ದಿನಾಂಕ:-09/07/2023 ರಂದು ಬಾಣಸವಾಡಿ ಪೊಲೀಸ್ ಠಾಣಾ ಸರಹದ್ದಿನ ಕಲ್ಯಾಣನಗರದ ಸರ್ವಿಸ್ ರಸ್ತೆಯಲ್ಲಿ ದ್ವಿಚಕ್ರ ವಾಹನದಲ್ಲಿ ಪ್ರಯಾಣಿಸುತ್ತಿದ್ದ ವಿದ್ಯಾದುದಾರರ ಹೆಂಡತಿಯ ಚಿನ್ನದ ಸರವನ್ನು ಸುಲಿಗೆ ಮಾಡಲು ಪ್ರಯತ್ನ ಮಾಡಿರುತ್ತಾನೆಂದು ನೀಡಿದ ದೂರಿನ ಅನ್ವಯ, ಬಾಣಸವಾಡಿ ಪೊಲೀಸ್ ಠಾಣೆಯಲ್ಲಿ ಸುಲಿಗೆ ಪ್ರಕರಣ ದಾಖಲಿಸಿಕೊಂಡು ಕಾರ್ಯಪ್ರವೃತ್ತರಾದ ಪೊಲೀಸರು, ದಿನಾಂಕ:-19/07/2023 ರಂದು ಒಬ್ಬ ಆರೋಪಿಯನ್ನು ದಸ್ತಗಿರಿ ಮಾಡಿ ಆತನಿಂದ ಸುಮಾರು 5,50,000/-ರೂ ಬೆಲೆಬಾಳುವ 8 ವಿವಿಧ ಕಂಪನಿಯ ದ್ವಿಚಕ್ರ ವಾಹನಗಳು ಹಾಗೂ 8 ಮೊಬೈಲ್ ಫೋನ್ಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಆರೋಪಿಯ ಮಾಹಿತಿ ಮೇರೆಗೆ ಹೆಬ್ಬಾಳ ಪೊಲೀಸ್ ಠಾಣೆ, ತುರುವೇಕೆರೆ ಟೌನ್ ಠಾಣೆಯ ತಲಾ-01 ಪ್ರಕರಣ ಹಾಗೂ ಬಾಣಸವಾಡಿ ಪೊಲೀಸ್ ಠಾಣೆಯ-02 ಪ್ರಕರಣ ಪತ್ತೆಯಾಗಿದ್ದು, ಇತರ ಸ್ಥಳಗಳಲ್ಲಿ 04 ವಾಹನಗಳನ್ನು ಕಳವು ಮಾಡಿದ್ದು ತನಿಖೆ ಮುಂದುವರೆದಿದೆ.
ಬೆಂಗಳೂರು ನಗರ, ಪೂರ್ವ ವಿಭಾಗದ ಉಪ ಪೊಲೀಸ್ ಆಯುಕ್ತರಾದ ಡಾ.ಭೀಮಾಶಂಕರ ಗುಳೇದ, ಐಪಿಎಸ್ ಮತ್ತು ಬಾಣಸವಾಡಿ ಉಪ ವಿಭಾಗದ ಸಹಾಯಕ ಪೊಲೀಸ್ ಆಯುಕ್ತರಾದ ಶ್ರೀ ಉಮಾಶಂಕರ್.ಎ.ಹೆಚ್ ರವರ ಮಾರ್ಗದರ್ಶನದಲ್ಲಿ ಬಾಣಸವಾಡಿ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಶ್ರೀ ಸಂತೋಷ್ ಕುಮಾರ್ ರವರ ನೇತೃತ್ವದ ಸಿಬ್ಬಂದಿಯವರ ತಂಡ ಆರೋಪಿಗಳನ್ನು ದಸ್ತು ಮಾಡುವಲ್ಲಿ ಯಶಸ್ವಿಯಾಗಿರುತ್ತಾರೆ.
ಈ ಉತ್ತಮ ಕಾರ್ಯವನ್ನು ಬೆಂಗಳೂರು ನಗರದ ಪೊಲೀಸ್ ಆಯುಕ್ತರಾದ ಶ್ರೀ. ಬಿ.ದಯಾನಂದ ರವರು ಮತ್ತು ಪೂರ್ವ ವಿಭಾಗದ ಅಪರ ಪೊಲೀಸ್ ಆಯುಕ್ತರಾದ ಶ್ರೀ. ರಮನ್ ಗುಪ್ತಾ ರವರು ಶ್ಲಾಘಿಸಿರುತ್ತಾರೆ.