವನ್ನು ಮಾನ್ಯ ಪೊಲೀಸ್ ಆಯುಕ್ತರು ಶ್ರೀ ಕಮಲ್ ಪಂತ್ ಐ .ಪಿ .ಎಸ್ ಬೆಂಗಳೂರು ನಗರ ಮತ್ತು ಮಾನ್ಯ ಅಪರ ಪೊಲೀಸ್ ಆಯುಕ್ತರು ಪ್ರಶಂಸಿಸಿರುತ್ತಾರೆ .
ನಮ್ಮ ಮುಖ್ಯ ವರದಿಗಾರರು ಕರ್ನಾಟಕದಿಂದ,