ಬೆಂಗಳೂರು: ನೂರಾರು ಕೋಟಿ ಕೋಟಿ ಸಾಲ ಕೊಡಿಸುವುದಾಗಿ ವಂಚಿಸಿ ಪರಾರಿಯಾಗಿದ್ದ ಐವರು ಅಂತಾರಾಜ್ಯ ವಂಚಕರನ್ನು ಸುದ್ದಗುಂಟೆಪಾಳ್ಯ ಪೊಲೀಸರು ಬಂಧಿಸಿದ್ದಾರೆ.
ಪ್ರಮುಖ ಆರೋಪಿ ಆರೋಪಿ ಅಬ್ದುಲ್ ಜಮಾಕ್ ಸೈಯದ್ ಇಬ್ರಾಹಿಂ ಅಲಿಯಾಸ್ ಹ್ಯಾಮ್ ಸ್ಟ್ರಾಂಗ್, ವಿವೇಕ್, ಶಿವರಾಮ್, ರಘುವರನ್ ಹಾಗೂ ಕ್ರಿಸ್ಟೋಫರ್ ಬಂಧಿತ ಆರೋಪಿಗಳು. ಬಂಧಿತರಿಂದ 36 ಲಕ್ಷ ರೂ. ನಗದು ಮತ್ತು 8.5 ಕೆ.ಜಿ. ತೂಕದ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ.ಬಂಧಿತ ಆರೋಪಿಗಳು ಉದ್ಯಮಿಗಳಾದ ಗಿರೀಶ್ ಹಾಗೂ ಪಣಿತರನ್ ಅವರಿಗೆ 390 ಕೋಟಿ ಸಾಲ ಕೊಡಿಸುವ ಭರವಸೆ ನೀಡಿದ್ದರು. 390 ಕೋಟಿ ಲೋನ್ ನೀಡಲು 5 ಕೋಟಿ 80 ಲಕ್ಷ ರೂ. ಮುಂಗಡ ಬಡ್ಡಿ ಹಣ ನೀಡಬೇಕು ಎಂದು ಹಣ ಪಡೆದಿದ್ದ ಆರೋಪಿಗಳು ಎಸ್ಕೇಪ್ ಆಗಿದ್ದರು. ಹಣ ಕಳೆದುಕೊಂಡಿದ್ದ ಗಿರೀಶ್ ಮತ್ತು ಪಣಿತರನ್ ಸುದ್ದಗುಂಟೆಪಾಳ್ಯ ಠಾಣೆಯಲ್ಲಿ ವಂಚನೆ ಪ್ರಕರಣ ದಾಖಲಿಸಿದ್ದರು.
ಶ್ರೀ .ಶ್ರೀನಾಥ್ ಎಂ .ಜೋಷಿ ಉಪ ಪೊಲೀಸ್ ಆಯುಕ್ತರು ಅಗ್ನಿಯ ವಿಭಾಗ ಬೆಂಗಳೂರು ಹಾಗೂ ಶ್ರೀ .ಎಂ ಎನ್ ಕರಿಬಸವನಗೌಡ ಸಹಾಯಕ ಪೊಲೀಸ್ ಆಯುಕ್ತರು ಮೈಕೋ ಲೇಔಟ್ ಉಪ ವಿಭಾಗ ಬೆಂಗಳೂರು ಇವರ ಮಾರ್ಗದರ್ಶನದಲ್ಲಿ ಶ್ರೀ. ಡಿ .ಎನ್.ನಟರಾಜ್ ಪೊಲೀಸ್ ಇನ್ಸ್ ಪೆಕ್ಟರ್ ಸುದ್ದುಗುಂಟೆಪಾಳ್ಯ ಪೊಲೀಸ್ ಠಾಣೆ ಹಾಗೂ ಅವರ ಸಿಬ್ಬಂದಿ ಮಾರ್ಗದವರು ಪ್ರಕರಣ ದಾಖಲಾದ 1ತಿಂಗಳ ಒಳಗಾಗಿಯೇ ಕೇರಳ ಮತ್ತು ತಮಿಳುನಾಡು ರಾಜ್ಯದಲ್ಲಿ ಯಶಸ್ವಿ ಕಾರ್ಯಾಚರಣೆಯನ್ನು ನಡೆಸಿ ಆಪಾದಿತರನ್ನು ದಸ್ತಗಿರಿ ಮಾಡಿ ಮೇಲ್ಕಂಡಂತೆ ಚಿನ್ನ ,ನಗದು ಕಾರುಗಳು ಅಮಾನತ್ತುಪಡಿಸಿಕೊಂಡು ಹಾಗೂ ಕಂಪನಿಯ ಅಕೌಂಟ್ ಅನ್ನು ಫ್ರೀಜ್ ಮಾಡಿಸುವ ಮುಖಾಂತರ ಉತ್ತಮ ಕಾರ್ಯವನ್ನು ಮಾಡಿರುತ್ತಾರೆ .
ಈ ಕಾರ್ಯಾಚರಣೆಯಲ್ಲಿ ಸುದ್ದಗುಂಟೆಪಾಳ್ಯ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ಶ್ರೀ .ನಟರಾಜ್ ಅವರೊಂದಿಗೆ ಅವರ ಠಾಣೆಯ ಪಿ.ಎಸ್.ಐ ಸುರೇಂದ್ರ ಚಾರ್ ,ಎ. ಎಸ್. ಐ. ಗಳಾದ ರಾಘವೇಂದ್ರ ,ಚಿಕ್ಕವೆಂಕಟ ಶೆಟ್ಟಿ , ಹೆಡ್ ಕಾನ್ ಸ್ಟೆಬಲ್ ಗಳಾದ ಜಯಕುಮಾರ್, ವೀರಭದ್ರಪ್ಪ ,ನಯಾಜ್ ಅಹ್ಮದ್, ಪ್ರಶಾಂತ್ ,ಸಿದ್ಧರಾಜು ,ಸತೀಶ್ ಹಾಗೂ ಪಿ ಸಿ ಗಳಾದ ವೇನು ಹರೀಶ್ ರುದ್ರೇಶ್ ಇವರುಗಳು ಪಾಲ್ಗೊಂಡಿರುತ್ತಾರೆ .
ಈ ಕಾರ್ಯಾಚರಣೆಯನ್ನು ಬೆಂಗಳೂರು ನಗರ ಪೊಲೀಸ್ ಕಮಿಷನರ್ ಹಾಗೂ ಅಪರ ಪೊಲೀಸ್ ಕಮಿಷನರ್ ಪೂರ್ವ ಇವರು ಮೆಚ್ಚುಗೆ ವ್ಯಕ್ತಪಡಿಸುತ್ತಾರೆ .