ತಾಲೂಕು ಮಟ್ಟದಲ್ಲಿ ಆಚರಿಸುವ 75ನೇ ಸ್ವಾತ್ರಂತ್ರ್ಯ ದಿನಾಚರಣೆ ಕಾರ್ಯಕ್ರಮವನ್ನು ಆಚರಿಸುವ ಬಗ್ಗೆ ತಾಲೂಕ ಕಛೇರಿ, ಕೊಟ್ಟೂರಿನ ಮಹಾತ್ಮ ಗಾಂಧೀಜಿ ಸಭಾಂಗಣದಲ್ಲಿ ಎಂ ಕುಮಾರಸ್ವಾಮಿ ತಹಶೀಲ್ದಾರರು ಹಾಗೂ ಅಧ್ಯಕ್ಷರು, ರಾಷ್ಟ್ರೀಯ ಹಬ್ಬಗಳ ಸಮಿತಿ, ಕೊಟ್ಟೂರು ಇವರ ಅಧ್ಯಕ್ಷತೆಯಲ್ಲಿ ಸಭೆಯನ್ನು ನಡೆಯಿತು. 15.08.2021 ರಂದು ಬೆಳಿಗ್ಗೆ 8.00 ಗಂಟೆಗೆ ಸರ್ಕಾರಿ ಪದವಿ-ಪೂರ್ವ ಕಾಲೇಜಿನ ಮೈದಾನದಲ್ಲಿ ಧ್ವಜಾರೋಹಣ ಕಾರ್ಯಕ್ರಮವನ್ನು ಕೋವಿಡ್-19 ಹಿನ್ನೆಲೆಯಲ್ಲಿ ಸರಳವಾಗಿ ಆಚರಿಸಲು ತೀರ್ಮಾನಿಸಲಾಯಿತು. ಶಾಲಾ ಮಕ್ಕಳಿಂದ ಸಾಂಸ್ಕ್ರತಿಕ ಕಾರ್ಯಕ್ರಮ ಹಾಗೂ ಪಥಸಂಚಲ ಕಾರ್ಯಕ್ರಮ ನಡೆಸುವುದನ್ನು ಕೈಬಿಡಲಾಗಿದ್ದು, ಪೊಲೀಸ್ ಇಲಾಖೆ, ಗೃಹರಕ್ಷಕ ದಳ ಮತ್ತು ಅಗ್ನಿ ಶಾಮಕ ದಳದಿಂದ ಮಾತ್ರ ಪಥ ಸಂಚಲನ ನಡೆಸಲು ತೀರ್ಮಾನಿಸಲಾಯಿತು. ಸಾಮಾಜಿಕ ಅಂತರ ಕಾಪಾಡಿಕೊಂಡು, ಕಡ್ಡಾಯವಾಗಿ ಎಲ್ಲರೂ ಮಾಸ್ಕ್ ಧರಿಸಿ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ವಿನಂತಿಸಿಕೊಳ್ಳಲಾಯಿತು. ಮೈದಾನದಲ್ಲಿ ಸ್ಯಾನಿಟೈಜರ್ ಮಾಡಿಸಲು ಮುಖ್ಯಾಧಿಕಾರಿಗಳಿಗೆ ಸೂಚಿಸುತ್ತಾ, ಪ್ರಥಮ ಚಿಕಿತ್ಸಾ ಕಿಟ್, ಥರ್ಮಲ್ ಸ್ಕ್ಯಾನರ್ ಹಾಗೂ ಸಿಬ್ಬಂದಿಯೊಂದಿಗೆ 108 ವಾಹನ ನಿಯೋಜಿಸಲು ವೈಧ್ಯಾವಧಿಕಾರಿಗಳಿಗೆ ತಿಳಿಸಲಾಯಿತು. ಕೊರೋನಾ ವಾರಿಯರ್ಸ್ ಗಳನ್ನು ಸನ್ಮಾನಿಸಲು ತೀರ್ಮಾನಿಸಲಾಯಿತು.
ದಿನಾಂಕ: 14.08.2021 ಮತ್ತು 15.08.2021 ರಂದು ಎಲ್ಲಾ ಸರ್ಕಾರಿ ಇಲಾಖಾ ಕಟ್ಟಡಗಳಿಗೆ ದೀಪಾಲಂಕಾರ ಮಾಡುವಂತೆ, ಹಾಗೂ ಎಲ್ಲಾ ಇಲಾಖೆಗಳಲ್ಲಿ ಹಾಗೂ ಶಾಲಾ-ಕಾಲೇಜಿನಲ್ಲಿ ಬೆಳಿಗ್ಗೆ 7.00 ಗಂಟೆಗೆ ಧ್ವಯಜಾರೋಹಣ ನೆರವೇರಿಸುವಂತೆ ತಿಳಿಸಿದರು.
ಸದರಿ ಪೂರ್ವಸಿದ್ದತಾ ಸಭೆಯಲ್ಲಿ ವಿಜಯ ಕುಮಾರ್ ಎಡಿಎ ತಾಲೂಕು ಪಂಚಾಯಿತಿ, ಟಿ ಎಸ್ ಗಿರೀಶ್ , ನಾಗಪ್ಪ ಪಿಎಸ್ಐ, ಬದ್ಯಾನಾಯ್ಕ ವೈಧ್ಯಾಳಧಿಕಾರಿ ಸಮುದಾಯ ಆರೋಗ್ಯ ಕೇಂದ್ರ, ಸುಜಾರ ಉಪಖಜಾನಾಧಿಕಾರಿ, ಬಸವರಾಜ ಉಪಪ್ರಾಚಾರ್ಯರು, ಅಜ್ಜಪ್ಪ ಇಸಿಒ, ಅಣಜಿ ಸಿದ್ದಲಿಂಗಪ್ಪ ಅಧ್ಯಕ್ಷರು ಪ್ರಾ ಶಾ ಶಿಕ್ಷಕರ ಸಂಘ, ಬಸವರಾಜ ಖಜಾಂಚಿ ಕ ರಾ ಸರ್ಕಾರಿ ನೌಕರರ ಸಂಘ, ಪಿ ಬಸವರಾಜ ಎನ್ ಸಿ ಸಿ ಘಟಕ, ಠಾಣಾಧಿಕಾರಿ, ಮನೋಹರಸ್ವಾಮಿ, ಶಶಿಧರ ದೈಹಿಕ ಶಿಕ್ಷಕರು, ವಿವಿಧ ಸಂಘ ಸಂಸ್ಥೆಗಳ ಮುಖಂಡರು, ವಿವಿಧ ಇಲಾಖೆ ಅಧಿಕಾರಿಗಳು ಹಾಜರಿದ್ದರು. ಸಿ ಮ ಗುರುಬಸವರಾಜ ನಿರ್ವಹಿಸಿದರು.
ನಮ್ಮ ಮುಖ್ಯ ವರದಿಗಾರರು ಕರ್ನಾಟಕದಿಂದ,