ಜ್ಞಾನಭಾರತಿ ಪೊಲೀಸ್ ಠಾಣಾ ಸರಹದ್ದಿನಲ್ಲಿ ಹಗಲು ವೇಳೆಯಲ್ಲಿ ಕಳವು ಪ್ರಕರಣಗಳ ಪತ್ತೆಗಾಗಿ
ನೇಮಿಸಿದ್ದ, ಅಧಿಕಾರಿ ಮತ್ತು ಸಿಬ್ಬಂದಿಗಳು ಠಾಣಾ ಸರಹದ್ದಿನ ಹಳೇ ಎಂ.ಓ ಆಸಾಮಿಯನ್ನು ದಸ್ತಗಿರಿ ಮಾಡಿ, ಆತನು ನೀಡಿದ ಮಾಹಿತಿ ಮೇರೆಗೆ ಸುಮಾರು 59,7 ಗ್ರಾಂ ತೂಕದ ಚಿನ್ನ ಹಾಗೂ 47.68 ಗ್ರಾಂ ತೂಕದ ಬೆಳ್ಳಿ ವಸ್ತುಗಳನ್ನು ವಶಪಡಿಸಿಕೊಂಡಿದ್ದು, ಪ್ರಕರಣವನ್ನು ಭೇದಿಸುವಲ್ಲಿ ಜ್ಞಾನಭಾರತಿ ಪೊಲೀಸರು ಯಶಸ್ವಿಯಾಗಿರುತ್ತಾರೆ. ಇವುಗಳ ಒಟ್ಟು ಮೌಲ್ಯ ಸುಮಾರು ರೂ.3,50,000/-ಆಗಿರುತ್ತದೆ.
ಸದರಿ ಕಾರ್ಯಚರಣೆಯನ್ನು ಬೆಂಗಳೂರು ನಗರದ ಮಾನ್ಯ ಡಿ.ಸಿ.ಪಿ, ಪಶ್ಚಿಮ ರವರಾದ ಶ್ರೀ ಲಕ್ಷ್ಮಣ್ ಬ ನಿಂಬರಗಿ, ಕೆಂಗೇರಿ, ಉಪ ವಿಭಾಗದ ಮಾನ್ಯ ಸಹಾಯಕ ಪೊಲೀಸ್ ಆಯುಕ್ತರಾದ ಶ್ರೀ ಹೆಚ್.ಎಸ್.ಪರಮೇಶ್ವರ್ ರವರುಗಳ ಮಾರ್ಗದರ್ಶನದಲ್ಲಿ ಜ್ಞಾನಭಾರತಿ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಶ್ರೀ, ಸುಬ್ರಮಣಿ,ಕೆ ರವರ ನೇತೃತ್ವದ ಸಿಬ್ಬಂದಿರವರುಗಳು ಆರೋಪಿಯನ್ನು ಪತ್ತೆ ಮಾಡಿರುತ್ತಾರೆ.
ಈ ಉತ್ತಮ ಕಾರ್ಯವನ್ನು ಬೆಂಗಳೂರು ನಗರದ ಹಿರಿಯ ಅಧಿಕಾರಿಗಳು ಶ್ಲಾಘಿಸಿರುತ್ತಾರೆ.
ವರದಿ : ಆಂಟೋನಿ ಬೇಗೂರು