ಸಂಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯ ಪಟೇಲಪ್ಪ ಲೇಔಟ್ನಲ್ಲಿರುವ ಪಿರ್ಯದಿಯ ಮನೆಯಲ್ಲಿ ದಿನಾಂಕ 27/08/2023 ರಂದು ಮಧ್ಯಾಹ್ನದ ವೇಳೆಯಲ್ಲಿ ಮನೆಯ ಹಿಂಬದಿಯ ಬಾಗಿಲನ್ನು ಮೀಟಿ ಮನೆಯಲ್ಲಿದ್ದ ಚಿನ್ನಾಭರಣಗಳನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಸಂಜಯನಗರ ಪೊಲೀಸ್ ಠಾಣೆಯಲ್ಲಿ ಹಗಲು ಕನ್ನಾ ಕಳವು ಪ್ರಕರಣ ದಾಖಲಾಗಿರುತ್ತದೆ.
ಈ ಪ್ರಕರಣದ ಪತ್ತೆ ಕಾರ್ಯ ಕೈಗೊಂಡ ಪೊಲೀಸರು ಕೃತ್ಯ ನಡೆದ ಸ್ಥಳದ ಸಮೀಪದ ಹಲವಾರು ಸಿ.ಸಿ.
ಟಿವಿ ಹಾಗೂ ಆ ಮಾರ್ಗದಲ್ಲಿ ಕೃತ್ಯ ನಡೆದ ವೇಳೆಯಲ್ಲಿ ಓಡಾಡಿರುವ ಜಿ.ಎಂ.ಟಿ.ಸಿ ಬಸ್ಸುಗಳಲ್ಲಿನ ಸಿ.ಸಿ.
ಕ್ಯಾಮರಾಗಳನ್ನು ಪರಿಶೀಲಿಸಿ, ಆರೋಪಿಯ ಚಹರೆಯನ್ನು ಸಂಗ್ರಹಿಸಿ, ಒಬ್ಬ ಆರೋಪಿಯನ್ನು ವಶಕ್ಕೆ ಪಡೆದು,
ವಿಚಾರಣೆಗೆ ಒಳಪಡಿಸಿದಾಗ, ಆತನು ತನ್ನ ತಪ್ಪನ್ನು ಒಪ್ಪಿಕೊಂಡ ಮೇರೆಗೆ ದಸ್ತಗಿರಿ ಮಾಡಿ, ಆತನಿಂದ
ಸುಮಾರು 10.5 ಲಕ್ಷ ರೂ. ಮೌಲ್ಯದ 211 ಗ್ರಾಂ ತೂಕದ ಚಿನ್ನಾಭರಣವನ್ನು 75 ಸಾವಿರ ನಗದು ಹಣವನ್ನು
ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿರುತ್ತಾರೆ.
ಈ ಪ್ರಕರಣದ ತನಿಖೆಯಿಂದ ಆರೋಪಿತ ಮೇಲೆ 2023 ನೇ ಸಾಲಿನಲ್ಲಿ ಬೆಂಗಳೂರಿನ ಯಶವಂತಪುರ ಪೊಲೀಸ್ ಠಾಣೆಯ ಮನೆ ಕಳವು ಪ್ರಕರಣದಲ್ಲಿ ಜೈಲಿಗೆ ಹೋಗಿ ಬಂದಿರುವುದಾಗಿ ತಿಳಿದು ಬಂದಿರುತ್ತದೆ.
ಈ ಪ್ರಕರಣದ ಪತ್ತೆ ಕಾರ್ಯವನ್ನು ಉತ್ತರ ವಿಭಾಗ ಡಿಸಿಪಿ ಸಾಹೇಬರವರಾದ ಶ್ರೀ. ಶಿವ ಪ್ರಕಾಶ್ ದೇವರಾಜು ರವರ ಮಾರ್ಗದರ್ಶನದಲ್ಲಿ ಶ್ರೀ. ಮನೋಜ್ ಕುಮಾರ್, ಎ.ಸಿ.ಪಿ. ಜೆ.ಸಿ.ನಗರ ಉಪವಿಭಾಗ ರವರ ನೇತೃತ್ವದಲ್ಲಿ, ಸಂಜಯನಗರ ಪೊಲೀಸ್ ಠಾಣೆಯ ಪೊಲೀಸ್ ಇನ್ಸಪೆಕ್ಟರ್ ಶ್ರೀ ಗುರುಪ್ರಸಾದ್.ಎ., ಮತ್ತು
ಸಿಬ್ಬಂದಿಯವರುಗಳು ಆರೋಪಿತರನ್ನು ದಸ್ತಗಿರಿ ಮಾಡಿ, ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿರುತ್ತಾರೆ.
ಈ ಉತ್ತಮ ಕಾರ್ಯವನ್ನು ಬೆಂಗಳೂರು ನಗರದ ಪೊಲೀಸ್ ಆಯುಕ್ತರಾದ ಶ್ರೀ. ಬಿ.ದಯಾನಂದ
ರವರು ಮತ್ತು ಪಶ್ಚಿಮ ವಿಭಾಗದ ಅಪರ ಪೊಲೀಸ್ ಆಯುಕ್ತರಾದ ಶ್ರೀ. ಎನ್.ಸತೀಶ್ ಕುಮಾರ್ ರವರು ಪ್ರಶಂಶಿಸಿರುತ್ತಾರೆ.